Secret of Kannada ಕನ್ನಡದ ಗುಟ್ಟು Kannadada Guttu

Vishweshwar Dixit

Explore varied topics to unlock the secrets of Kannada Language ಕನ್ನಡದ ಗುಟ್ಟನ್ನು ರಟ್ಟು ಮಾಡುವ ವಿವಿಧ ವಿಷಯಗಳ ವಿಚಾರ Read at http://kannadakali.com Watch at http://youtube.com/channel/UCCON6n4lEgj6NsPqCLZdDSw Kannada Kali : Kannadada Guttu

  1. JAN 4

    ಅರ್ಥದ ಮೊದಲ ಅರ್ಥವೇ ಅರ್ಥ! The First Meaning of Artha is Artha Itself!

    👍 Like it? ...... ⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠Subscribe to our newsletter Here, by saying `kuto dhanam', the meaning is meant to be money. So, even for 24 hours ...ChennudiThe first meaning of Artha is meaning!Moment by Moment grain by grainKnowledge and Weatth are to be earned.A grain left is wealth lost;A minute wasted is Knowlede unlearned. - Samayocitapadyamalika (Ka-30)Time (kaala) means passing away; no one can hold it back. But time can be transformed, that is, even a little bit of time can be spent working and earning something useful. That is why Time is Money.Here, by saying `kuto dhanamʼ, the meaning of Artha is money. So, it does not mean that we should spend all 24 hours in the stock market, in interest trading, in moneylending, or in counting the money we have earned.Every moment of life, we gain experiences. Good experiences are the companions of life that stay with us till the end. They are our wealth and meaning. The first meaning of Artha is meaning itself! That is, meaning, hope, and goal. If you want to understand the meaning of life, the ultimate goal, and achieve it, you must engage in good deeds that bring joy and understanding, that are good for yourself and others, and that increase your well-being. You must collect every particle, piece, and fragment of your experiences, squeeze out the essence, gain understanding, and gain knowledge and wealth of Life.This is the inner voice of this Chennudi, and its true meaning.Yours,Vishveshwara Dikshita.The First Meaning of Artha is Meaning Itself!Kannada Kali, Bittarike,January 05, 2026ಇಲ್ಲಿ, ʼಕುತೋ ಧನಂʼ ಅನ್ನುವ ಮೂಲಕ, ಅರ್ಥ ಅನ್ನುವುದಕ್ಕೆ ಹಣ ಅನ್ನುವ ಆಶಯವೇ ಇದೆ. ಹಾಗಂತ, ೨೪ ಗಂಟೆಗಳ ಕಾಲವನ್ನೂ ...ಚೆನ್ನುಡಿಅರ್ಥದ ಮೊದಲ ಅರ್ಥವೇ ಅರ್ಥ!ಕಣ ಕಣವ ಬಿಡದೆ ಚಣ ಚಣವು ಗಳಿಸು ನೀ ಸಿರಿ ತಿಳಿವುಗಳನು. ಬಿಡಲು ಕಣವೊಂದ ಸಿರಿ ಎಂತು? ಕಳೆಯೆ ಚಣವೊಂದ ಕಲಿವೆಂತು?ಸಂಸ್ಕೃತ ಮೂಲ: ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್ ಕ್ಷಣತ್ಯಾಗೇ ಕುತೋ ವಿದ್ಯಾ ಕಣತ್ಯಾಗೇ ಕುತೋ ಧನಂ - ಸಮಯೋಚಿತಪದ್ಯಮಾಲಿಕಾ (ಕ-೩೦)ಸಮಯೋಚಿತಪದ್ಯಮಾಲಿಕೆಯಲ್ಲಿ ಕಕಾರದ ಅಡಿಯಲ್ಲಿ ಬರುವ ೩೦ನೆಯ ಶ್ಲೋಕಒಂದೊಂದು ಚಣವೂ ಶ್ರಮಿಸುತ್ತ, ಒಂದೊಂದು ಚೂರೂ ಬಿಡದೆ, ಕಲಿಕೆ ಮತ್ತು ಸಂಪತ್ತುಗಳನ್ನು ಗಳಿಸಬೇಕು. ಅದನ್ನೆ "ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು" "ತೆನೆ ತೆನೆ ಕೂಡಿದರೆ ರಾಶಿ" ಅಂತ ಕನ್ನಡದ ಗಾದೆಗಳು ಹೇಳುತ್ತವೆ.ಸಮಯ (ಕಾಲ) ಅಂದರೆ ಕಳೆದು ಹೋಗುವುದು ಅಂತಲೇ ಅರ್ಥ; ಅದನ್ನು ಯಾರಿಂದಲೂ ಹಿಡಿದಿಡಲು ಆಗದು.‌ ಆದರೆ ಸಮಯವನ್ನು ರೂಪಾಂತರಿಸಬಹುದು, ಅಂದರೆ ಚಣ ಚಣವೂ ಸಮಯವನ್ನು ಕೆಲಸದಲ್ಲಿ ತೊಡಗಿಸಿ ಉಪಯುಕ್ತವಾದುದನ್ನು ಸಂಪಾದಿಸಬಹುದು. ಅದಕ್ಕೇ Time is Money ಅಂತ.‌ ಇಲ್ಲಿ, ʻಕುತೋ ಧನಂʼ ಅನ್ನುವ ಮೂಲಕ, ಅರ್ಥ ಅನ್ನುವುದಕ್ಕೆ ಹಣ ಅನ್ನುವ ಆಶಯವೇ ಇದೆ. ಹಾಗಂತ, ೨೪ ಗಂಟೆಗಳ ಕಾಲವನ್ನೂ ಷೇರುಪೇಟೆಯಲ್ಲಿ, ಬಡ್ಡಿ ವ್ಯವಹಾರದಲ್ಲಿ, ಲೇವಾದೇವಿಯಲ್ಲಿ, ಅಥವ ಗಳಿಸಿದ ಹಣವನ್ನು ಎಣಿಸುವುದರಲ್ಲಿ ತೊಡಗಿಸಬೇಕು ಅಂತಲ್ಲ. ಜೀವನದ ಪ್ರತಿ ಕ್ಷಣವೂ ನಾವು ಗಳಿಸುತ್ತಿರುವುದು ಅನುಭವಗಳು. ಒಳ್ಳೆಯ ಅನುಭವಗಳೆ ಕೊನೆಯವರೆಗೂ ನಮ್ಮೊಡನೆ ಇರುವ ಬಾಳ ಸಂಗಾತಿ. ಅವೇ ನಮ್ಮ ಸಂಪತ್ತು ಮತ್ತು ಅರ್ಥ. ಅರ್ಥದ ಮೊದಲ ಅರ್ಥವೇ ಅರ್ಥ! ಅಂದರೆ meaning,ಆಶಯ, ಗುರಿ ಅಂತ. ಬಾಳಿನ ಅರ್ಥ, ಅರ್ಥಾತ ಗುರಿಯನ್ನು ಅರಿತು ಸಾಧಿಬೇಕಾದರೆ ಚಣಚಣವನ್ನೂ ತಿಳಿವನ್ನು ತರುವ, ತನಗೆ ಮತ್ತು ಇತರರಿಗೆ ಒಳ್ಳೆಯದಾಗುವ, ಸೌಖ್ಯವನ್ನು ಹೆಚ್ಚಿಸುವ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು ಒಂದೊಂದು ಕಣ, ತುಂಡು, ಚೂರು ಅನುಭವಗಳನ್ನೆಲ್ಲ ಸಂಗ್ರಹಿಸಿ, ಸಾರವನ್ನು ಹಿಂಡಿ, ತಿಳಿವನ್ನು ಹೊಂದಿ ಬಾಳಸಿರಿಯನ್ನು ಹೊಂದಬೇಕು. ಇದು ಈ ಚೆನ್ನುಡಿಯ ಒಳದನಿ ಆಗಿದೆ, ನಿಜವಾದ ಅರ್ಥವೂ ಆಗಿದೆ.ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತ.ಅರ್ಥದ ಮೊದಲ ಅರ್ಥವೇ ಅರ್ಥ!ಕನ್ನಡ ಕಲಿ, ಬಿತ್ತರಿಕೆ, January 05, 2026

