Gandhi: Part 3 - What You Said ಗಾಂಧಿ - ಕಂತು ೩ : ನಿಮ್ಮ ಏನಂತಿಗಳು

👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
📞 Subscribe to WhatsApp ಕನ್ನಡ ಕಂಪು ಮಹಾತ್ಮ ಗಾಂಧಿ - ಕಂತು ೩ : ಒಪ್ಪು - ತಪ್ಪು : ನಿಮ್ಮ ಏನಂತಿಗಳು ಗಾಂಧಿ ಮಹಾತ್ಮನೆ? ಗಾಂಧಿ ಮಾಡಿದ್ದೆಲ್ಲ ಸರಿಯೆ? ನಾವು ಎಡವಿದೆವೆ? ಲಾಭ ಆದದ್ದು ಅಗುತ್ತಿರುವುದು ಯಾರಿಗೆ? ಗಾಂಧಿ ಲೇಖನಕ್ಕೆ ಮತ್ತು ಗಾಂಧಿಯ ಬಗ್ಗೆ ಸೈದ್ಧಾಂತಿಕ ಮತ್ತು ವ್ಯಾವಹಾರಿಕ ನೆಲೆಗಳಲ್ಲಿ ವಿಚಾರಪೂರ್ಣ ಏನಂತಿಗಳನ್ನು ನಿಖರ ನುಡಿಗಳಲ್ಲಿ ಹಂಚಿಕೊಂಡ ಕೆ.ಪಿ. ರವಿಕುಮಾರ್, ಹೊಳಲ್ಕೆರೆ ಆರ್. ಲಕ್ಷ್ಮೀವೆಂಕಟೇಶ, ಶ್ರೀನಿವಾಸ ಭಟ್, ಶ್ರೀನಿವಾಸ ಹೆಬ್ಬಾಳ, ಕೆ.ಟಿ. ಶೆಟ್ಟಿ, ಸ್ಮಿತಾ, ಮತ್ತು ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಿದ ಎಲ್ಲ ಕನ್ನಡ ಕಲಿ ಓದುಗರಿಗೆ ನಮನಗಳು. ೧. ಸತ್ಯಾಸತ್ಯತೆ ಗಾಂಧಿ ಲೇಖನಕ್ಕೆ ಪ್ರತಿಕ್ರಿಯೆಯಿಸುತ್ತ "ಮಾಹಿತಿ ಪೂರ್ಣ ಲೇಖನ, ಒಳ್ಳೆಯ ಲೇಖನ " ಎಂದು ಸ್ಮಿತಾ ಅವರಿಗೆ ಅನಿಸಿದರೆ, ಕೆ. ಟಿ. ಶೆಟ್ಟಿ ಹೇಳುತ್ತಾರೆ, "ಕೆಲವು ಸತ್ಯ, ಕೆಲವು ಅರ್ಧ ಸತ್ಯ, ಇನ್ನು ಕೆಲವು ಪ್ರಶ್ನಾರ್ಥಕ ಸತ್ಯ." ಆದರೂ, "ಒಟ್ಟಿನಲ್ಲಿ ಗಾಂಧಿ ಒಬ್ಬ ಮಹಾತ್ಮನಾದ ಮಾನವ, ಮನುಕುಲಕ್ಕೊಂದು ಆದರ್ಶ!" ಎಂದು ಒಪ್ಪಿಕೊಳ್ಳುತ್ತಾರೆ. ಶ್ರೀನಿವಾಸ ಭಟ್ಟರು ಗಾಂಧಿ ಪ್ರಯೋಗಿಸಿದ ಮೂರು ಪರಮಾಸ್ತ್ರಗಳನ್ನು ಗುರುತಿಸಿದ್ದರೆ, ಅದರಿಂದ "ಗಾಂಧಿ ಮಹಾತ್ಮನಾಗಲು ಬಯಸಿರಲಿಲ್ಲ!" ಎಂದು ಹೊಳಲ್ಕೆರೆ ಆರ್. ಲಕ್ಷ್ಮೀವೆಂಕಟೇಶ ಒತ್ತಿ ಹೇಳುತ್ತಾರೆ. "ತುಂಬ ಸುಂದರ ನಿರೂಪಣೆ ಮತ್ತು ವ್ಯಾಖ್ಯಾನ. ಗಾಂಧೀಜಿಯವರ ಬಗ್ಗೆ ದೈವಿಕ ಭಾವ ಅಲ್ಲಗಳೆದರೂ ಅಭಿಮಾನ ತುಂಬಿಕೊಂಡಿದೆ. ಇಲ್ಲ ಇಲ್ಲ ಎಂದುಕೊಂಡೂ ರೋಚಕತೆಯೇ ಹೆಚ್ಚು, ಮುಕ್ತ ಆಲೋಚನೆ ಕಡಿಮೆ" ಎನ್ನುವುದು ಶ್ರೀನಿವಾಸ ಹೆಬ್ಬಾಳರ ಅನಿಸಿಕೆ. "ಲೇಖನ ಗಾಂಧಿಯವರ ತಾತ್ವಿಕ ಸೋಲುಗಳನ್ನು ದಾಖಲಿಸುವುದರಲ್ಲಿ ವಿಫಲವಾಗಿದೆ" ಎಂದು ವಿವರಿಸುತ್ತಾರೆ ಕೆ.