76 episodes

Explore varied topics to unlock the secrets of Kannada Language
ಕನ್ನಡದ ಗುಟ್ಟನ್ನು ರಟ್ಟು ಮಾಡುವ ವಿವಿಧ ವಿಷಯಗಳ ವಿಚಾರ
Read at http://kannadakali.com
Watch at http://youtube.com/channel/UCCON6n4lEgj6NsPqCLZdDSw
Kannada Kali : Kannadada Guttu Support this podcast: https://podcasters.spotify.com/pod/show/kannadakali/support

Secret of Kannada ಕನ್ನಡದ ಗುಟ್ಟು Kannadada Guttu Vishweshwar Dixit

    • Education

Explore varied topics to unlock the secrets of Kannada Language
ಕನ್ನಡದ ಗುಟ್ಟನ್ನು ರಟ್ಟು ಮಾಡುವ ವಿವಿಧ ವಿಷಯಗಳ ವಿಚಾರ
Read at http://kannadakali.com
Watch at http://youtube.com/channel/UCCON6n4lEgj6NsPqCLZdDSw
Kannada Kali : Kannadada Guttu Support this podcast: https://podcasters.spotify.com/pod/show/kannadakali/support

    Gandhi: Part 3 - What You Said ಗಾಂಧಿ - ಕಂತು ೩ : ನಿಮ್ಮ ಏನಂತಿಗಳು

    Gandhi: Part 3 - What You Said ಗಾಂಧಿ - ಕಂತು ೩ : ನಿಮ್ಮ ಏನಂತಿಗಳು

    👍 Like it? ...... ⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠

    👁️ ⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠ 

    📧 ⁠⁠⁠⁠⁠⁠⁠⁠⁠⁠⁠⁠Subscribe to our newsletter

    📞 Subscribe to WhatsApp ಕನ್ನಡ ಕಂಪು

    ಮಹಾತ್ಮ ಗಾಂಧಿ - ಕಂತು ೩ : ಒಪ್ಪು - ತಪ್ಪು : ನಿಮ್ಮ ಏನಂತಿಗಳು

    ಗಾಂಧಿ ಮಹಾತ್ಮನೆ? ಗಾಂಧಿ ಮಾಡಿದ್ದೆಲ್ಲ ಸರಿಯೆ? ನಾವು ಎಡವಿದೆವೆ? ಲಾಭ ಆದದ್ದು ಅಗುತ್ತಿರುವುದು ಯಾರಿಗೆ?

    ಗಾಂಧಿ ಲೇಖನಕ್ಕೆ ಮತ್ತು ಗಾಂಧಿಯ ಬಗ್ಗೆ ಸೈದ್ಧಾಂತಿಕ ಮತ್ತು ವ್ಯಾವಹಾರಿಕ ನೆಲೆಗಳಲ್ಲಿ ವಿಚಾರಪೂರ್ಣ ಏನಂತಿಗಳನ್ನು ನಿಖರ ನುಡಿಗಳಲ್ಲಿ ಹಂಚಿಕೊಂಡ
    ಕೆ.ಪಿ. ರವಿಕುಮಾರ್, ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ, ಶ್ರೀನಿವಾಸ ಭಟ್, ಶ್ರೀನಿವಾಸ ಹೆಬ್ಬಾಳ, ಕೆ.ಟಿ. ಶೆಟ್ಟಿ, ಸ್ಮಿತಾ,
    ಮತ್ತು ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಿದ ಎಲ್ಲ ಕನ್ನಡ ಕಲಿ ಓದುಗರಿಗೆ ನಮನಗಳು.

    ೧. ಸತ್ಯಾಸತ್ಯತೆ
    ಗಾಂಧಿ ಲೇಖನಕ್ಕೆ ಪ್ರತಿಕ್ರಿಯೆಯಿಸುತ್ತ "ಮಾಹಿತಿ ಪೂರ್ಣ ಲೇಖನ, ಒಳ್ಳೆಯ ಲೇಖನ " ಎಂದು ಸ್ಮಿತಾ ಅವರಿಗೆ ಅನಿಸಿದರೆ, ಕೆ. ಟಿ. ಶೆಟ್ಟಿ ಹೇಳುತ್ತಾರೆ, "ಕೆಲವು ಸತ್ಯ, ಕೆಲವು ಅರ್ಧ ಸತ್ಯ, ಇನ್ನು ಕೆಲವು ಪ್ರಶ್ನಾರ್ಥಕ ಸತ್ಯ." ಆದರೂ, "ಒಟ್ಟಿನಲ್ಲಿ ಗಾಂಧಿ ಒಬ್ಬ ಮಹಾತ್ಮನಾದ ಮಾನವ, ಮನುಕುಲಕ್ಕೊಂದು ಆದರ್ಶ!" ಎಂದು ಒಪ್ಪಿಕೊಳ್ಳುತ್ತಾರೆ.