    4 min
  2. 12/25/2025

    World Philosophy Day Talk ಈಗಿನ ತತ್ತ್ವವಿದ್ಯಾಭ್ಯಾಸಕ್ಕೆ ಕೆಲವು “ರೋಮಾಂಚಕ ದಿಗಂತಗಳು”

    👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠⁠ ಈಗಿನ ತತ್ತ್ವವಿದ್ಯಾಭ್ಯಾಸಕ್ಕೆ ಕೆಲವು “ರೋಮಾಂಚಕ ದಿಗಂತಗಳು” ಮೈಸೂರಿನ ಮಾನಸಗಂಗೋತ್ರಿಯ ತತ್ತ್ವಶಾಸ್ತ್ರ ಅಧ್ಯಯನ ಕೇಂದ್ರದವರು, ಸ್ನಾತಕೋತ್ತರ ತತ್ತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ “World Philosophy Day-2025” ಪ್ರಯುಕ್ತ S. G. ಸೀತಾರಾಮ್‍ರವರು ಅಲ್ಲಿ ಮಂಡಿಸಿದ ವಾದದ ಧ್ವನಿ ಪ್ರಸ್ತುತಿ.ಕಂಠದಾನ: Dr. H. ಪಾಂಡುರಂಗ ವಿಠಲ ... ಭರದಿಂದ ಬದಲಾಗುತ್ತಿರುವ ವಿದ್ಯಮಾನಗಳು ಚಿತ್ರ-ವಿಚಿತ್ರ ಸವಾಲುಗಳನ್ನೊಗೆದು, ಒಂದರ ಮೇಲೊಂದು ಆಹ್ವಾನ-ಅವಕಾಶಗಳನ್ನು ’ಉದುರಿಸು’ತ್ತಿರುವ ಈ ಸಂಧಿಯಲ್ಲೂ, ಪ್ರಾಚೀನ ಕಾಲದ, ಪುರಾತನ ಸಮಾಜದ, ಅದರಲ್ಲೂ ಕೆಲವೇ ಆಯ್ದ, ಸೀಮಿತ- ಮತೀಯ, ಪರಸ್ಪರ-ವಿರೋಧಿ ಸಿದ್ಧಾಂತಗಳಷ್ಟನ್ನೇ ಸಾರ್ವತ್ರಿಕ, ಸಾರ್ವಕಾಲಿಕ, ಸತ್ಯಗಳೆಂದೂ, ಅವುಗಳ ಪ್ರವರ್ತಕರ ವಾದಗಳೇ ಪರಮಾರ್ಥಗಳೆಂದೂ, ಭಯ-ಭಕ್ತಿ-ನಿಷ್ಠೆಗಳಿಂದ ತಲೆಬಾಗಿ, ಭೂತಕಾಲಕ್ಕೇ ಜೋತುಬಿದ್ದು, ಇಂದಿಗೂ, ಮುಂದಕ್ಕೂ, ಹಿಂಡಿದ ಹಿಪ್ಪೆಯನ್ನೇ ಚಪ್ಪರಿಸುತ್ತ, ಜಳ್ಳನ್ನೇ ಮತ್ತೆ-ಮತ್ತೆ ಜಗಿದು, ಬಲವಂತವಾಗಿ ನುಂಗಿಕೊಳ್ಳುತ್ತ ಹೋದರೆ, ತತ್ತ್ವವಿಷಯ ವಿಕಾಸಕ್ಕೆ ಪುಷ್ಟಿ ಹೇಗೆ ದೊರೆತೀತು? ... --- Read the fill article here https://kannadakali.com/article/reflection/nuhorizonsforphilosophy.html Some “Exciting Horizons” for Contemporary Philosophy A sound presentation of the argument presented by S. G. Seetharam, Mysore, at the Department of Postgraduate Philosophy Studies there on the occasion of “World Philosophy Day-2025”.Vocals: Dr. H. Panduranga Vitthal... Even in this era when rapidly changing phenomena are posing strange challenges and ‘throwing’ one invitation and opportunity after another, if we bow our heads out of fear, devotion and loyalty, clinging to the past, considering only the few selected, limited, and contradictory theories of ancient times and ancient societies as universal, eternal, truths, and the arguments of their proponents as the ultimate meanings, and continue to chew the same straw, chewing the same water again and again, and forcibly swallowing it, how can we find nourishment for the development of philosophy? ...

    13 min
  3. 12/13/2025

    For the sake of Name! ಹೆಸರಿಗಾಗಿ! Hesarigāgi !

    👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠ಹೆಸರಿಗಾಗಿ!ನಿಜ ಜೀವನದ ಘಟನೆಗಳ ಹಾಸ್ಯಮಯ ರೋಚಕ ನಿರೂಪಣೆಬರೆಹ * ಓದು: ವಿಶ್ವೇಶ್ವರ ದೀಕ್ಷಿತಮರೆಯಲಾಗದ ಕರೆಗಂಟೆ - ನಾನೂ ಅಪ್ಪ ಆಗುವೆ!ನೀರವತೆ ತುಂಬಿದ ಆಫೀಸಿನಲ್ಲಿ ಎಳೆಯುತ್ತಿರುವ ಮಧ್ಯಾಹ್ನದ ಒಂದು ವಿದ್ಯುತ್ ಕ್ಷಣ. ಟಿಣ್ ಟಿಣಿಸುತ್ತಿದ್ದ ದೂರವಾಣಿಯನ್ನು ಎತ್ತಿಕೊಂಡೆ. ಅತ್ತ ನನ್ನ ಹೆಂಡತಿ. ಅವಳ ಮಾತು ಕೇಳಿ ಮೂಕನಾದ ನಾನು ಕೆಲಸದ ಮೇಲೆ ಗಮನ ಇಡಲಾರದಾದೆ. ಎಲ್ಲ ಮೀಟಿಂಗುಗಳನ್ನು ರದ್ದುಗೊಳಿಸಿದೆ. ಹಿಗ್ಗಿನಿಂದ ಎದೆ ಉಬ್ಬಿಸಿ ಗೂಡಿನಿಂದ ಗೂಡಿಗೆ ಹಾರಾಡಿದೆ. ಎಂದಿಗಿಂತ ಹೆಚ್ಚಿನ ನಗುಮೊಗದಿಂದ ಎದುರು ಬಂದವರೆಲ್ಲರ ಕೈ ಕುಲುಕುತ್ತ ಓಡಾಡಿದೆ. ನಾನೂ ಅಪ್ಪ ಆಗುವೆ ಎಂದು ಪುಲಕಿತನಾದೆ.ಸಂಜೆಯ ವೇಳೆಗೆ ಆ ಪುಳಕವೆಲ್ಲ ಮೈ ಇಳಿದು ಪರಿಸ್ಥಿತಿ ಗಂಭೀರವಾಯಿತು. ಹೆಸರು ಬಹಳ ಮಹತ್ವ. ಹೆಸರೊಂದು ಇಡಿ ಜೀವನದ ಗತಿಯನ್ನೆ ನಿರ್ಧರಿಸಿ ಬಿಡಬಹುದು. ಕೂಸಿಗೆ ಏನು ಹೆಸರು ಇಡುವುದು ಎನ್ನುವ ಸರಳ ಪ್ರಶ್ನೆ ದಂಗು ಬಡಿಸಿತು. ಈ ವಿಷಯವನ್ನು ತಪ್ಪಿಯೂ ಕಲಿಸಿರದ ಸಾಲೆಗಳಿಗೆ ಕಾಲು ಹೊಸೆದಿದ್ದು ದಂಡ ಎನಿಸಿತು.ಯೋಜನೆಗಳು[ಇರಲಿ!] ಹೆಸರಿಗಾಗಿ, ಏನ ಕೇನ ಪ್ರಕಾರೇಣ ಎನ್ನುವಂತೆ, ಒಂದು ಯೋಜನೆ ಹಾಕಿದೆ: ಹೆಸರುಗಳ ಪುಸ್ತಕಗಳನ್ನು ಓದುವುದು; ಗೆಳೆಯರನ್ನು, ಹಿರಿಯರನ್ನು, ಮತ್ತಿತರ ಹೆಮ್ಮೆಯ ತಾಯಿತಂದೆಯರನ್ನು ಕೇಳುವುದು; ಇಂಟರ್‌ನೆಟ್ ಮೂಲಕ ಸಿಗಬಹುದಾದ ಮಾಹಿತಿಯನ್ನು ಜಾಲಾಡಿಸಿ ಹೆಸರು ಹುಡುಕುವುದು. ಕವಿರಾಜ ಮಾರ್ಗವನ್ನು ಹಿಡಿದು, ಹರಿಹರನೊಡನೆ ರಗಳೆ ಗೈದು, ನಾಗರಸನನ್ನು ಕೆದಕಿ, ಮುದ್ದಣನೊಡನೆ ಸರಸವಾಡಿ ಸವಿ ಕನ್ನಡ ಹೆಸರೊಂದನ್ನು ಸಂಪಾದಿಸುವುದು. ಒಂದು ಹೆಸರಿಗಾಗಿ, ವಾಗ್ದೇವಿಯ ಭಂಡಾರದ ಮುದ್ರೆಯನೊಡೆದ ಆ ರನ್ನನೊಡನೆ ಗದಾಯುದ್ಧಕ್ಕೆ ಇಳಿಯಲೂ ಸನ್ನದ್ಧನಾದೆ.ಯೋಜನೆ, ಬರಿ ಯೋಜನೆಎಲ್ಲ ಒಳ್ಳೆಯ ಯೋಜನೆಗಳಂತೆ ಇದೂ, ನಿರ್ವಹಿಸದೆ, ಬರಿ ಯೋಜನೆಯಾಗಿಯೆ ಉಳಿಯಿತು. ತಿಂಗಳುಗಳು ಉರುಳಿ ಹೋಗುತ್ತಿರುವಾಗ, ನನ್ನ ಮುಂದೂಡುವ ಪ್ರವೃತ್ತಿಯನ್ನು ಸಮರ್ಥಿಸಿಕೊಳ್ಳಲು ತಾತ್ವಿಕತೆಯ ಸುಲಭ ಸೋಗೊಂದು ಥಟ್ಟನೆ ಬೇಕಾಯಿತು. ಈಗ, ನನಗೆ ಅನುಕೂಲವಾದದ್ದು ಶೇಕ್ಸ್‌ಪಿಯರನ ನಾಟಕೀಯ ಮಾತು, "ಹೆಸರಿನಲ್ಲೇನಿದೆ? ಯಾವುದನ್ನು ಗುಲಾಬಿ ಎಂದು ಕರೆಯುತ್ತೇವೆಯೋ ಅದು ಬೇರೆ ಯಾವುದೇ ಹೆಸರಿನಿಂದಲೂ ಅಷ್ಟೇ ಕಂಪು ಬೀರುತ್ತದೆ!" ಮೇಲಾಗಿ, ಇನ್ನೂ ಏಳು ತಿಂಗಳುಗಳು ಇವೆ! ಸದ್ಯಕ್ಕೆ ಸ್ವಲ್ಪ ಚೇತರಿಸಿಕೊಂಡೆ. ಮಗು ಹುಟ್ಟುವ ಮುಂಚೆ ಸಾವಿರ ಹೆಸರುಗಳನ್ನು ಕಂಡು ಹಿಡಿಯುವೆನೆಂಬ ಆತ್ಮ ವಿಶ್ವಾಸ ಒಮ್ಮೆಲೆ ಬಲವಾಯಿತು.ವಿಶೇಷ ಘಟನೆ ಇಲ್ಲದೆ ಆರು ತಿಂಗಳುಗಳು ಕಳೆದು ಹೋದರೂ ಹೆಸರು ಒಂದೂ ಸಿಕ್ಕಿರಲಿಲ್ಲ. ಯಾವಾಗಲೂ ಹೆಸರಿನ ವಿಚಾರ. ಒಂದು ದಾರಿಯನ್ನೂ ಸರಿಯಾಗಿ ಯೋಚಿಸಿರಲಿಲ್ಲ.ಐಡಿಯ ನಂಬರ್‌ ಒನ್[ಅಹಾ!] ಒಂದು ಐಡಿಯ ಹೊಳೆಯಿತು. ಕೂಸು ನನ್ನೊಬ್ಬನದೇ ಅಲ್ಲ. ಮಗು ಆಗುವುದು ನನ್ನ ಹೆಂಡತಿಗೂ ತಾನೆ? ಹೀಗೆ, ಈ ಹೆಸರಿನ ಹೊಣೆಯಿಂದ ನುಸುಳಿಕೊಳ್ಳುವ ಹವಣಿಕೆಯಲ್ಲಿ ಹಗುರವಾಗಿ ಕೇಳಿದೆ, "ಕೂಸಿಗೆ ಹೆಸರು ಏನಾದರು ಹುಡುಕಿರುವೆಯ?" ಅವಳ ಐಡಿಯ ಬೇರೆಯೆ ಆಗಿತ್ತು. "ಆರೋಗ್ಯವಾದ ಉತ್ತಮ ಮಗು ಹುಟ್ಟುವಂತೆ ನಾನು ನೋಡಿಕೊಳ್ಳುತ್ತೇನೆ" ಎಂದು ಅಳುಕದೆ ಮುಂದುವರಿಸಿದಳು, "ಕೂಸಿಗೊಂದು ಉತ್ತಮ ಹೆಸರು ನೀವು ನೋಡಿಕೊಳ್ಳಿ." ಈಗ, ಜವಾಬುದಾರಿಯ ಪೆಂಡುಲಂ ಪೂರ್ತಿ ನನ್ನ ಕಡೆಗೆ ವಾಲಿತು. ಗಡಿಯಾಳ ಮಾತ್ರ ಟಿಕ್‌ಟಿಕ್‌ಗುಟ್ಟುತ್ತಲೆ ಇತ್ತು.ಕೊರೆಯುವ ಸಮಸ್ಯೆ – ತಿವಿಯುವ ಗೆಳೆಯರುಈಗಂತು, ಮುದ್ದಾದ ಹೆಸರಿಟ್ಟು ಮಕ್ಕಳ ಜೊತೆ ಆಡುತ್ತಿದ್ದ ಗೆಳೆಯರನ್ನು ಕಂಡರೆ ಮನಸ್ಸಿನಲ್ಲಿ ಏನೋ ಕರಕರೆ. ಕಂಡರೂ ಕಾಣದಂತಿದ್ದ ಇವರು ಸಮಸ್ಯೆಯನ್ನು ನೆನಪಿಸುತ್ತ ನನ್ನ ಸುತ್ತ ತಿರುಗುತ್ತಿದ್ದಾರೆ ಎನ್ನಿಸಿತು.ಹೆಸರಿಲ್ಲದೆ ಹೆರದಿರಿ, ಹೆಸರಿಲ್ಲದೆ ಬಸುರಾಗದಿರಿನನ್ನ ಹೆಸರಿನ ಸಮಸ್ಯೆಯನ್ನು ಪ್ರಸ್ತಾಪಿಸಿ ಅದರ ಬೇಕುಬೇಡಗಳನ್ನು ವಿಶ್ಲೇಷಿಸಿ ಎಷ್ಟು ಸಂತೊಷಕೂಟಗಳನ್ನು ಅಂತ್ಯಗೊಳಿಸಿದೆನೋ! ಆಮಂತ್ರಿತ ಮದುವೆಗಳಿಗೆ ಹೋದಾಗ, ವಧೂವರರಿಗೆ ಕಾಣಿಕೆಯೊಂದಿಗೆ "ಕೂಸು ಹುಟ್ಟುವ ಮುಂಚೆ ಕುಲಾವಿ ಎನ್ನುವ ಗಾದೆಯನ್ನು ಮರೆತು ಬಿಡಿ. ಹೆಸರಿಲ್ಲದೆ ಹೆರದಿರಿ, ಹೆಸರಿಲ್ಲದೆ ಬಸುರಾಗದಿರಿ" ಎಂದು ಮೌನವಾಗಿ ಹರಸಿ ಬರುತ್ತಿದ್ದೆ.ಗಾಂಧಾರಿಯ ಗುಟ್ಟುನೂರೊಂದು ಕೌರವರನ್ನು ಯಾರು ಅರಿಯರು? ಒಂದು ನೂರ ಒಂದು ಹೆಸರುಗಳನ್ನು ಆ ಗಾಂಧಾರಿ ಧೃತರಾಷ್ಟ್ರರು ಹೇಗೆ ಕಂಡು ಹಿಡಿದರು? ಅವರಿಗೇನು ನೂರು ವರ್ಷಗಳ ಸಮಯ ಇರಲಿಲ್ಲ. ಒಮ್ಮೆಲೆ, ಗಾಂಧಾರಿ ಧೃತರಾಷ್ಟ್ರರಿಗಾಗಿ ನನ್ನಲ್ಲಿದ್ದ ಮೆಚ್ಚಿಕೆ ನೂರ್ಮಡಿ ಆಯ್ತು. ಕೌರವರನ್ನು ಹೊತ್ತ ಗಾಂಧಾರಿಗೆ ಅವು ಸಂತಾಪರಹಿತ ದಿನಗಳೇನು ಆಗಿರಲಿಲ್ಲ. ಕತೆ ಕೇಳಿ. ಬೇಗನೆ ಗಂಡು ಮಗು ಆಗಲಿ ಎಂದು ಬೇಡಿಕೊಂಡವಳು ಹೆರಿಗೆಯನ್ನು ಎರಡು ವರ್ಷಗಳ ವರೆಗೆ ತಡೆ ಹಿಡಿದಳು! ಯಾಕೆ ಗೊತ್ತೆ? ಅವಳಿಗೆ ಸರಿಯಾದ ಹೆಸರು ಸಿಕ್ಕಿರಲಿಲ್ಲ! ಬೇಸತ್ತು, ಕೊನೆಗೆ ಭ್ರೂಣವನ್ನೆ ಕಿತ್ತು ಹಾಕಿದಳು ಗಾಂಧಾರಿ! ನೂರು ಮಕ್ಕಳು ಆಗಲಿ ಎಂದ ವ್ಯಾಸನ ವರ ಅವಳಿಗೆ ನೂರಕ್ಕೆ ನೂರರಷ್ಟು ಶಾಪವಾಗಿದ್ದರಲ್ಲಿ ಸಂಶಯವಿಲ್ಲ. ಮಾತು ಕೊಟ್ಟ ವ್ಯಾಸ ಸುಮ್ಮನೆ ಬಿಡಬೇಕಲ್ಲ. ಭ್ರೂಣವನ್ನು ನೂರು ತುಂಡುಗಳಲ್ಲಿ ಕತ್ತರಿಸಿ ಮಣ್ಣಿನ ಕುಡಿಕೆಗಳಲ್ಲಿ ಮುಚ್ಚಿ ಇಟ್ಟ. ಜಾಣ, ಹೆಸರು ಹುಡುಕುವ ಹೆಚ್ಚಿನ ಜವಾಬುದಾರಿಯನ್ನು ಮಾತ್ರ ತಾನು ತೆಗೆದುಕೊಳ್ಳಲಿಲ್ಲ. ಕಣ್ಣು ಕಟ

