16 集

ಜಗತ್ತನ್ನು ಬೆರಗು ಕಣ್ಣಿನಿಂದ ನೋಡುತ್ತಾ ಪ್ರಶ್ನೆಗಳು, ಪ್ರಯೋಗ, ವೀಕ್ಷಣೆಯ ಮೂಲಕವೇ ವಿಜ್ಞಾನವನ್ನು ಕಲಿಯುವ ದಾರಿಯನ್ನು ಆಪ್ತವಾಗಿಸುವ ಪ್ರಯತ್ನವಿದು. ವಿಜ್ಞಾನದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು , ಹೇಗೆ, ಏಕೆ ಮುಂತಾದ ಪ್ರಶ್ನೆಗಳನ್ನು ಕಟ್ಟಿಕೊಳ್ಳಲು, ಅಂತಹ ಪ್ರಶ್ನೆಗಳನ್ನು ಕೇಳಲು ಅನುಕೂಲವಾಗುವಂತೆ ಶ್ರವ್ಯಾನುಭವವನ್ನು‌ ಒದಗಿಸುವ ಪುಟ್ಟ ಪುಟ್ಟ ಧ್ವನಿ ಮುದ್ರಿಕೆಗಳು ಇಲ್ಲಿವೆ.

Uday Gaonkar Uday Gaonkar

    • 兒童與家庭

ಜಗತ್ತನ್ನು ಬೆರಗು ಕಣ್ಣಿನಿಂದ ನೋಡುತ್ತಾ ಪ್ರಶ್ನೆಗಳು, ಪ್ರಯೋಗ, ವೀಕ್ಷಣೆಯ ಮೂಲಕವೇ ವಿಜ್ಞಾನವನ್ನು ಕಲಿಯುವ ದಾರಿಯನ್ನು ಆಪ್ತವಾಗಿಸುವ ಪ್ರಯತ್ನವಿದು. ವಿಜ್ಞಾನದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು , ಹೇಗೆ, ಏಕೆ ಮುಂತಾದ ಪ್ರಶ್ನೆಗಳನ್ನು ಕಟ್ಟಿಕೊಳ್ಳಲು, ಅಂತಹ ಪ್ರಶ್ನೆಗಳನ್ನು ಕೇಳಲು ಅನುಕೂಲವಾಗುವಂತೆ ಶ್ರವ್ಯಾನುಭವವನ್ನು‌ ಒದಗಿಸುವ ಪುಟ್ಟ ಪುಟ್ಟ ಧ್ವನಿ ಮುದ್ರಿಕೆಗಳು ಇಲ್ಲಿವೆ.

    ಗ್ರಂಥಾಲಯಕ್ಕೆ ಗೋಡೆಗಳಿಲ್ಲ

    ಗ್ರಂಥಾಲಯಕ್ಕೆ ಗೋಡೆಗಳಿಲ್ಲ

    ಗ್ರಂಥಾಲಯಕ್ಕೆ ಗೋಡೆಗಳಿಲ್ಲ..


    ಇಲ್ಲ ಇಲ್ಲ ಇಲ್ಲವೇ ಇಲ್ಲ
    ಗ್ರಂಥಾಲಯಕ್ಕೆ ಗೋಡೆಗಳಿಲ್ಲ..
    ಅಕಾಶಕ್ಕೆ ಅಂಚುಗಳಿಲ್ಲ
    ಕನಸು ಕಪಾಟಿಗೆ ಬಾಗಿಲೇ ಇಲ್ಲ


    ಓದುವೆ ನಾನು ಈ ಜಗವನ್ನು
    ತೆರೆಯುವೆ ಈಗಲೆ ಹೊಸ ಪುಟವನ್ನು
    ಹಾಳೆಯ ತುಂಬಾ ಹರಡಿದೆ ನೋಡು
    ನೀಲಿ ಬಾನು, ಹಸುರಿನ ಕಾನು