ಪಿ. ರವಿಕುಮಾರ್. ೨. ಗಾಂಧಿ ಮಹಾತ್ಮನಾಗಲು ಬಯಸಿರಲಿಲ್ಲ! ಹೊಳಲ್ಕೆರೆ ಆರ್. ಲಕ್ಷ್ಮೀವೆಂಕಟೇಶ ಹೀಗೆ ಹೇಳುತ್ತಾರೆ "ಗಾಂಧಿ ಒಬ್ಬ ಮುಗ್ಧ, ಹೆಚ್ಚು ತಿಳಿಯದ, ಬಲಶಾಲಿಯಲ್ಲದ, ದುಷ್ಟ ಶಕ್ತಿಗಳಿಗೆ ಹೆದರುವ, ... ಹೀಗೆ, ಭಾರತದ ಇತರ ಎಲ್ಲ ಯುವಕರಂತೆಯೆ ಇದ್ದ. ನಮ್ಮ, ವೈಯಕ್ತಿಕ ಮತ್ತು ರಾಷ್ಟ್ರದ, ಹಿತಕ್ಕಾಗಿ ಗಾಂಧಿಯನ್ನು ಬಳಸಿಕೊಂಡೆವು (ಬಳಸಿಕೊಳ್ಳುತ್ತಿದ್ದೇವೆ.) "ಗಾಂಧಿಯಿಂದಲೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಇಲ್ಲದಿದ್ದರೆ ನಾವು ನಮ್ಮ (ವಸುಧೈವ ಕುಟುಂಬಕಂ, ಇತ್ಯಾದಿ) ಸ್ವಂತ ಬೋಧನೆಗಳನ್ನು ಅರ್ಥಮಾಡಿಕೊಳ್ಳದೆ ಗುಲಾಮರಾಗಿ ಬಳಲುತ್ತಿದ್ದೆವು. ನಮ್ಮೆಲ್ಲರಂತೆ, ಗಾಂಧಿಯೂ ವಿದೇಶಿ ಪದವಿಯನ್ನು (ಕಾನೂನಿನಲ್ಲಿ) ಗಳಿಸಲು ಸಲಹೆ ಪಡೆದರು. ತಮ್ಮ ಸುಮಾರು ೧೭ನೇ ಎಳೆ ವಯಸ್ಸಿನಲ್ಲಿ , ಅವರ ತಾಯಿ ದೈನಂದಿನ ಪೂಜೆ ಮಾಡುವಾಗ ಹಾಡುತ್ತಿದ್ದ ಕೀರ್ತನೆಗಳನ್ನು ಹೊರತುಪಡಿಸಿ, ಅವರಿಗೆ ಭಾರತದ ಬಗ್ಗೆ - ಭಗವದ್ಗೀತೆ ಅಥವಾ ಯಾವುದೇ ಮಹಾಕಾವ್ಯಗಳ ಬಗ್ಗೆ - ಏನೂ ತಿಳಿದಿರಲಿಲ್ಲ. ಎಲ್ಲರಂತೆ, ಮನೆಯಿಂದ ಹೊರಬಂದ ನಂತರ, ಜಗತ್ತನ್ನು ಎದುರಿಸಲು ಪ್ರಯತ್ನಿಸುತ್ತಿರುವಾಗ, ಇಂಗ್ಲೆಂಡ್‌ನಲ್ಲಿ ಕಂಡ ಕೆಲವು ಕ್ರಿಶ್ಚಿಯನ್ನರು, ಪಾದ್ರಿಗಳು ಹಿಂದೂ ಧರ್ಮಗ್ರಂಥಗಳಲ್ಲಿ ಏನು ಹೇಳಲಾಗಿದೆ ಎಂದು ತಿಳಿದುಕೊಳ್ಳಲು ಸಹಜವಾಗಿ ಪ್ರಶ್ನಿಸಿದರು. ಏನನ್ನೂ ಹೇಳಲು ಸಾಧ್ಯವಾಗದ ಗಾಂಧಿ ಆಘಾತಕ್ಕೊಳಗಾದರು. ಅದಕ್ಕೆ, ಅವರು ಇಂಗ್ಲೆಂಡ್‌ನ ಪ್ರಮುಖ ವಕೀಲರಾದ ಸರ್ ಫಿರೋಜ್ ಶಾ ಮೆಹ್ತಾ ಅವರಂತಹ ಕೆಲವು