    ಶ್ರೀನಿವಾಸ ಭಟ್ಟರು ಗಾಂಧಿ‌ ಪ್ರಯೋಗಿಸಿದ ಮೂರು ಪರಮಾಸ್ತ್ರಗಳನ್ನು ಗುರುತಿಸಿದ್ದರೆ‌, ಅದರಿಂದ "ಗಾಂಧಿ ಮಹಾತ್ಮನಾಗಲು ಬಯಸಿರಲಿಲ್ಲ!" ಎಂದು ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ ಒತ್ತಿ ಹೇಳುತ್ತಾರೆ.

    "ತುಂಬ ಸುಂದರ ನಿರೂಪಣೆ ಮತ್ತು ವ್ಯಾಖ್ಯಾನ. ಗಾಂಧೀಜಿಯವರ ಬಗ್ಗೆ ದೈವಿಕ ಭಾವ ಅಲ್ಲಗಳೆದರೂ ಅಭಿಮಾನ ತುಂಬಿಕೊಂಡಿದೆ. ಇಲ್ಲ ಇಲ್ಲ ಎಂದುಕೊಂಡೂ ರೋಚಕತೆಯೇ ಹೆಚ್ಚು, ಮುಕ್ತ ಆಲೋಚನೆ ಕಡಿಮೆ" ಎನ್ನುವುದು ಶ್ರೀನಿವಾಸ ಹೆಬ್ಬಾಳರ ಅನಿಸಿಕೆ.

    "ಲೇಖನ ಗಾಂಧಿಯವರ ತಾತ್ವಿಕ ಸೋಲುಗಳನ್ನು ದಾಖಲಿಸುವುದರಲ್ಲಿ ವಿಫಲವಾಗಿದೆ" ಎಂದು ವಿವರಿಸುತ್ತಾರೆ ಕೆ.ಪಿ. ರವಿಕುಮಾರ್.

    ೨. ಗಾಂಧಿ ಮಹಾತ್ಮನಾಗಲು ಬಯಸಿರಲಿಲ್ಲ!
    ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ ಹೀಗೆ ಹೇಳುತ್ತಾರೆ
    "ಗಾಂಧಿ ಒಬ್ಬ ಮುಗ್ಧ, ಹೆಚ್

    • 13 min
    ನುಡಿದರೆ ಮುತ್ತಿನ ಹಾರ | communico, ergo sum!

    ನುಡಿದರೆ ಮುತ್ತಿನ ಹಾರ | communico, ergo sum!

    👍 Like it? ...... ⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠

    👁️ ⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠ 

    📧 ⁠⁠⁠⁠⁠⁠⁠⁠⁠⁠⁠⁠Subscribe to our newsletter


    ನುಡಿದರೆ ಮುತ್ತಿನ ಹಾರ
    Communico, ergo sum!
    [ಏನು ನುಡಿಯುತ್ತೀರೋ ಅದೇ ನೀವು! ಮಾತಿನ ಮಹತ್ವ ಅಷ್ಟಿದೆ. ಪ್ರಪಂಚದ ವ್ಯವಹಾರಗಳೆಲ್ಲವೂ ಮಾತಿನಿಂದಲೇ. ಮಾತಿನಿಂದಲೆ ಗಳಿಕೆ, ಮಾತಿನಿಂದಲೆ ಉಳಿಕೆ. ಮಾತಿನಿಂದಲೆ ತಿಳಿವು, ಮಾತಿನಿಂದಲೆ ಅಳಿವು. ಹಾಗಾದರೆ ನಮ್ಮ ನುಡಿ ಹೇಗಿರಬೇಕು?]

