Sanatana Spiritual Society Girish Chandra Ananthanarayana
-
- Education
In this podcast, I would love to cover various aspects of Sanatana Dharma - from simple shlokaas for Children to Mankutimmana Kagga to Vishnu Sahasranama to Suktaas to Bhagawad Gita.
-
Mankutimmana Kagga 187
ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆಬಿಡಿಜೀವ ಸಂಗಾತಿಜೀವಗಳನರಸಿಪಡೆದಂದು ಪೂರ್ಣವದು – ಮಂಕುತಿಮ್ಮ
-
Mankutimmana Kagga 566
ಆರಣ್ಯಕದ ಪುಷ್ಪಗಳ ಮೂಸುವವರಾರು? ।
ಆರಿಹರು ಪತಗದುಡುಪನು ಹುಡುಕಿ ಮಚ್ಚಲ್? ॥ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ ।
ಸ್ವಾರಸ್ಯವೆಸಗುವಳೊ! – ಮಂಕುತಿಮ್ಮ ॥ ೫೬೬ ॥ -
Mankutimmana Kagga 553
ಚೂರುಗಳು ಹದಿನಾರು ಚಂದ್ರಮಂಡಲಕಂತೆ ।ನೂರಾರು ಚೂರುಗಳು ಸತ್ಯಚಂದ್ರನವು ।।ಸೇರಿಸುತಳವುಗಳನು ಬಗೆಯರಿತು ಬೆಳೆಸುತಿರೆ ।ಸಾರ ಋತಪೂರ್ಣಿಮೆಯೊ – ಮಂಕುತಿಮ್ಮ ।।
-
-
Mankutimmana Kagga - 84
ಅಣು ಭೂತ ಭೂಗೋಳ ತಾರಾಂಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನು ತನ್ನ ಕೃತಿಕಂತುಕವನದರೊ||
ಳಣಗಿರ್ದು ಪರಬೊಮ್ಮ – ಮಂಕುತಿಮ್ಮ || 84
ಅಣು = ಅತ್ಯನ್ತ ಸಣ್ಣದಾದದ್ದು ಭೂತ = (ಇಲ್ಲಿ) ಬೃಹತ್ತಾದದು, ತಾರಾಂಬರಾದಿಗಳ = ನಕ್ಷತ್ರ ಗಗನಗಳು, ಅಣಿಮಾಡಿ = ಸಿದ್ಧಪಡಿಸಿ, ಬಿಗಿದು = ಒಂದು ಸೂತ್ರದಲ್ಲಿ ಬಂದಿಸಿ, ನಸು = ಸ್ವಲ್ಪ, ಸಡಿಲವನುಮಿರಿಸಿ = ಸಡಿಲವನು ಇರಿಸಿ, ಕೃತಿಕಂತುಕವನದರೊಳಣಗಿರ್ದು= ಅವನು ಮಾಡಿದ ಈ ಸೃಷ್ಟಿಯೆಂಬ ಚೆಂಡಿನೊಳಗೆ ತಾನೂ ಸೇರಿಕೊಂಡು. -
Mankutimmana Kagga - 361
ಧಾರಿಣಿಯ ವಾಸಿಗಳ್ಗಿಹುದೊಂದು ಹಿತವಾರ್ತೆ |
ಆರವ್ಯುದಾರ್ತರ್ ಅತ್ಯಾರ್ತರಾಪದವ॥
ರೌರವಿಗೆ ಹಿತ ಮಹಾರೌರವಿಯ ಗೋಳುದನಿ ।
ನಾರಕದೊಳದುಪಾಯ – ಮಂಕುತಿಮ್ಮ ॥ 361
ವಾಸಿಗಳ್ಗಿಹುದೊಂದು = ವಾಸಿಗಳಿಗೆ+ಇಹುದು+ಒಂದು, ಆರವ್ಯುದಾರ್ತರ್ = ಆರವ್ಯುದು+ಆರ್ತರ್, ಅತ್ಯಾರ್ತರಾಪದವ = ಅತಿ+ಆರ್ತರ+ಆಪದವ, ನಾರಕದೊಳುದುಪಾಯ= ನಾರಕದೊಳು+ಅದು+ಉಪಾಯ.
ಧಾರಿಣಿ = ಭೂಮಿ, ಜಗತ್ತು, ಆರವ್ಯುದು = ವಿಚಾರಮಾಡುವುದು,ಆರ್ತರ್=ಸಂಕಟದಿಂದ ಗೋಳಾಡುವವರು, ಅತ್ಯಾರ್ತರ್= ಅತಿಯಾಗಿ ಗೋಳಾಡುವವರು, ರೌರವಿ=ನರಕದಂತ ಕಷ್ಟ ಅನುಭವಿಸುವವನು, ನಾರಕದೊಳುದುಪಾಯ=ಹಿಂಸೆಯಲ್ಲೂ ಒಂದು ಉಪಾಯ.