3 episodes

A socio-cultural podcast
ಸಾಮಾಜಿಕ-ಸಾಂಸ್ಕೃತಿಕ ವಿಷಯಗಳ ವಿನಿಮಯಕ್ಕಾಗಿ ಈ ಪಾಡ್ ಕಾಸ್ಟ್ ಆರಂಭಿಸಿದ್ದೇನೆ. ಆಸಕ್ತರು ಫಾಲೋ ಮಾಡಲು ವಿನಂತಿ.

SANKULA I ಸಂಕು‪ಲ‬ Harsha

    • Society & Culture

A socio-cultural podcast
ಸಾಮಾಜಿಕ-ಸಾಂಸ್ಕೃತಿಕ ವಿಷಯಗಳ ವಿನಿಮಯಕ್ಕಾಗಿ ಈ ಪಾಡ್ ಕಾಸ್ಟ್ ಆರಂಭಿಸಿದ್ದೇನೆ. ಆಸಕ್ತರು ಫಾಲೋ ಮಾಡಲು ವಿನಂತಿ.

    ಎಲ್ಲರೂ ಜಿಗಣೆಗಳೇ ನನ್ನ ನೆತ್ತರಿಗೆ- ಕುವೆಂಪು ಅವರ “ರೈತನ ದೃಷ್ಟಿ” ಕವಿತೆ

    ಎಲ್ಲರೂ ಜಿಗಣೆಗಳೇ ನನ್ನ ನೆತ್ತರಿಗೆ- ಕುವೆಂಪು ಅವರ “ರೈತನ ದೃಷ್ಟಿ” ಕವಿತೆ

    ರೈತನ ದೃಷ್ಟಿ
    ಕರಿಯರದೊ ಬಿಳಿಯರದೊ ಯಾರದಾದರೆ ಏನು?
         ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ !
    ವಿಜಯನಗರವೊ? ಮೊಗಲರಾಳ್ವಿಕೆಯೊ? ಇಂಗ್ಲಿಷರೊ?
         ಎಲ್ಲರೂ ಜಿಗಣೆಗಳೆ  ನನ್ನ ನೆತ್ತರಿಗೆ!
    ಕತ್ತಿ ಪರದೀಶಿಯಾದರೆ ಮಾತ್ರ ನೋವೆ?
    ನಮ್ಮವರೇ ಹದಹಾಕಿ ತಿವಿದರದು ಹೂವೆ?

    ಸೋಮಾರಿಗಳಿಗೆ ಸುಖಿಗಳಿಗೆ ರಸಿಕರಿಗಲ್ತೆ
         ಸಾಮ್ರಾಜ್ಯವೆಂಬುದದು ಕಾಮಧೇನು?
    ನೃಪ ಎಂಬ ಹೆಸರೊಡನೆ ಮುಡಿಯೊಂದನಾಂತೊಡನೆ  
         ಕಳ್ಳರೊಡೆಯನು ಕೃಪೆಯ ಮೂರ್ತಿಯೇನು?
    ತಿಂದುಂಡು ಮೆರೆವವರ ಮೆರವಣಿಗೆಗಾನು
    ಬಾಯ್ದೆರೆದು ನೋಳ್ಪ ಬೆಪ್ಪಾಗಬೇಕೇನು?

    ಹರಕೆ ಯಾರದೋ? ಹಬ್ಬವಾರಿಗೋ? ಅದಾವಗಂ
         ಸಾಮ್ರಾಜ್ಯಕಾಳಿಗಾನಲ್ತೆ ಕುರಿ ಕೊಲೆಗೆ? 
     ಕುಯ್ಗುರಿಯನೆಂತಂತೆ ಸಾವು ಬದುಕಿನ ನಡುವೆ
         ಕರುಣೆ ಗರಗಸದಿಂದೆ ಸೀಳುವರು ಬೆಲೆಗೆ.
    ಸಾಕೆನಗೆ, ಸಾಕಯ್ಯ, ಸಾಮ್ರಾಜ್ಯ ಪೂಜೆ;
    ಸಿಡಿಮದ್ದಿನಕ್ಷತೆಗೆ ಗುಂಡು ಚರೆ ಲಾಜೆ!

    ನೇಗಿಲಿನ ಮೇಲಾಣೆ! ಬಸವಗಳ ಮೇಲಾಣೆ!
         ನೆತ್ತರಿಲ್ಲದೆ ಸುಕ್ಕಿ ಸೊರಗಿದೆನ್ನಾಣೆ!
    ಸಾಮ್ರಾಜ್ಯ ಶೂರ್ಪನಖಿ ಮೋಹಿನಿಯ ರೂಪಕ್ಕೆ
         ಮರುಳಾಗೆನೆಂದಿಗೂ, ಸೀತೆ ಮೇಲಾಣೆ!
    ಬಡತನದ ಗೊಬ್ಬರವನನುದಿನಂ ಹೀರಿ
    ಹಿಡಿಸದೋ ಸಾಮ್ರಾಜ್ಯ ಸಿರಿಯ ಕಸ್ತೂರಿ!