    ಇಲ್ಲ ಇಲ್ಲ ಇಲ್ಲವೇ ಇಲ್ಲ
    ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

    ಕಟ್ಟುವೆ ನಾನು ಪುಸ್ತಕ ಸೇತುವೆ,
    ಪ್ರೀತಿ ಪದಗಳ ಮನೆಯನ್ನು
    ಅಜ್ಜನು ಅಜ್ಜಿಯು ಅಮ್ಮ, ಅಪ್ಪನು
    ತೆರೆಯುತ ಹೋಗುವೆ ಬದುಕನ್ನು

    ಇಲ್ಲ ಇಲ್ಲ ಇಲ್ಲವೇ ಇಲ್ಲ
    ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

    ಆಡುವೆ ಅಲ್ಲಿ, ಓಡುವೆ ಇಲ್ಲಿ
    ಭೂಮ್ಯಾಕಾಶದ ಬಯಲಲ್ಲಿ.
    ಮಾತು, ಮೋಜು, ಹಾಡು ಎಲ್ಲ
    ಪುಸ್ತಕವೆಂದರೆ ಅಕ್ಷರವಲ್ಲ.

    ಇಲ್ಲ ಇಲ್ಲ ಇಲ್ಲವೇ ಇಲ್ಲ
    ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

    ಬದುಕಿನ ಹೊಲದಲಿ ಮಮತೆಯ ತೋಟ
    ಬಿತ್ತುವೆ ಈಗ ಪ್ರೀತಿಯ ಬೀಜ
    ಬೆಳೆಯುವೆ ನಾನು ಸ್ನೇಹದ ಫಸಲು,
    ಹರಡುವೆ ಎಲ್ಲೆಡೆ ಓದಿನ ಘಮಲು.

    ಇಲ್ಲ ಇಲ್ಲ ಇಲ್ಲವೇ ಇಲ್ಲ
    ಗ್ರಂಥಾಲಯಕ್ಕೆ ಗೋಡೆಗಳಿಲ್ಲ..
    ಉದಯ ಗಾಂವಕಾರ

    • 3 分鐘
    ಭಿನ್ನ ಸಾಮರ್ಥ್ಯದ ನನ್ನ ಮಗ

    ಭಿನ್ನ ಸಾಮರ್ಥ್ಯದ ನನ್ನ ಮಗ

    ಕಲಿಕೆಯ ನ್ಯೂನತೆಯನ್ನು ಗುರುತಿಸಲಾಗದ ಕಾರಣಕ್ಕೆ ಅಂತ‌ ಮಕ್ಕಳು ಪೋಷಕರು ಮತ್ತು ಶಿಕ್ಷಕರರಿಂದ ಬೈಗುಳು ಪಡೆಯುತ್ತಾರೆ. ಕೆಲವು ಸಲ ಹೆತ್ತವರೂ ಮಕ್ಕಳಿಂದಾಗಿ ಶಿಕ್ಷಕರ ಕೋಪಕ್ಕೆ ತುತ್ತಾಗಬೇಕಾಗುತ್ತದೆ. ಜೈವಿಕ ಕಾರಣಕ್ಕಾಗಿ ನಿರ್ದಿಷ್ಟ ಕಲಿಕೆಯಲ್ಲಿ ತೊಂದರೆ ಅನುಭವಿಸುವ ಮಕ್ಕಳು ಸುಖಾಸುಮ್ಮನೆ ಅವಮಾನಕ್ಕೊಳಗಾಗುವುದು ತೀರಾ ಸಾಮಾನ್ಯ ಎಂಬಂತಾಗಿದೆ. ಇದು ಅಂತಹ ಮಗುವಿನ ತಾಯಿಯೊಬ್ಬರ ಮಾತು.