    21 min
  4. 11/06/2025

    Fort Builders - ಕೋಟೆ ಕಟ್ಟುವರು - Kōṭe Kaṭṭuvaru

    👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter ಕೋಟೆ ಕಟ್ಟುವರು ಒಂದು ಸ್ವ-ರಚಿತ ಕವನ ವಾಚನವಿಶ್ವೇಶ್ವರ ದೀಕ್ಷಿತಮುನ್ನುಡಿ:ತಾನು ಎನ್ನುವ ಅರಿವು ಜೀವದ ಕುರುಹು. ಅಮೀಬದಂಥ ಏಕಕೋಶ ಜೀವಿಯಿಂದ ಹಿಡಿದು, ಅತ್ಯಂತ ಸಂಕೀರ್ಣ ಮನುಷ್ಯನ ವರೆಗೂ, ತಾನು ಎನ್ನುವುದು ಬೇರೆ ಬೇರೆ ಸ್ತರದಲ್ಲಿ ಇದೆ. ಮನುಷ್ಯನಲ್ಲಿ ಅದು ಪರಾಕಾಷ್ಠತೆಗೆ ಏರಿದೆ. ಒಂದು ರೀತಿಯಲ್ಲಿ, ಅದು ಕರಾಳತೆಯ ಕಡೆಗೆ ಹೊರಳಿದೆ. ತನ್ನ ಬದುಕು ಉಳಿವಿಗಾಗಿ ಅಲ್ಲದೆ, ಪ್ರಾಣಿ ಪ್ರಾಣಿಗಳಲ್ಲಿ ಅಲ್ಲದೆ, ತಮ್ಮತಮ್ಮಲ್ಲೆ ಭೇದ ಭಾವಗಳನ್ನು ಕಲ್ಪಿಸಿಕೊಳ್ಳುತ್ತ, ಇತರರ ಜೀವನವನ್ನು ಹಾಳು ಮಾಡುವುದೆ ಗುರಿಯಾದಂತೆ ಕಾಣುತ್ತದೆ. ಪರರ ನಷ್ಟವೇ ತನ್ನ ಲಾಭ, ಪರರ ದುಃಖವೇ ತನ್ನ ಸುಖ, ಪರರ ಕ್ಷೋಭೆಯೆ ತನಗೆ ಶಾಂತಿ ಎನ್ನುವಂತಾಗಿದೆ. ಇದು ಹಿಂದಿನಿಂದಲೆ ಹತ್ತಿಕೊಂಡ ಪಿಡುಗು. "ಮನುಷ್ಯ ಜಾತಿ ತಾನೊಂದೆ ವಲಂ" ಎಂದ ಪಂಪನ ಮಾತನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಆರು ಶತಮಾನಗಳ ನಂತರದ ಸರ್ವಜ್ಞನ ನುಡಿ "ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೆ ಇರುತಿರಲು, ಕುಲಗೋತ್ರ ನಡುವೆ ಎತ್ತಣದು? ಸರ್ವಜ್ಞ."ಯಾರಿಗೂ ಕೇಳುವುದೆ ಇಲ್ಲ.ಅಸಮಾನತೆ ಇದ್ದಾಗಲೂ ಸಮಾನತೆಯಿಂದ ಬಾಳುವುದು ಮನುಷ್ಯತ್ವ ಎಂದಾದರೆ ಅದು ವಿರಳವಾಗಿದೆ. ಸಮಾನತೆ ಇದ್ದಾಗಲೂ ಅಸಮಾನತೆ ಕಲ್ಪಿಸಿಕೊಳ್ಳುವುದೆ ಈಗ ಮನುಷ್ಯನ ಕುರುಹಾಗಿದೆ. ವಿಚಿತ್ರವೆಂದರೆ, ಇಂಥ ಕರಾಳತೆಯನ್ನು ಮೀರುವ ಶಕ್ತಿ ಕೂಡ ಇರುವುದು ಮನುಷ್ಯನಲ್ಲಿಯೆ. ಹಾಗಾಗಿ, ಆಯ್ಕೆ ಮಾಡಿಕೊಳ್ಳಲು ಮನುಷ್ಯ ಸ್ವತಂತ್ರನೇ ಎಂದು ಪ್ರಶ್ನಿಸುವಂತಾಗಿದೆ.ಕೋಟೆ ಕಟ್ಟುವರು ಕಟ್ಟುವರು : ಮನೆ ಸುತ್ತ, ಮನ ಸುತ್ತ ಕಾಂಕ್ರೀಟು ಕಟ್ಟಿಗೆ ಉಸುಕು ಇಟ್ಟಿಗೆ ಅರಳು ಮರಳು ಏನೆಲ್ಲ ವಿಷಯಗಳ ಬೆರೆಸಿ ಕೋಟೆ ಕಟ್ಟುವರು. ಅದು ಇದು ಎಂದು ಗೆರೆ ಎಳೆಯುವರು; ನಾನು ನನ್ನವರೆಂದು, ನೀನು ನಿನ್ನವರೆಂದು ಗೋಡೆ ಕಟ್ಟುವರು. ಅವರು ಇವರೆಂದು ಕಂದಕ ತೋಡುವರು; ಒಳಗೆ ಹೊರಗೆಂದು ಪೊರೆ ಬೆಳೆಸಿಕೊಳ್ಳುವರು. ಕುಲ ಜಾತಿ ನೀತಿ ಎಂದು ಬೇರೆ ಎಣಿಸಿಕೊಳ್ಳುವರು; ಮತ ಪಂಥ ಎಂದು ಕವಲೊಡೆದುಕೊಳ್ಳುವರು. ಮನಸು ಮುಚ್ಚಿ ಕನಸಲ್ಲಿ ನನಸು ಕಟ್ಟುವರು. ಕಣ್ಣು ಮುಚ್ಚಿ ಇರವನ್ನೆ ಅಲ್ಲಗಳೆಯುವರು;ಕಟ್ಟಿ ಅರಳಿಸಿ ಆದರಿಸುವರು : ಏಳು ಸುತ್ತಿನ ಮಲ್ಲಿಗೆ, ಎಸಳು ಎಸಳಿನ ಗುಲಾಬಿ, ತಂಪು ಕಂಪಿನ ಸವಿಕುಡಿಕೆ; ಮಕರಂದ ಆನಂದ ಪಾನಕ್ಕೆ ಅತ್ಮೀಯ ಆಹ್ವಾನ; ಕೋಟೆ ಕಾವಲಿಗಲ್ಲ - ಕರೆದು ಆದರಿಸಲೆಂದು.ಕಟ್ಟಿ ಕೆಡವುವರು : ಎಳೆ ಎಳೆಯ ಸುತ್ತಿ, ಮೈ ಸುತ್ತ ಪೊರೆ ಬೆಳೆಸಿ, ಗೂಡಲ್ಲಿ ಗೂಢವಾಯಿತು ಧ್ಯಾನಸ್ಥ ಚಿಟ್ಟೆಮರಿ; ರೂಪಾಂತರದ ಚಮತ್ಕಾರ; ಜೀವ ಸಂತತ ಸಾಕ್ಷಾತ್ಕಾರ. ಕೋಟೆ ಕಾವಲಿಗಲ್ಲ‌ - ಹರಿದು ಹೊರಬರಲೆಂದು, ಮನ ತೆರೆದು ತೋರಿಸಲೆಂದು.