    ನುಡಿ ಅಂದರೆ ಏನು?
    ನುಡಿ ಅಂದರೆ ಇಲ್ಲಿ ಕೇವಲ ಮಾತು ಅಲ್ಲ. ಎಲ್ಲ ರೀತಿಯ ಮಾನವ ಸಂಪರ್ಕ ಮತ್ತು ಸಂವಹನಗಳೂ ನುಡಿ. ಪರಸ್ಪರ ಸಂಪರ್ಕ ಸಂವಹನಗಳೆ ನಮ್ಮ ಅಸ್ತಿತ್ವ. Communico, ergo sum! ಅಂದರೆ, I commucate, therefore I exist. ಇದು ವಿಚಿತ್ರ ಎನಿಸಿದರೂ ಸತ್ಯ.‌ ಆದ್ದರಿಂದ ನುಡಿ ಅಥವ ಮಾತಿನ ಮಹತ್ವವನ್ನು ಇದಕ್ಕಿಂತ ಹೆಚ್ಚಿಗೆ ಒತ್ತಿ ಹೇಳಲು ಸಾಧ್ಯವಿಲ್ಲ. ವಾಟ್ಸಾಪ್‌, ಇನ್ಸ್ಟಗ್ರಾಂ, ಟ್ವಿಟರ್‌, ಟಿಕ್-ಟಾಕ್, ಯೂ-ತೂಬು, ಮುಖ-ಪುಸ್ತಕ, ಇತ್ಯಾದಿ ಸೋಶಿಯಲ್‌ ಮೀಡಿಯಗಳೆ ನಮ್ಮ ಪ್ರಪಂಚ ಆಗಿವೆ. ಒಂದು ದಿನ, ಒಂದು ಗಂಟೆ ಒಂದು ಸಂದೇಶ ಬರದಿದ್ದರೆ ಏನೋ ಕಸಿವಿಸಿ; ಸುಮ್ಮ ಸುಮ್ಮನೆ ಮೊಬೈಲ್‌ ತೆರೆದು ನೋಡುವ ತುಡಿತ. ಇವೇ ನಮ್ಮನ್ನು ನಿರೂಪಿಸುವ ಸೂತ್ರಗಳಾಗಿವೆ! ಆದ್ದರಿಂದ ಮಾತೇ ನಾನು; ಮಾತೇ ಆತ್ಮ!

    ೨ ಮಾತಿನಿಂದ ಸರ್ವಸ್ವ
    ಲಕ್ಷ್ಮೀರ್ವಸತಿ ಜಿಹ್ವಾಗ್ರೇ,
    ಜಿಹ್ವಾಗ್ರೇ ಮಿತ್ರಬಾಂಧವಾಃ
    ಜಿಹ್ವಾಗ್ರೇ ಬಂಧನಂ ಪ್ರಾಪ್ತಂ,
    ಜಿಹ್ವಾಗ್ರೇ ಮರಣಂ ಧ್ರುವಂ! (ಶಾರ್ಙಧರ ಪದ್ಧತಿ)

    ಮಾತಿನಿಂದ ಸಿರಿ, ಗೆಳೆಯರು, ಬಂಧುಗಳು, ದುಃಖ, ಜೈಲು, ಮತ್ತು ಸಾವು ಕೂಡ. ಇದನ್ನೆ ಕನ್ನಡದಲ್ಲಿ ಹೀಗೆ ಹೇಳಿದ್ದಾನೆ ಸರ್ವಜ್ಞ:

    ಮಾತಿನಿಂ ನಗೆ ನುಡಿಯು, ಮಾತಿನಿಂ ಹಗೆ ಹೊಲೆಯು
    ಮಾತಿನಿಂ ಸರ್ವ ಸಂಪದವು, ಲೋಕಕ್ಕೆ
    ಮಾತೆ ಮಾಣಿಕ್ಯ ಸರ್ವಜ್ಙ

    ೩ ಹಾಗಾದರೆ ನುಡಿ ಹೇಗಿರಬೇಕು?

    ನುಡಿದರೆ ಮುತ್ತಿನ ಹಾರದಂತಿರಬೇಕು!
    ಇದು ಬಸವ ವಚನ
    ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
    ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
    ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು!
    ನುಡಿಯೊಳಗಾಗಿ ನಡೆಯದಿದ್ದರೆ
    ಕೂಡಲಸಂಗಮದೇವನೆಂತೊಲಿವನಯ್ಯ ?

    ೩.೧ ಮುತ್ತಿನ ಗ

    • 10 min
    Gandhi: Part 2 - Achievements ಗಾಂಧಿ : ಭಾಗ ೨ - ಸಾಧನೆ

    Gandhi: Part 2 - Achievements ಗಾಂಧಿ : ಭಾಗ ೨ - ಸಾಧನೆ

    👍 Like it? ...... ⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠

    👁️ ⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠ 

    📧 ⁠⁠⁠⁠⁠⁠⁠⁠⁠⁠⁠Subscribe to our newsletter



    ಸಾಮಾನ್ಯ ಮಾನವನಾಗಿ ಹುಟ್ಟಿದ ಮೋಹನದಾಸ ರಾಷ್ಟ್ರಪಿತ, ಬಾಪು, ಗಾಂಧಿ ತಾತ, ಕೊನೆಗೆ ಮಹಾತ್ಮನಾದ. ಈತ ಮಾಡಿದ್ದಾದರೂ ಏನು?

