
Appacha Kavi and Kodava Literature| ಅಪ್ಪಚ್ಚ ಕವಿ ಹಾಗು ಕೊಡವ ಸಾಹಿತ್ಯ
In this episode of Noorakke Nooru Karnataka, Varsha Ramachandra travels into the hills of Kodagu and into the ‘ainmane’ of Appacha Kavi — the first great playwright of Kodava Takk. Born in 1868 into the Appaneravanda family, Appacha Kavi grew up in a culture where song, story and ritual formed the backbone of community life. Kodagu’s oral traditions — from the Baalo Paat sung at festivals to the Thaali Paat at marriages and the poignant Chaav Paat at funerals — still shape how the community celebrates, mourns and remembers.
Against this backdrop, Appacha Kavi composed plays such as Yayaati Rajanda Nataka, Sree Subrahmanya Mahathmye and Sati Savitri, capturing the rhythms, characters and landscapes of Kodagu in a dramatic form at a time when Kodava Takk had no written literary tradition of its own.
Appacha Kavi’s life also reveals how fragile cultural memory can be. A devastating fire in the 1920s destroyed much of his work, and his genius remained largely unrecognised during his lifetime.
This episode also places him alongside Nadikerianda Chinnappa’s Pattole Palame (1924), the monumental compilation of Kodava customs, proverbs and folksongs. If Appacha Kavi gave the language its first modern dramas, Pattole Palame gave it its encyclopaedia of rituals and verse — preserving the voices of countless unnamed singers.
Through conversations with scholars and cultural custodians such as Bacharanianda P. Appanna, Dr. Mullengada Revathi Poovaiah, Mullengada Madhosh Poovaiah, Mullengada Shankari Ponnappa and Mookonda Nitin Kushalappa, the episode explores why these oral forms still matter — and why they need urgent care.
Kodava Takk today is spoken by barely one lakh people, making it one of India’s more vulnerable languages. Yet in weddings, harvests and funerals, these songs still rise, connecting young Kodavas to their elders and landscapes. By standing inside Appacha Kavi’s ainmane, revisiting Pattole Palame and listening to the echoes of Kodagu’s oral traditions, we glimpse a culture that is both endangered and resilient — a living world of word and melody that continues to shape Kodagu’s identity.
ಕೊಡವ ಭಾಷೆ ಅಥವಾ ಕೊಡವ ತಕ್ಕ್ ಅನ್ನು ಇಂದು ಕೇವಲ ಒಂದು ಲಕ್ಷ ಜನರಷ್ಟು ಮಾತನಾಡುತ್ತಾರೆ ಮತ್ತು ಯುನೆಸ್ಕೋ ಇದನ್ನು ಅಳಿವಿನ ಅಂಚಿಗೆ ಬಂದಿರುವ ಭಾಷೆಯೆಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ, ನೂರಕ್ಕೆ ನೂರು ಕರ್ನಾಟಕದ ಈ ಸಂಚಿಕೆಯಲ್ಲಿ, ವರ್ಷಾ ರಾಮಚಂದ್ರ ಕೊಡಗಿನ ಹಸಿರಿನ ಮಧ್ಯದಲ್ಲಿ ಕೊಡವ ಭಾಷೆಯ ಮೊದಲ ಶ್ರೇಷ್ಠ ನಾಟಕಕಾರ ಅಪ್ಪಚ್ಚ ಕವಿಯ ಐನ್ಮನೆಗೆ ಪ್ರಯಾಣಿಸುತ್ತಾರೆ. 1868 ರಲ್ಲಿ ಅಪ್ಪನೆರವಂಡ ಕುಟುಂಬದಲ್ಲಿ ಜನಿಸಿದ ಅಪ್ಪಚ್ಚ ಕವಿ, ಹಾಡು, ಕಥೆ ಮತ್ತು ಆಚರಣೆ ಸಮುದಾಯದ ಬೆನ್ನೆಲುಬಾಗಿ ರೂಪುಗೊಂಡ ಸಂಸ್ಕೃತಿಯಲ್ಲಿ ಬೆಳೆದರು. ಕೊಡಗಿನ ಮೌಖಿಕ ಸಂಪ್ರದಾಯಗಳು - ಹಬ್ಬಗಳಲ್ಲಿ ಹಾಡುವ ಬಾಳೋ ಪಾಟ್‌ನಿಂದ ಮದುವೆಗಳಲ್ಲಿನ ತಾಳಿ ಪಾಟ್ ಮತ್ತು ಅಂತ್ಯಕ್ರಿಯೆಯ ಚಾವ್ ಪಾಟ್ - ಒಂದು ಸಮುದಾಯ ಸುಖ-ದುಃಖಗಳನ್ನು ಹೇಗೆ ಆಚರಿಸುತ್ತದೆ ಎಂಬುದನ್ನು ಇಂದಿಗೂ ರೂಪಿಸುತ್ತವೆ.