ಆಯ್ಕೆ ನಮ್ಮದು.ನಿಮ್ಮವನೇ ಆದ, ವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, ನವಂಬರ್‌ ೧, ೨೦೨೫.ಕೋಟೆ ಕಟ್ಟುವರು.ಕವನ ಮತ್ತು ವಾಚನ: ವಿಶ್ವೇಶ್ವರ ದೀಕ್ಷಿತ. --------The Fort BuilderA self-composed poem readingVishweshwara Dixit Preface:The awareness of self is the essence of life. From a single-celled organism like an amoeba to the most complex human being, self is at different levels. In man, it has risen to its peak. In a way, it has turned towards darkness. It seems that it is not just for its own survival, not just among animals,but among themselves; while imagining differences where they do not exist, it seems that it's aim is to ⁠... continued here Therefore, it has become questionable whether man has freedom to choose. Poem: Fort Builders(They) build forts: Around the house, Around the mind Mixing concrete, wood, Sand and bricks, And all kinds of matters. Saying this and that They draw the lines; Saying I and mine, You and yours, They build walls. Saying those and these They dig ditches; Saying inside(rs) and outside(rs) They grow blinders (over their eyes) Saying caste, clan, character The count themselves separate; Saying reigion, creed, sect They fork into ways. With minds closed They build reality in dreams; With eyes closed, They deny the reality.(They) build to Welcome and Cherish: Seven-round jasmine, Rose of many petals, A delicious drink of cool vibration; A dear invitation to drink the nectar; Not a fort to repel and guard - But To invite and cherish.They build and tear down: Wrapped thread by thread, Growing a sheath around, Hidden in the nest, A meditative butterfly; A miracle of transformation; A realization of the life cycle. Not a fort to repel and guard - But to tear out, To open the mind and show.The choice is ours. Yours,Vishweshwara Dixita Kannada Kali Bittarike, Nov 1, 2025.