    ಮಹಾತ್ಮ ಗಾಂಧಿ
    ಮೂರು ಕಂತುಗಳಲ್ಲಿ:
    ಭಾಗ ೧ರಲ್ಲಿ ಗಾಂಧೀ ಜಿವನದ ಸಮಗ್ರ ಸಂಕ್ಷಿಪ್ತ ನೋಟ
    ಭಾಗ ೨ರಲ್ಲಿ ಗಾಂಧಿ ಸಾಧಿಸಿದ್ದಾದರೂ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ
    ಈ ಲೇಖನ ಕನ್ನಡ ಕಲಿ ಮ್ಯಗ್ಝೀನ್‌ ತುತ್ತೂರಿಯ September ಮತ್ತು ಡಿಸೆಂಬರ ೨೦೦೭ರ ಸಂಚಿಕೆಗಳಲ್ಲಿ ಮೊದಲು ಪ್ರಕಟವಾಗಿತ್ತು
    ಭಾಗ ೩ರಲ್ಲಿ ಈ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು
    -
    ಗಾಂಧಿ ಸಾಧಿಸಿದ್ದಾದರೂ ಏನು?

    ಗಾಂಧಿಯನ್ನು ಕೆಲವರು ದೇವತೆಯಂತೆ ಪೂಜಿಸುವವರಾದರೆ ಇನ್ನು ಹಲವರು ಕ್ಷುಲ್ಲಕ ಕಾರಣಗಳಿಗಾಗಿ ಅವರ ಎಲ್ಲ ತತ್ವಗಳನ್ನು ಅನಾದರಣೆಯಿಂದ ನೋಡುವವರಿದ್ದಾರೆ. ಈ ಇಬ್ಬರೂ ಗಾಂಧಿಯನ್ನು ಅರಿತುಕೊಂಡಿಲ್ಲ.
    -
    ಇದೊ ನೋಡಿ, ನಿಜವಾಗಿಯೂ ಒಂದು ಗಾಂಧಿ ಗುಡಿಯನ್ನು ಕಟ್ಟಿದ್ದಾರೆ.
    ತಮಿಳುನಾಡಿನ ಎರೋಡು ಜಿಲ್ಲೆಯ ಸಲಂಗಪಾಳಯದಲ್ಲಿ ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ಗಾಂಧಿಗೆ ಪೂಜೆ, ಆರತಿ, ಮತ್ತು ಪ್ರಸಾದ. ಇದ್ದ ಕಡವರನ್ನೆಲ್ಲ ಇಲ್ಲೈ ಇಲ್ಲೈ ಎಂದು ಬೀದಿಗೆ ದಬ್ಬಿ, ಒಲ್ಲದವನಿಗೆ ಪೂಜೆ ಮಾಡುವ ಈ ಸಲ್ಲದ ಪರಿ ಎಂಥದು? ಗಾಂಧಿ ಇನ್ನೂ ಬದುಕಿದ್ದರೆ ಇದನ್ನು ಕಂಡು ತಾವೇ ನೇಣು ಹಾಕಿಕೊಳ್ಳುತ್ತಿದ್ದರೋ ಏನೋ! ಗಾಂಧಿಯ ಜೀವನಕ್ಕೆ, ತತ್ವಗಳಿಗೆ, ನಡತೆಗೆ, ಮತ್ತು ಆದರ್ಶಗಳಿಗೆ ಇದೊಂದು ಅಪಚಾರ.
    "ಗಾಂಧಿಯ ಜೀವನದ ಆದರ್ಶಗಳು ನಮಗೆ ಅನ್ವಯಿಸುವುದಿಲ್ಲ. ಯಾಕೆಂದರೆ ಗಾಂಧಿ ದೇವತೆ, ನಾವು ಹುಲು ಮಾನವರು" ಎಂದು ಸೋಲನ್ನು ಒಪ್ಪಿಕೊಳ್ಳುತ್ತ, ಇಲ್ಲವೆ ಚಾಣಾಕ್ಷತೆಯಿಂದ, ಮನುಷ್ಯತ್ವದ ಜವಾಬುದಾರಿಯಿಂದ ತಪ್ಪಿಸಿಕೊಳ್ಳುವ ಯತ್ನವೆ ಗಾಂಧಿಯನ್ನು ದೈವೀಕರಿಸುವುದು. ಗಾಂಧಿ ಈಗ ಹಳಸಿದ ಹಾಲು. ಬೆಕ್ಕು ಮುಟ್ಟದು. ಚೆಲ್ಲಲು ಆಗದು. ಅದಕ್ಕೆ ಗುಡಿ ಎನ್ನುವ ತಂಗಳು ಪೆಟ್ಟಿಗೆಯಲ್ಲಿ ಕೂಡಿ ಹಾಕಿದರಾಯಿತು! ರಾಮ ಬಸವ ಬುದ್ಧರ ಗತಿಯೂ ಇದೆ ಆಗಿದೆ. ಸಹಸ್ರಮಾನಗಳಿಂದ ನಡೆದು