                              - ಕುವೆಂಪು
     ('ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನ ಸಂಕಲನದಿಂದ)

    • 5 min
    ಬಂಜಾರಾ- ಮೂರಾಲಾ ಮಾರವಾಡಾ ಮತ್ತು ನಿರಾಲಿ ಕಾರ್ತಿಕ್ ಅವರ ಸೂಫಿ ಗಾಯನ

    ಬಂಜಾರಾ- ಮೂರಾಲಾ ಮಾರವಾಡಾ ಮತ್ತು ನಿರಾಲಿ ಕಾರ್ತಿಕ್ ಅವರ ಸೂಫಿ ಗಾಯನ

    ಗುಜರಾತಿನ ಕಚ್ ನಲ್ಲಿರುವ ಧೋಲವೀರದ ಅದ್ಭುತ ಸೂಫಿ ಗಾಯಕ ಮೂರಾಲಾಲಾ ಮಾರ್ವಾಡಾ. ಸೂಫಿ ಸಂತ ಕಬೀರ ರಚಿಸಿರುವ ಗೀತೆಯೊಂದನ್ನು ಮೂರಾಲಾಲಾ ಮರವಾಡಾ ಅವರೊಂದಿಗೆ ಪ್ರಸಿದ್ಧ ಗಾಯಕಿ ನಿರಾಲಿ ಕಾರ್ತಿಕ್ ಅವರು ಸೇರಿ ಹಾಡಿರುವ ಈ ಗೀತೆ ವಿಶಿಷ್ಟವಾಗಿದೆ ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುವಂತಿದೆ. ಈ ಗೀತೆಯ ಸಂಯೋಜನೆ, ಸಂಗೀತ, ರೆಕಾರ್ಡಿಂಗ್ ಎಲ್ಲವೂ "ಮಾತಿ ಬಾನಿ" ಎಂಬ ತಂಡ 2012ರಲ್ಲಿ ನಡೆಸಿರುವಂತದ್ದು.
    ಈ ಗೀತೆಯ ಇಂಗ್ಲಿಷ್ ಅನುವಾದ ಇಲ್ಲಿದೆ.
    The millstone of life goes on moving, Kabir weeps
    Between the layers of truth and untruth, no one is spared
    The millstone of life goes on moving, Kabir observes
    He who holds the anchor of His name, will always remain unhurt!
    Dont leave me now, O Breath, I am a wanderer!
    Still have to travel faraway lands
    O the one who is asleep, awake!
    Our Master has made this body like a palace,
    And He played the instrument of breath within!
    Our Master has made this body like a garden,
    And how He' s filled it with a bowl of flowers!
    Says Kabir he who follows the truth
    Will attain the kingdom of immortality!

    • 4 min
    ಪ್ರೊ.ಲಿಂಗದೇವರು ಹಳೆಮನೆಯವರೊಂದಿಗೆ ಹರ್ಷಕುಮಾರ್ ಕುಗ್ವೆ ಸಂದರ್ಶನ (2011)

    ಪ್ರೊ.ಲಿಂಗದೇವರು ಹಳೆಮನೆಯವರೊಂದಿಗೆ ಹರ್ಷಕುಮಾರ್ ಕುಗ್ವೆ ಸಂದರ್ಶನ (2011)

    ದಿ. ಪ್ರೊ. ಲಿಂಗದೇವರು ಹಳೆಮನೆಯವರು ನಾಡು ಕಂಡು ಒಬ್ಬ ಉತ್ತಮ ವಿದ್ವಾಂಸರು. 2011ರಲ್ಲಿ ಅವರು ಮೈಸೂರಿನ ರಂಗಾಯಣದ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಆ ಸಂದರ್ಭದಲ್ಲಿ ಅವರನ್ನು ದ ಸಂಡೇ ಇಂಡಿಯನ್ ಪತ್ರಿಕೆಗಾಗಿ ನಾನು ಸಂದರ್ಶನ ನಡೆಸಿದ್ದೆ. ಅದರ ಆಡಿಯೋ ಮುದ್ರಿಕೆ ಇಲ್ಲಿದೆ. ಕೇಳಿ.

    • 43 min

Top Podcasts In Society & Culture

فنجان مع عبدالرحمن أبومالح
ثمانية/ thmanyah
بودكاست طمئن
Samar
Bidon Waraq | بدون ورق
بودكاست السندباد
بودكاست صحب
بودكاست صحب
كنبة السبت
Mics | مايكس
جناية
Mics | مايكس