    5 min
  5. 08/05/2025

    ನಮೋ ಎನ್ನಿರೇ ನಮೋ - You Say Hello, I say namO!

    👍 Like it? ...... ⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠ ದೂರವಾಣಿ "ಟ್ರಿನ್ ಟ್ರಿನ್" ಎಂದ ತಕ್ಷಣ "ಹಲೋ!" ಎನ್ನುವುದು ಸಾಮಾನ್ಯ. ಹಲೋ(ಹೆಲೋ hello) ಎಂದರೆ ಏನು? ಇದರ ಉತ್ಪತ್ತಿ ಹೇಗೆ? ಹಲೋ ಎನ್ನುವ ಶಬ್ದ ಬಳಕೆಯಲ್ಲಿ ಬಂದದ್ದು ಹೇಗೆ? ಇದನ್ನು ಕಂಡು ಹಿಡಿದವರು ಯಾರು? ಇದು ಅಚ್ಚಗನ್ನಡ ಪದವೆ? ಅಲ್ಲವಾದರೆ ಇದಕ್ಕೊಂದು ಅಚ್ಚಗನ್ನಡದ ಸಮಾನ ಪದ ಇದೆಯೆ? ಹೀಗೆ ಪ್ರಶ್ನೆಗಳನ್ನು ಕೇಳುತ್ತ ಹೋಗಬಹದು.Hello ಶಬ್ದದ ಹುಟ್ಟುಹಲೋ ಯಾವುದೋ ಲ್ಯಾಟಿನ್‌, ಗ್ರೀಕ್‌, ಅಥವಾ ಜರ್ಮನ್‌ ಮೂಲದ ಪದ ಇರಬೇಕು ಅಂದುಕೊಳ್ಳುವುದು ಸಹಜ. ಹೆಕ್ಕಿ ನೋಡಿದರೆ, ಇದು ಪ್ರಾಚೀನ ಶಬ್ದವೇನಲ್ಲ. ಟ್ರಿನ್ ಟ್ರಿನ್ ಎಂದು ಕರೆ ಗಂಟೆ ಹೊಡೆದುಕೊಳ್ಳುತ್ತಿರುವ ದೂರವಾಣಿಯನ್ನು ಎತ್ತಿಕೊಳ್ಳಲಾಗಿದೆ ಎಂದು ಸೂಚಿಸಲು ಆ ಕಡೆ ಫೋನ್ ಎತ್ತಿಕೊಂಡವರು ಹೇಳುವುದಕ್ಕೆ ಈ ಪದ ಹುಟ್ಟಿದ್ದು. ಟೆಲೆಫೋನ್ ಕಂಡು ಹಿಡಿದ ಅಲೆಕ್ಸ್ಯಾಂಡರ್ ಗ್ರಾಹಮ್ ಬೆಲ್ ಇದಕ್ಕೆ ಕಾರಣ ಎಂದುಕೊಳ್ಳುವುದು ಸಹಜ. ಆಶ್ಚರ್ಯವೆಂದರೆ ಇದನ್ನು ಪ್ರಚಲಿತಗೊಳಿಸಿದವ ಥಾಮಸ್ ಆಲ್ವಾ ಎಡಿಸನ್.ದೇಶದ ತುಂಬ ದೂರವಾಣಿ ಕೇಂದ್ರಗಳನ್ನು ಸ್ಥಾಪಿಸುವ ಹೊಣೆಯನ್ನು ಅಮೆರಿಕ ಸರಕಾರ ಎಡಿಸನ್‌ಗೆ ಕೊಟ್ಟಿತ್ತು. ತನ್ನ ಆ ಪ್ರಭಾವವನ್ನು ಉಪಯೋಗಿಸಿ ಎಡಿಸನ್ ಹಲೋ ಬಳಕೆಯನ್ನು ಕಡ್ಡಾಯಗೊಳಿಸಿದನು. ದೂರವಾಣಿ ಹೊತ್ತಿಗೆಗಳಲ್ಲಿ ಹಲೋ ಬಳಕೆಯನ್ನು ನಿಗದಿಸಿದನು.ಅಪರೇಟರುಗಳು ಹಲೋ ಅನ್ನುವುದು ಸಾಮಾನ್ಯವಾಯಿತು. ಅಂತೆಯೆ, ಮುಂಚಿನ ದೂರವಾಣಿ ಆಪರೇಟರುಗಳು "ಹಲೋ ಹುಡುಗಿಯರು" (hello girls)ಎಂದು ಹೆಸರಾಗಿದ್ದರು.೧೮೮೦ರಲ್ಲಿ ನಡೆದ ಟೆಲಿಫ಼ೋನ್ ಕಂಪನಿಗಳ ಮೊದಲ ಸಮಾವೇಶದಲ್ಲಿ ಇನ್ನೊಂದು ಪರಂಪರೆ ಹುಟ್ಟಿಕೊಂಡಿತು. ಪ್ರತಿನಿಧಿಗಳು ಎದೆಗೆ ಅಂಟಿಸಿಕೊಂಡ ಹೆಸರು ಚೀಟಿಗಳ ಮೇಲೆ "ಹಲೋ" ಎನ್ನುವ ಶಬ್ದ ದೊಡ್ಡದಾಗಿ ಇತ್ತು. ಈಗ ಯಾವ ಸಮ್ಮೇಳನ ಸಮಾವೇಶಗಳಲ್ಲು ಕಂಡುಬರುವುದು ಪರಿಚಿತ "ಹಲೋ, ನನ್ನ ಹೆಸರು ..."ದೂರವಾಣಿಯಲ್ಲಿ ಅಲ್ಲದೆ, ಎದುರುಗೊಂಡಾಗ ಕೂಡ, ಕೈ ಕುಲುಕುತ್ತ, ಹಲೋ ಎನ್ನಬಹುದು.ಹಲೋಗೆ ಸಮಾನ ಕನ್ನಡ ಪದ?ಇಂತಹ ಬಹೂಪಯೋಗಿ ಹಲೋಗೆ ಸಮಾನ ಶಬ್ದ ಬೇರೆ ಯಾವ ಭಾಷೆಯಲ್ಲಾದರು ಉಂಟೆ? ಸಂಸ್ಕೃತವೆ ಇದಕ್ಕೆ ಉತ್ತರ. ಅದು "ನಮಃ."ನಮಗೆ ಪರಿಚಿತವಿರುವ ’ನಮಸ್ಕಾರ’, ’ನಮಸ್ತೇ’ ಕೂಡ ’ನಮಃ’ದಿಂದೆ ಬಂದವುಗಳು. ಆದರೆ, ʼನಮಃʼ ದ ವಿಸರ್ಗ, ಕನ್ನಡಕ್ಕೆ ಅಷ್ಟೇ ಅಲ್ಲ, ಯಾವ ಇತರ ಭಾರತೀಯ ಭಾಷೆಗೂ ಒಗ್ಗುವುದಿಲ್ಲ. ಅದಕ್ಕೇ ʼತೇʼ, ʼಕಾರʼ ಗಳನ್ನು ಸೇರಿಸಿಕೊಂಡು ನಮಸ್ತೇ ನಮಸ್ಕಾರ ಅಂತ ಮಾಡಿಕೊಂಡಿರುವುದು.