    • 13 min
    Gandhi: Part 1 - Life ಗಾಂಧಿ : ಭಾಗ ೧ - ಜೀವನ

    Gandhi: Part 1 - Life ಗಾಂಧಿ : ಭಾಗ ೧ - ಜೀವನ

    👍 Like it? ...... ⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠

    👁️ ⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠ 

    📧 ⁠⁠⁠⁠⁠⁠⁠⁠⁠⁠Subscribe to our newsletter⁠⁠


    ಮಹಾತ್ಮ ಗಾಂಧಿ : ಮೂರು ಕಂತುಗಳಲ್ಲಿ:
    ಭಾಗ ೧ರಲ್ಲಿ ಗಾಂಧೀ ಜಿವನದ ಸಮಗ್ರ ಸಂಕ್ಷಿಪ್ತ ನೋಟ
    ಭಾಗ ೨ರಲ್ಲಿ ಗಾಂಧಿ ಸಾಧಿಸಿದ್ದಾದರೂ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ
    ಈ ಲೇಖನ ಕನ್ನಡ ಕಲಿ ಮ್ಯಗ್ಝೀನ್‌ ತುತ್ತೂರಿಯ September ಮತ್ತು ಡಿಸೆಂಬರ ೨೦೦೭ರ ಸಂಚಿಕೆಗಳಲ್ಲಿ ಮೊದಲು ಪ್ರಕಟವಾಗಿತ್ತು
    ಭಾಗ ೩ರಲ್ಲಿ ಈ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು

    ಪೂರಕ ಓದಿಗೆ: ಭಾಗ ೨ - ಗಾಂಧಿ ಸಾಧಿಸಿದ್ದಾದರೂ ಏನು?

    ಹುಟ್ಟು : ಅಕ್ಟೋಬರ್ ೨, ೧೮೬೯

    ಕೆಟಲ್ ಪದದ ಸ್ಪೆಲಿಂಗ್ ಬಾರದು; ಪಕ್ಕದ ಹುಡುಗನಿಂದ ಕಾಪಿ ಹೊಡೆಯುವಂತೆ ಶಿಕ್ಷಕರು ಸನ್ನೆ ಮಾಡುತ್ತಾರೆ; ಆದರೆ ಮೋಹನದಾಸ್ ತನಗೆ ಬಂದಂತೆ ತಪ್ಪಾಗಿ ಬರೆಯುತ್ತಾನೆ. ಈ ಪ್ರಾಮಾಣಿಕ ಮೂರ್ತಿಯ ಮೇಲೆ ಶಿಕ್ಷಕರಿಗೆ ಎಲ್ಲಿಲ್ಲದ ಸಿಟ್ಟು. ಆವರಿಗೇನು ಗೊತ್ತು ಕರಮಚಂದರ ಮಗ ಈ ಮೋಹನದಾಸ ಮುಂದೆ ಮಹಾತ್ಮ ಗಾಂಧಿ ಆಗುತ್ತಾನೆ ಎಂದು!

    ಭಾರತ ದೇಶಕ್ಕೆ ಸ್ವತಂತ್ರವನ್ನು ದೊರಕಿಸಿಕೊಟ್ಟು ರಾಷ್ಟ್ರಪಿತ, ಎಲ್ಲರಿಗೂ ನೈತಿಕ ನೆಲೆಯನ್ನು ತೋರಿಸಿ ಬಾಪು, ಮಕ್ಕಳಿಗೆಲ್ಲ ಪ್ರಿಯನಾಗಿ ಗಾಂಧಿ ತಾತ ಆದವ ಈ ಮೋಹನ. ಗುಜರಾತ ರಾಜ್ಯದ ಪೋರಬಂದರಿನಲ್ಲಿ ಅಕ್ಟೊಬರ್ ೨, ೧೮೬೯ರಂದು ಜನನ. ಲಂಡನ್ನಿನಲ್ಲಿ ವಕೀಲಿಗೆ ಓದು. ಮುಂಬಯಿಯಲ್ಲಿ ವಕೀಲಿ ವೃತ್ತಿ ಆರಂಭ, ಹಲ ಬಗೆಯ ನಿಷ್ಫಲ ಪ್ರಯತ್ನ.