    • 12 分鐘
    ಕನ್ನಡದೋಳ್ ಭಾವಿಸಿದ ಜನಪದಂ- ಹವ್ಯಕ ಕನ್ನಡ

    ಕನ್ನಡದೋಳ್ ಭಾವಿಸಿದ ಜನಪದಂ- ಹವ್ಯಕ ಕನ್ನಡ

    ಕನ್ನಡದ ನುಡಿಯೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಏಕಶಿಲೆಯಂತಹ ಭಾಷೆಯಲ್ಲ. ಹಾಗೆ ನೋಡಿದರೆ, ಕನ್ನಡವೆಂಬುದು ಒಂದೇ ಒಂದು ಭಾಷೆಯೂ ಅಲ್ಲ. ಈ ಮಾತನ್ನು ಎಲ್ಲ ಭಾಷೆಗಳಿಗೂ ಅನ್ವಯಿಸಬಹುದು. ಹಲವು ಆಡುರೂಪುಗಳು, ಹತ್ತಾರು ಭಾಷೆಗಳಿಂದ ಎರವಲು ಪಡೆದ ಪದಗಳು, ಹಲವು ಬಗೆಯ ಧ್ವನಿ ಸಂಚಾರಗಳು, ಭಿನ್ನ ದೇಹಭಾಷೆಗಳು ಹೀಗೆ, ಕನ್ನಡಕ್ಕೆ ದಕ್ಕಿರುವ ಬಹು ಆಯಾಮಗಳ ಚೆಂದವನ್ನು ಕನ್ನಡ ಮಾಸ ನವೆಂಬರಿನಲ್ಲಿ ಟೀಚರ್ ಪತ್ರಿಕೆ ಸಂಭ್ರಮಿಸುತ್ತದೆ. ಕವಿಯತ್ರಿ ಸುಧಾ ಆಡುಕಳ ಅವರ ಹವ್ಯಕ ಕನ್ನಡದ ಬರೆಹಕ್ಕೆ ಶಿಕ್ಷಕಿ, ಬರೆಹಗಾರ್ತಿ ಪ್ರತಿಮಾ ಕೋಮಾರ್ ದನಿಯಾಗಿದ್ದಾರೆ

    • 3 分鐘
    ಕನ್ನಡದೋಳ್ ಭಾವಿಸಿದ ಜನಪದಂ- ಹೊಸಪೇಟೆ ಕನ್ನಡ

    ಕನ್ನಡದೋಳ್ ಭಾವಿಸಿದ ಜನಪದಂ- ಹೊಸಪೇಟೆ ಕನ್ನಡ

    ಕನ್ನಡದ ನುಡಿಯೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಏಕಶಿಲೆಯಂತಹ ಭಾಷೆಯಲ್ಲ. ಹಾಗೆ ನೋಡಿದರೆ, ಕನ್ನಡವೆಂಬುದು ಒಂದೇ ಒಂದು ಭಾಷೆಯೂ ಅಲ್ಲ. ಈ ಮಾತನ್ನು ಎಲ್ಲ ಭಾಷೆಗಳಿಗೂ ಅನ್ವಯಿಸಬಹುದು. ಹಲವು ಆಡುರೂಪುಗಳು, ಹತ್ತಾರು ಭಾಷೆಗಳಿಂದ ಎರವಲು ಪಡೆದ ಪದಗಳು, ಹಲವು ಬಗೆಯ ಧ್ವನಿ ಸಂಚಾರಗಳು, ಭಿನ್ನ ದೇಹಭಾಷೆಗಳು ಹೀಗೆ, ಕನ್ನಡಕ್ಕೆ ದಕ್ಕಿರುವ ಬಹು ಆಯಾಮಗಳ ಚೆಂದವನ್ನು ಕನ್ನಡ ಮಾಸ ನವೆಂಬರಿನಲ್ಲಿ *ಟೀಚರ್ ಪತ್ರಿಕೆ* ಸಂಭ್ರಮಿಸುತ್ತದೆ.
    ಹಾವೇರಿಯವರಾದ ಸುಜಾತಾ ಗಿಡ್ಡಪ್ಪಗೌಡ್ರು ಕಲಿತದ್ದು ಧಾರವಾಡದಲ್ಲಿ. ಈಗಿರುವುದು ಹೊಸಪೇಟೆಯ ಕಮಲಾಪುರದಲ್ಲಿ. ಉತ್ತರ ಕರ್ನಾಟಕದ ಎಲ್ಲ ಕಡೆಗಳಲ್ಲೂ ಧಾರವಾಡ ಕನ್ನಡ ಮಾತಾನಾಡುತ್ತಾರೆಂಬ ತಪ್ಪುತಿಳುವಳಿಕೆ ಎಲ್ಲರಲ್ಲಿದೆ. ಬೀದರಿನ ಕನ್ನಡವೇ ಬೇರೆ ಹೊಸಪೇಟೆಯ ಕನ್ನಡವೇ ಬೇರೆ.

