ಕಂತು ೨: ಟಕಟಕ ಜೋಕು, ಇನ್ನೂ ಬೇಕು ! Knock-Knock Jokes! -ನಾಕು ಜೋಕು, ಬೇಕೇ ಬೇಕು !

Secret of Kannada ಕನ್ನಡದ ಗುಟ್ಟು Kannadada Guttu

👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠⁠

👁️ ⁠⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠⁠ 

📧 ⁠⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠⁠⁠

📞 ⁠⁠⁠Subscribe to WhatsApp ಕನ್ನಡ ಕಂಪು

ಇಗೋ! ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಾಕ್-ನಾಕು ಜೋಕುಗಳು! ಮಕ್ಕಳಿಗೆ ಮುದ ನೀಡುವ knock-knock ಜೋಕುಗಳು ಇಂಗ್ಲಿಷಲ್ಲಿ ಸರ್ವೇ ಸಾಮಾನ್ಯ. ೨೦ನೆ ಶತಮಾನದ ಆರಂಭದಿಂದಲೆ ಅಮೆರಿಕದ ಇತಿಹಾಸದಲ್ಲಿ ಚಿಗುರೊಡೆದ ನಾಕ್-ನಾಕು ಜೋಕುಗಳು ಇಂದೂ ಜನಪ್ರಿಯವಾಗಿವೆ. ವಿಶೇಷವಾಗಿ ಮಕ್ಕಳಿಗೆ ಪ್ರಿಯವಾದರೂ, ದೊಡ್ಡವರನ್ನೂ ನಗಿಸಬಹುದು. ಇವು ಹಾಸ್ಯ ಚಟಾಕಿಗಳೋ, ಮಕ್ಕಳ ಮುದ್ದು ಮಾತುಗಳೋ ಅಥವ ಪೆದ್ದು ಗೊಜಗುಟ್ಟುವಿಕೆಗಳೋ ಇನ್ನೂ ಇತ್ಯರ್ಥವಾಗಿಲ್ಲ! [ಹೆಚ್ಚಿನ ಮಾಹಿತಿಗೆ: ಕೆಳಗೆ ನಮೂದಿಸಿರುವ ನ್ಯಾಶನಲ್‌ ಪಬ್ಲಿಕ್‌ ರೇಡಿಯೋದ ಲೇಖನವನ್ನು ಓದಿ. [https://www.npr.org/sections/npr-history-dept/2015/03/03/389865887/the-secret-history-of-knock-knock-jokes] ಕನ್ನಡದಲ್ಲಿ ಇವು ಮೊದಲ ನಾಕ್-ನಾಕು ಜೋಕುಗಳು ಎನ್ನಬಹುದು. ಓದಿ ನಲಿಯಿರಿ. ಇಂಥ ಅಥವ ಬೇರೆ ತರಹದ ನಾಕು ನಾಕ್-ನಾಕು ಜೋಕುಗಳನ್ನು ನೀವೂ ರಚಿಸಿ, ಕಾಮೆಂಟು ಹಾಕಿರಿ. ಮಾದರಿ ಜೋಕುಗಳು ಬೇಕಾಗಿದ್ದರೆ, "knock-knock Jokes" ಅಂತ ಗೂಗಲಿಸದರೆ ಸಾವಿರಾರು ಜೋಕುಗಳು ಸಿಗುತ್ತವೆ [https://www.google.com/search?q=knock+knock+jokes] ಎಚ್ಚರಿಕೆ! ನಾಕು-ನಾಕು ಜೋಕುಗಳನ್ನು ಬೇರೆ ಭಾಷೆಯಿಂದ ಕಾಪಿ ಹೊಡೆಯಲು ಸಾಧ್ಯವಿಲ್ಲ! ಕೆಳಗಿನವುಗಳನ್ನು ಮಾದರಿಯಾಗಿ ಇಟ್ಟುಕೊಂಡು ಸ್ವಂತ ಟಕ-ಟಕ ಯಾ ಕಟ-ಕಟ ಜೋಕುಗಳನ್ನು ಕಟ್ಟಿರಿ ಯಾ ಕುಟ್ಟಿರಿ. ಇಲ್ಲಿನ ಕೆಲವು ಜೋಕುಗಳು, ಕನ್ನಡ ಕಲಿ ಮ್ಯಗ್‌ಝೀನ್‌ ಸಂಪುಟ ೧, ಸಂಚಿಕೆ ೨, ಜೂನ್ ೨೦೦೬, ರಲ್ಲಿ ಪ್ರಕಟವಾಗಿದ್ದವು. [https://www.scribd.com/doc/36032085/V01I02-Kannada-Kali-ಕನ-ನಡ-ಕಲಿ-June-2006] ಪುಟ ೫ರಲ್ಲಿ ಪ್ರಕಟವಾಗಿದ್ದವು -------- ಕಂತು ೨ -------- ಟಕ-ಟಕ, ಟಕ್ ಯಾರು ಅಲ್ಲಿ? ದ್ರಾಕ್ಷಿ. ಯಾರು ದ್ರಾಕ್ಷಿ? ಕೊಳ್ಳಾಗಿನ ರುದ್ರಾಕ್ಷಿ ಸರ!‌ ಟಕ-ಟಕ, ಟಕ್ ಯಾರು ಅದು? ಮಾರಿ. ಯಾ ಮಾರಿ? ಸೈಬರ್‌ ಕಳ್ಳಿ! ಟಕ-ಟಕ, ಟಕ್ ಯಾರು ಅಲ್ಲಿ? ಒತ್ತು. ಯಾ ಒತ್ತು? ಯಾವತ್ತು ಆದರೆ ಏನು? ಇವತ್ತೇ! ಟಕ-ಟಕ, ಟಕ್ ಯಾರು ಅದು? ದನ. ಯಾರೋ ದನ? ಅಳುತ್ತ ಕೂತಿರೋ ರೋದನ! ಟಕ-ಟಕ, ಟಕ್ ಯಾರು ಅದು? ಮಿನಿ. ಯಾ ಮಿನಿ? ರಾತ್ರಿ ಬರುವವಳು! ಟಕ-ಟಕ, ಟಕ್ ಯಾರು ಅಲ್ಲಿ? ಮತ್ತ. ಮತ್ ಯಾರು? ಮತ್ಯಾರು? ನಾನೇ!! ಟಕ-ಟಕ, ಟಕ್ ಯಾರು ಅದು? ಹತ್ತ. ಹತ್ ಯಾರು? ಹೌದು, ಹತ್ಯಾರು, ಇರೀತೀನಿ ಹುಷಾರು!! ಟಕ-ಟಕ, ಟಕ್ ಯಾರು ಅದು? ನಾ. ನಾ ಯಾರು? ನಾಯರು, ನಾ ಗೋವಿಂದ ನಾಯರು, ನೀ ಯಾರು? --- ಕನ್ನಡ ಕಲಿ ಬಿತ್ತರಿಕೆ ಸಪ್ಟಂಬರ ೨೭, ೨೦೨೪ Kannada Kali Bittarike September 27, 2024 ಟಕಟಕ ಜೋಕು : ಇನ್ನೂ ಬೇಕು ನಾಕ್-ನಾಕು ಜೋಕು : ಬೇಕೇ ಬೇಕು ಕಂತು ೧ ಜೋಕು ನಿರೂಪಕರು: ಗಗನ ಗೂಗ್ಲೆ ಮತ್ತು ಸಪ್ನಾ ಗೂಗ್ಲೆ

Content Restricted

This episode can’t be played on the web in your country or region.

To listen to explicit episodes, sign in.

Stay up to date with this show

Sign in or sign up to follow shows, save episodes, and get the latest updates.

Select a country or region

Africa, Middle East, and India

Asia Pacific

Europe

Latin America and the Caribbean

The United States and Canada