    ದಕ್ಷಿಣ ಆಫ್ರಿಕಾಕ್ಕೆ ಕೆಲಸದ ನಿಮಿತ್ತ ಪಯಣ. ಅಲ್ಲಿನ ಸರಕಾರದ ವರ್ಣಭೇದ ನೀತಿಯ ಕಹಿ ಊಟದ ಸ್ವಾಗತ. ಅಲ್ಲಿ ಕಂಡದ್ದು ಭಾರತೀಯರ ರಾಜಕೀಯ ಹಕ್ಕು ಮತ್ತು ಸ್ವಾತಂತ್ರ್ಯಗಳ ದಿಗಿಲುಗೊಳಿಸುವಂತಹ ನಿರಾಕರಣೆ. ಮೂಲ ಹಕ್ಕುಗಳನ್ನು ದೊರಕಿಸಿಕೊಳ್ಳಲು ಚಳುವಳಿ ಆರಂಭ. ಇಪ್ಪತ್ತು ವರುಷ ದಕ್ಷಿಣ ಆಫ್ರಿಕದಲ್ಲಿ ವಾಸ; ಪೋಲಿಸರಿಂದ ಹೊಡೆತ, ಒದೆತ; ಅನೇಕ ಬಾರಿ ಜೈಲು ವಾಸ. ಸತ್ಯ ತಮ್ಮದು ಎಂದು ನಂಬಿ ಛಲ ಬಿಡದ ಗಾಂಧಿ ಅಹಿಂಸಾ ಮಾರ್ಗವನ್ನು ಹಿಡಿದರು. ಸಹನಶೀಲ ಪ್ರತಿರೋಧ (ಪ್ಯಾಸಿವ್ ರಸಿಸ್ಟನ್ಸ್) ಮತ್ತು ಸವಿನಯ ಕಾನೂನು ಭಂಗ (ಸಿವಿಲ್ ದಿಸ್‌ಒಬೀಡಿಯನ್ಸ್) ತತ್ವಗಳನ್ನು ಅ

    • 8 min
    How to Kill a Dasa : Huchcharane ಹುಚ್ಚರಣೆ: ದಾಸರನ್ನು ಆಡಿ ಕೊಲ್ಲಿರೋ!

    How to Kill a Dasa : Huchcharane ಹುಚ್ಚರಣೆ: ದಾಸರನ್ನು ಆಡಿ ಕೊಲ್ಲಿರೋ!

    👍 Like it? ...... ⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠

    👁️ ⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠ 

    📧 ⁠⁠⁠⁠⁠⁠⁠⁠⁠Subscribe to our newsletter⁠


    ಕನ್ನಡವೆಂಬುದು ಮಂತ್ರ ಕಣಾ!

    ಹೌದು. ಕನ್ನಡ ಉಚ್ಚಾರ ಸೂಕ್ಷ್ಮವಾದದ್ದು. ಉಚ್ಚಾರದಲ್ಲಿ ನಿಖರತೆ, ಸ್ಪಷ್ಟತೆ, ಒತ್ತು, ಬಿಗಿ, ಮತ್ತು ವಿರಾಮಗಳು ಅವಶ್ಯ. ಉಚ್ಚಾರ ಸರಿ ಇರದಿದ್ದರೆ, ಯಾವ ವೃತ್ತಾಸುರ ಉದ್ಭವಿಸದಿದ್ದರೂ, ಅಪಾರ್ಥ, ಅನಾಹುತ, ಆಭಾಸ, ಇಲ್ಲವೆ ನಗೆಪಾಟಲು ಕಟ್ಟಿಟ್ಟ ಬುತ್ತಿ.
    ಅನ್ಯಾರ್ಥ, ಅಪಾರ್ಥ, ಅನರ್ಥ, ಆಭಾಸಗಳು ಹುಟ್ಟುವುದು ಅನಾವಶ್ಯಕ ವರ್ಣ ಲೋಪ, ವರ್ಣ ಆದೇಶ, ಮತ್ತು ವರ್ಣ ಆಗಮಗಳಿಂದ. ಯಾಕೆ ಹೀಗೆ? ಅಲಸಿ ನಾಲಗೆ ಮತು ಉದಾಸೀನತೆಗಳು ಎಂದು ಮೇಲ್ನೋಟದಲ್ಲಿ ತೋರಿದರೂ, ಕನ್ನಡದ ಮತ್ತು ಪದಗಳ ತಿಳಿವು ಇಲ್ಲದಿರುವುದೆ ಮುಖ್ಯ ಕಾರಣ.
    ವಿಶೇಷವಾಗಿ ಹಾಡುಗಾರರು, ಭಾಷಣಕಾರರು, ಮೊದಲ ಗುರು ಎನಿಸುವ ತಾಯಿ-ತಂದೆ, ಮತ್ತು ಶಿಕ್ಷಕರು ಕನ್ನಡ ಉಚ್ಚಾರದ ವಿಷಯದಲ್ಲಿ ಹೆಚ್ಚಿನ ಗಮನ ಇರಿಸುವುದು ಒಳಿತು. ನವಿರು ಹಾಸ್ಯದೊಂದಿಗೆ, ಈ ಬಿತ್ತರಿಕೆಯಲ್ಲಿ, ಎತ್ತಿ ತೋರಿಸಲಾದ ʼಏಳು ಅಪಸ್ವರʼ ಗಳನ್ನು ಅರಿತು ನಿವಾರಿಸಿಕೊಂಡರೆ ನಿಮ್ಮ ಕನ್ನಡ ಕಸ್ತೂರಿಯಾಗುವುದರಲ್ಲಿ ಸಂಶಯವಿಲ್ಲ.