ಭಾರತೀಯ ಸ್ನೇಹಿತರನ್ನು ಸಂಪರ್ಕಿಸಿದರು ಮತ್ತು ಗ್ರಂಥಾಲಯಗಳಿಗೆ ಭೇಟಿ ನೀಡುವುದನ್ನು ಆರಂಭಿಸಿದರು. ಸುಮಾರು ಒಂದು ವಾರ ಅಧ್ಯಯನ ಮಾಡಿದ ನಂತರ ನಮ್ಮ ಮಹಾಕಾವ್ಯಗಳ ಬಗ್ಗೆ ಹೇಳುವ ಭಗವದ್ಗೀತೆ ಎನ್ನುವ ಒಂದು ಸಂಕ್ಷಿಪ್ತ ಪಠ್ಯ ಇದೆ ಎಂದು ತಿಳಿಯಿತು. ಅವನ್ನು ತನ್ನ ಕ್ರಿಶ್ಚಿಯನ್ ಸ್ನೇಹಿತರೊಂದಿಗೆ ಚರ್ಚಿಸತೊಡಗಿದಾಗ ತನಗೆ ಎಷ್ಟು ತಿಳಿದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಗಾಂಧಿಯ ಕಾನೂನು ಮತ್ತಿತರ ಮಾನವೀಯ ಪಠ್ಯ ಪುಸ್ತಕಗಳ ಹೊರತಾದ ಕಲಿಕೆ ಪ್ರಾರಂಭವಾದ್ದು ಹೀಗೆ. "ದಕ್ಷಿಣ ಆಫ್ರಿಕಾದ ರೈಲಿನಲ್ಲಿ ಪ್ರಯಾಣಿಸುವಾಗ, ತನ್ನ ಕಂಪಾರ್ಟ್‌ಮೆಂಟ್‌ನಿಂದ ಹೊರಹಾಕಲ್ಪಟ್ಟಾಗ ಅನುಭವಿಸಿದ ನಿಜ ನೋವು ಗಾಂಧಿಯ ಪ್ರಪಂಚದ ದೃಷ್ಟಿಕೋನದ ಬದಲಾವಣೆಗೆ ಕ್ರಮೇಣ ಕಾರಣವಾಯ್ತ; ಅದೇ, ಅಂತಿಮವಾಗಿ, ತಾಯಿ ಭಾರತಿಯ ಭವಿಷ್ಯವನ್ನು ಬದಲಾಯಿಸಿತು. "ಭಾರತವು ೧೮೫೭ ರಿಂದ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡುತ್ತಿದ್ದರೂ, ಯಾವುದೇ ಸಂಘಟಿತ ಹೋರಾಟ ಇರಲಿಲ್ಲ. ತಿಲಕ್, ಗೋಖಲೆ, ಸಾವರ್ಕರ್ ಅಥವಾ ಬೋಸ್ ಮತ್ತಿತರರ ಎಲ್ಲ ಹೋರಾಟಗಳು ಅಲ್ಪಕಾಲಿಕವಾಗಿದ್ದವು. ನಿಜವಾದ ಬಲಿಷ್ಠ ಮತ್ತು ಸಮರ್ಥ ನಾಯಕತ್ವ ಗಾಂಧಿಯವರಿಂದಲೇ ಲಭ್ಯವಾಯಿತು. ಬ್ರಿಟಿಷರನ್ನು ಅರಿತು ಮತ್ತು ಬ್ರಿಟಿಷರ ನೀತಿಗಳನ್ನು ಅರ್ಥಮಾಡಿಕೊಂಡಿದ್ದರಿಂದ ಪ್ರತಿ-ಹೋರಾಟವನ್ನು ನಡೆಸಲು ಗಾಂಧಿ ಶಕ್ತರಾಗಿದ್ದರು. ಅದಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದರು. ಅವರ ಕೌಟುಂಬಿಕ ಜೀವನ ನಾಶವಾಯಿತು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿಲ್ಲ.
Information
- Show
- PublishedJune 1, 2024 at 7:00 AM UTC
- Length14 min
- RatingClean