ಈ ಸಂಚಿಕೆಯು ಕೊಡವ ಪದ್ಧತಿಗಳು, ಗಾದೆಗಳು ಮತ್ತು ಜಾನಪದ ಗೀತೆಗಳ ಸ್ಮಾರಕ ಸಂಕಲನವಾಗಿರುವ, ನಡಿಕೇರಿಯಂಡ ಚಿನ್ನಪ್ಪ ಅವರ "ಪಟ್ಟೋಲೆ ಪಳಮೆ" (1924) ಗ್ರಂಥವನ್ನು ಸಹ ಸ್ಮರಿಸುತ್ತದೆ. ಅಪ್ಪಚ್ಚ ಕವಿ ಕೊಡವ ಭಾಷೆಗೆ ಅದರ ಮೊದಲ ಆಧುನಿಕ ನಾಟಕಗಳನ್ನು ನೀಡಿದರೆ, ಪಟ್ಟೋಲೆ ಪಳಮೆ ಅದಕ್ಕೆ ಆಚರಣೆಗಳು ಮತ್ತು ಪದ್ಯಗಳ ವಿಶ್ವಕೋಶವನ್ನು ನೀಡಿತು.
ಬಾಚರಣಿಯಂಡ ಪಿ. ಅಪ್ಪಣ್ಣ, ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಮುಲ್ಲೇಂಗಡ ಮಾಧೋಷ್ ಪೂವಯ್ಯ, ಮುಲ್ಲೇಂಗಡ ಶಂಕರಿ ಪೊನ್ನಪ್ಪ ಮತ್ತು ಮೂಕೊಂಡ ನಿತಿನ್ ಕುಶಾಲಪ್ಪ ಅವರಂತಹ ಕೊಡವ ಭಾಷೆ-ಪರಂಪರೆಯ ತಜ್ಞರ ಜೊತೆಗಿನ ಸಂಭಾಷಣೆಗಳ ಮೂಲಕ, ಈ ಮೌಖಿಕ ರೂಪಗಳು ಇನ್ನೂ ಏಕೆ ಮುಖ್ಯವಾಗಿವೆ ಮತ್ತು ಅವುಗಳಿಗೆ ತುರ್ತು ಗಮನ ಕೊಡುವ ಅಗತ್ಯದ ಬಗ್ಗೆ ಈ ಸಂಚಿಕೆಯು ಪರಿಶೋಧಿಸುತ್ತದೆ.
Credits
Akshay Ramuhalli, Bruce Lee Mani, Gorveck Thokchom, Kishor Mandal, Kruthika Rao, Narayan Krishnaswamy, Prashant Vasudevan, Ram Seshadri, Sananda Dasgupta, Sanoob Puliyanchali, Seema Seth, Shraddha Gautam, Supriya Joshi, and Velu Shankar.
資訊
- 節目
- 頻道
- 發佈時間2025年9月20日 下午12:00 [UTC]
- 長度31 分鐘
- 季數1
- 集數12
- 年齡分級兒少適宜