    (ಕನ್ನಡ ಉಚ್ಚಾರ ಮಂತ್ರದಷ್ಟು ಸೂಕ್ಷ್ಮವೇ?)

    ಹುಚ್ಚರಣೆ
    ದಾಸರನ್ನು ಆಡಿ ಕೊಲ್ಲಿರೋ!
    ಮತ್ತು
    ಕನ್ನಡದ ಏಳು ಅಪಸ್ವರಗಳು

    -- ವಿಶ್ವೇಶ್ವರ ದೀಕ್ಷಿತ

    ಗಾಯನ: ಸ್ಫೂರ್ತಿ ಉಗ್ರಪ್ಪ

    ಫೆಬ್ರುವರಿ ೦೭, ೨೦೨೧ ರಂದು "ವಾಕ್ಪಟುಗಳು" ಆನ್‌ಲೈನ್‌ ಗುಂಪಿನಲ್ಲಿ ನೀಡಿದ ಭಾಷಣ
    ( https://www.facebook.com/groups/vakpatugalu/permalink/10159612099913118/ )

    ಅನಾವಶ್ಯಕ ವರ್ಣ ಪಲ್ಲಟ, ವರ್ಣ ಲೋಪ, ವರ್ಣ ಆದೇಶ, ಮತ್ತು ವರ್ಣ ಆಗಮಗಳಿಂದ ಅಗುವ ಅಪಾರ್ಥ, ಅನರ್ಥ, ಆಭಾಸಗಳಿಗೆ ಪದಗಳ ತಿಳಿವಳಿಕೆ ಇಲ್ಲದಿರುವುದೆ ಮುಖ್ಯ ಕಾರಣ

    Read Complete article: https://kannadakali.com/article/culture/huchcharane.html

    09:55 ಸಪ್ತ ಅಪಸ್ವರಗಳು
    ‌12:45 ೧ ಪಾಯಸದಲ್ಲಿ ನೊಣ : ನ ↔ ಣ
    12:46 ದಡಬಡ ತಟಪಟ: ಡ ↔ ದ
    17:12 ೨ ಲಳಯೋರಭೇದ : ಳ ↔ ಲ
    19:45 ೩ ಕೂಡಿಸಿ ಕೆಟ್ಟ : ಶಬ್ದಗಳನ್ನು ಕೂಡಿಸಿ/ಬಿಡಿಸಿದಾಗ ಅಪಾರ್ಥ
    23:44 ೪ ಎಲ್ಲರೂ ಭಂಡರೆ : ಮಹಾಪ್ರಾಣವನ್ನು ಇಲ್ಲದಲ್ಲಿ ಸೇರಿಸಿ ಇದ್ದಲ್ಲಿ ಬಿಡುವುದು
    28:13 ೫ ಹಾರುವ ಹಕಾರ : ವರ್ಣ ಪಲ್ಲಟ
    31:44 ೬ ಹಗರಣ

    • 40 min
    Love and Expectations : ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?

    Love and Expectations : ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?

    Love and Expectations : ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?