    • 4 分鐘
    ಕನ್ನಡದೋಳ್ ಭಾವಿಸಿದ ಜನಪದಂ-ಕುಂದಾಪ್ರ ಕನ್ನಡ

    ಕನ್ನಡದೋಳ್ ಭಾವಿಸಿದ ಜನಪದಂ-ಕುಂದಾಪ್ರ ಕನ್ನಡ

    ಕನ್ನಡದ ಬದುಕೆಂದರೆ ಒಂದು ಭಾಷಿಕ ಸಮುದಾಯವಷ್ಟೇ ಅಲ್ಲ. ಕನ್ನಡವೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಒಂದೇ ಒಂದು ಭಾಷೆಯಲ್ಲ. ಕನ್ನಡದ ಅನುಭವದಲ್ಲಿ ಹಲವು ಆಡುರೂಪಗಳಿವೆ. ಎಲ್ಲ ಆಡುರೂಪಗಳೂ ಮುಖ್ಯ. ಕೃಷ್ಣ ಡಿ.ಎಸ್ ಕುಂದಾಪ್ರ ಕನ್ನಡದ ತಮ್ಮದೇ ಬರೆಹವನ್ನು ವಾಚಿಸಿದ್ದಾರೆ. ಈ ಬರೆಹ ಹೇಗೆ ಮಕ್ಕಳ ಮೇಲೆ ಸಮಾಜವು ಮೇಲು- ಕೀಳೆಂಬ ಜಾತಿಪ್ರಜ್ಞೆಯನ್ನು ತುಂಬಿಸುತ್ತದೆ ಎಂಬುದನ್ನು ಪುಟ್ಟ ಪ್ರಸಂಗದ ಮೂಲಕ ಕಟ್ಟಿಕೊಡುತ್ತದೆ.

    • 6 分鐘
    ಕನ್ನಡದೋಳ್ ಭಾವಿಸಿದ ಜನಪದಂ- ಮಂಗಳೂರು ಕನ್ನಡ

    ಕನ್ನಡದೋಳ್ ಭಾವಿಸಿದ ಜನಪದಂ- ಮಂಗಳೂರು ಕನ್ನಡ

    ಕನ್ನಡದ ಬದುಕೆಂದರೆ ಒಂದು ಭಾಷಿಕ ಸಮುದಾಯವಷ್ಟೇ ಅಲ್ಲ. ಕನ್ನಡವೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಒಂದೇ ಒಂದು ಭಾಷೆಯಲ್ಲ. ಕನ್ನಡದ ಅನುಭವದಲ್ಲಿ ಹಲವು ಆಡುರೂಪಗಳಿವೆ. ಎಲ್ಲ ಆಡುರೂಪಗಳೂ ಮುಖ್ಯ. ಮಂಗಳೂರು ಕನ್ನಡದ ಪ್ರೇಮನಾಥ‌ ಮರ್ಣೆಯವರ ಬರೆಹವನ್ನು ಅಕ್ಷತಾ ಕುಡ್ಲ ಸೊಗಸಾಗಿ ವಾಚಿಸಿದ್ದಾರೆ.

    • 7 分鐘

關於兒童與家庭的熱門 Podcast

懶瞓豬講故事SleepyPigStory
粒粒工作室
Brains On! Science podcast for kids
American Public Media
Lingokids: Stories for Kids —Learn life lessons and laugh!
Lingokids
Wow in the World
Tinkercast | Wondery
Circle Round
WBUR
Greeking Out from National Geographic Kids
National Geographic Kids