    👍 Like it? ...... ⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠

    👁️ ⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠ 

    📧 ⁠⁠⁠⁠⁠⁠⁠⁠Subscribe to our newsletter


    [ ಮನುಷ್ಯ ಜಾತಿಗೆ ವಿಶಿಷ್ಟವಾದವುಗಳಲ್ಲಿ ಪ್ರೀತಿ ಕೂಡ ಒಂದು. ಪ್ರೀತಿ ಎಂದರೆ ಏನು? ಪ್ರೀತಿ ಒಂದು ಅನುಭವ. ಭೌತಿಕ, ಮಾನಸಿಕ, ಮತ್ತು ಅಧ್ಯಾತ್ಮಿಕ ಸ್ತರಗಳಲ್ಲಿ, ಅವರವರ ಪ್ರೀತಿ ಅವರವರ ಅನುಭವಕ್ಕೆ ಸೀಮಿತ. ಸಾರ್ವತ್ರಿಕವಾಗಿ ಅದು ಹೀಗೇ ಇರಬೇಕು ಎಂದು ಹೇಳಲಾಗುವುದಿಲ್ಲ. ಆದರೂ, ಪ್ರೀತಿಗೂ ಅಪೇಕ್ಷೆಗೂ ನಂಟು ಸಹಜ. ಪ್ರೀತಿಯ ಬಗ್ಗೆ ಅನೇಕ ವಾದಗಳು ಇವೆ. ಅಪೇಕ್ಷೆಯೇ ಪ್ರೀತಿ ಎಂದು ಒಂದು ಸಾಧಿಸಿದರೆ ನಿರಪೇಕ್ಷ ಪ್ರೀತಿಯೇ ಪ್ರೀತಿ ಎನ್ನುತ್ತದೆ ಮತ್ತೊಂದು. ಅಲ್ಲದೆ, "ಪ್ರೀತಿ ಒಂದು ಹುಚ್ಚು ಚಟ" ಎಂದು ಹೇಳುತ್ತಾನೆ ಮಂಕುತಿಮ್ಮ. ನಿಮ್ಮ ಪ್ರೀತಿ ಎಂಥದ್ದು? ನಿಮ್ಮ ಅಪೇಕ್ಷೆಗಳೇನು? ವಿವೇಕ ಬೆಟ್ಕುಳಿ ಅವರ ಈ ಪ್ರೀತಿ ಲೇಖನವನ್ನು ಓದಿ, ಅವರ ದನಿಯಲ್ಲೆ ಕೇಳಿ; ಪ್ರೀತಿಯ ಮೂಲವನ್ನು ಕಂಡುಕೊಳ್ಳಿ - ಸಂ.]

    ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?
    -- ವಿವೇಕ ಬೆಟ್ಕುಳಿ

    ಅನಾದಿ ಕಾಲದಿಂದ ಇಂದಿನವರೆಗೂ ಪ್ರೀತಿ ಎಂಬ ವಿಷಯ ಚಚೆ೯ ಆಗುತ್ತಲೇ ಇರುವುದು. ಮುಂದೆಯೂ ಸಹ ಆಗುತ್ತ ಇರುವುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.


    ಹಾಗಾದರೆ ಪ್ರೀತಿ ಎಂದರೇನು? ಈ ಪ್ರಶ್ನೆಗೆ ಹಲವಾರು ಉತ್ತರಗಳು ಇವೆ. ಆದರೆ ಸರಳ ಉತ್ತರ ಎಂದರೆ ಒಂದೇ “ಪ್ರೀತಿ ಎಂದರೆ ಪ್ರೀತಿ” ಅಷ್ಟೆ! ಈ ಬಗ್ಗೆ ಉತ್ತರಿಸುವ ಎಲ್ಲರೂ, ಅವರವರು ನೋಡಿದ, ಅನುಭವಿಸಿದ ಘಟನೆಗಳನ್ನು ಆಧಾರವಾಗಿಟ್ಟುಕೊಂಡೆ ಪ್ರೀತಿಯನ್ನು ವ್ಯಾಖ್ಯಾನಿಸುವರು. ಹೊರತಾಗಿ ಪ್ರೀತಿಗೆ ಸ್ಪಷ್ಟವಾದ ಉತ್ತರ ಎಂಬುದು ಇಲ್ಲ. ಪ್ರೀತಿಯಲ್ಲಿ ವಿವಿಧ ಬಗೆಗಳಿವೆ. ಆದರೆ ಎಲ್ಲ ಬಗೆಯ ಪ್ರೀತಿಯೂ ಅಪೇಕ್ಷೆಯ ಕಾರಣಕ್ಕಾಗಿಯೇ ದುಖ:ದಲ್ಲಿ ಅಂತ್ಯವಾಗುವುದು.

    ತಂದೆ-ತಾಯಿ ಮಕ್ಕಳ ಪ್ರೀತಿ
    ಅಪ್ಪ ಅಮ್ಮನಿಗೆ ತನ್ನ ಮಗ/ಮಗಳು ತಾನು ಹೇಳಿದಂತೆ ಕೇಳಬೇಕು ಎನ್ನುವ ಅಪೇಕ್ಷೆ ಇರುವುದು. ಮಕ್ಕಳು ಚಿಕ್ಕವರಿದ್ದಾಗ ದಿನಾಲೂ ಶಾಲೆಗೆ ಹೋಗಿ ಬರಬೇಕು. ಚೆನ್ನಾಗಿ ಓದಬೇಕು. ಉತ್ತಮ ಅಂಕ ತೆಗೆಯಬೇಕೆಂಬ ಅಪೇಕ್ಷೆ. ಮಕ್ಕಳು ದೊಡ್ಡವರ

    • 9 min

Top Podcasts In Education

The Mel Robbins Podcast
Mel Robbins
The Jordan B. Peterson Podcast
Dr. Jordan B. Peterson
Digital Social Hour
Sean Kelly
The Rich Roll Podcast
Rich Roll
Mick Unplugged
Mick Hunt
TED Talks Daily
TED