ಸಂಸ್ಕೃತದ ’ನಮಃ’ ಶಬ್ದದ ಒಂದು ರೂಪವಾದ ’ನಮೋ’, ಸಂಧಿ ಸಮಾಸಗಳ ಗೊಡವೆ ಇಲ್ಲದೆ, ಎಲ್ಲಡೆ ಬಳಸಬಹುದಾದ ಸೌಮ್ಯ ಪದ. ʼನಮʼ ದ ಕೊನೆಗೆ ಸೇರಿಕೊಂಡ ದೀರ್ಘ ಸ್ವರ ʼಓʼ (ನಮ+ಓ) ಸಂಬೋಧನಾತ್ಮಕ ನಮ್ರತೆಯ ಸೂಚಕ ಕೂಡ. ನಮೋ - a small word with a big heart - ಚಿಕ್ಕ, ಚೊಕ್ಕ, ಬಹೂಪಯೋಗಿ ಶಬ್ದ. ದೂರವಾಣಿ ಕರೆಯನ್ನು ಉತ್ತರಿಸಬಹುದು, ಎದುರುಗೊಂಡಾಗಲೂ ಹೇಳಬಹುದು. ಸ್ವಲ್ಪ ಎಳೆದು ನಮೋಽಽ ಎಂದರೆ ಸಾಕು, ಎಲ್ಲ ಸದ್ಭಾವಗಳೂ ಹೊಮ್ಮುವವು. ಹೀಗೆ ನಮೋ ಕೃತಕವಲ್ಲ - ಯಾರೂ ಅದನ್ನು ಹುಟ್ಟಿಸಲಿಲ್ಲ. ಇದು ಪುರಾತನ ದೇವವಾಣಿ.ನಮೋ ಎಂದು ಕಾಗದವನ್ನು ಪ್ರಾರಂಭಿಸಬಹುದು. ಮೇಲಾಗಿ, ಪತ್ರ ಮುಗಿಸಲೂ ನಮೋ ಹೇಳಬಹುದು.ಹಲೋ vs ನಮೋಸಂದರ್ಭ : ಬರವಣಿಗೆ ಅಥವಾ ಮಾತುಕತೆ ಆರಂಭದಲ್ಲಿ ಮಾತ್ರ ಹಲೋ ಬಳಸಬಹುದು ; ಆದರೆ "ನಮೋ" ಎಲ್ಲ ಸಂದರ್ಭಗಳಲ್ಲಿ ಹೊಂದಿಕೊಳ್ಳುತ್ತದೆ—ಆರಂಭ, ಅಂತ್ಯ, ವಿದಾಯ, ಸ್ವಾಗತ.ಆರೋಗ್ಯ : ಆರೋಗ್ಯದ ನೋಟದಿಂದಲೂ ʼನಮೋʼದ್ದೆ ಮೇಲುಗೈ! ಅಂದರೆ, ಕೈಜೋಡಿಸಿ ʼನಮೋʼ ಎನ್ನುತ್ತ ದೂರದಿಂದಲೆ ನಮಸ್ಕಾರ ಮಾಡಿದರಾಯ್ತು. ಹೆಲೋ ಹೇಳುತ್ತ ಬೇರೊಬ್ಬರನ್ನು ಮುಟ್ಟಿ ಕೈ ಕುಲುಕುವ ಅವಶ್ಯಕತೆ ಇಲ್ಲ. ವಿಶೇಷವಾಗಿ, ೨೦೨೦ರ ಕೋವಿಡ್‌ ವೈರಾಣು ಪ್ಯಾಂಡೆಮಿಕ್ ಸಮಯದಲ್ಲಿ ಇಂಥ ʼನಮೋ-ನಮಸ್ಕಾರʼ ಸಂಪ್ರದಾಯವನ್ನು ಅಳವಡಿಸಿಕೊಂಡಾಗ, ಮುಜುಗರ ಅಲ್ಲದೆ ಆಪತ್ತಿನಿಂದ ಜನರನ್ನು ಉಳಿಸಿದ್ದು ನಿಜ.ಭಾಷೆ : ಹಲೋ ವಿದೇಶಿ – ನಮೋ ಸ್ವದೇಶಿ. ಮೇಲಾಗಿ, ನಮೋ ಸಾಂಸ್ಕೃತಿಕ ಗುರುತ್ವ ಉಳ್ಳ, ಶುದ್ಧ ಭಾರತೀಯತೆಯ ಸಂಕೇತನೀವು ವಿಚಾರಿಸುತ್ತಿರುವುದು ಸರಿ. ಎದುರುಗೊಂಡಾಗ ಮತ್ತು ಸೇರುವಾಗ, ಕಾಗದ-ಪತ್ರ ಮತ್ತು ಇ-ಮೆಲ್ ಬರೆಯುವಾಗ ಮಾತ್ರವಲ್ಲ, ಬೀಳ್ಕೊಡುವಾಗ ಮತ್ತು ಅಗಲುವಾಗ ಕೂಡ ನಮೋ ಎನ್ನಬಹುದು. ವಿದಾಯ ಹೇಳಲು ಹಲೋ ಎನ್ನಬಹುದೆ? ಪತ್ರದ ಮುಕ್ತಾಯದಲ್ಲಿ ಹಲೋ ಬರೆಯಬಹುದೆ? ಸಾಧ್ಯವಿಲ್ಲ!ಹಲೋ ಕೂಡ ಕನ್ನಡ!ಎಡಿಸನ್‌ಗೆ ಸಂಸ್ಕೃತ ಭಾಷೆ ಪರಿಚಿತವಿತ್ತೇನೊ ಗೊತ್ತಿಲ್ಲ. ಹಲೋ ಹುಟ್ಟಲು ಸಂಸ್ಕೃತದ ’ಹಂಹೋ’, ’ಅಹೋ’, ಅಥವ ಕನ್ನಡದ ʼಎಲವೋʼ, ’ಎಲೋ’, ʼಲೋʼಗಳು ಅಪರೋಕ್ಷವಾಗಿ ಪ್ರಭಾವಿಸಿರಬಹುದೆ?! ದೂರವಾಣಿ ಕರೆ ಉತ್ತರಿಸಿದಾಗ, ಅಚ್ಚ ಕನ್ನಡಿಗನೊಬ್ಬʼಹಹ್ಹ್ʼ ಎಂದು ಗಂಟಲು ಸರಿಪಡಿಸುತ್ತ ʼ(ಎ)ಲೋʼ ಎನ್ನುವ ಚಿತ್ರ ಮೂಡಿ ಸಹಜವಾಗಿ ಕೇಳಿಸುವ ಪದ ʼಹಲೋʼ(ಹೆಲೊ). ಹಾಗೆಂದು, ನಿಜ ಹುಟ್ಟು ಏನೇ ಇರಲಿ, ಹಲೋ ಕೂಡ ಕನ್ನಡ ಪದ ಅನಿಸಿದರೆ ತಪ್ಪಲ್ಲ!ಆದರೂ, ನಮ್ಮ ನೆಲದ "ನಮೋ" ಶಬ್ದವು ವಿನಯ, ಆತ್ಮೀಯತೆ, ಮರ್ಯಾದೆ, ಮತ್ತು ಅತಿಥಿ ಸೌಹಾರ್ದಗಳ ಪ್ರತೀಕ. ಆದ್ದರಿಂದ ’ಹಲೋ’ ಬಳಸುವಲ್ಲೆಲ್ಲ ’ನಮೋ’ ಎನ್ನುವುದು ನಮ್ಮ ಭಾಷೆಗೆ, ಸಂಸ್ಕೃತಿಗೆ, ಹಾಗೂ ಸಂಸ್ಕಾರಕ್ಕೆ ಅತ್ಯಂತ ಔಚಿತ್ಯಪೂರ‍್ಣವಾದದ್ದು. ಕನ್ನಡ ತಾಯಿಯ ಮುಡಿಗೆ ಏರಿಸುವ ಗೌರವ ಪುಷ್ಪವೆ ನಮೋ.‌ಚಿಕ್ಕ ಪದ – ವಿಶಾಲ ಹೃದಯಸಂಸ್ಕೃತದ ನಮೋ ಎಲ್ಲ ಭಾರತೀಯ ಭಾಷೆಗಳಲ್ಲೂ ಹೊಕ್ಕಿದೆ. ವಿನಯ, ಗಾಂಭೀರ್ಯ, ಮರ್ಯಾದೆ, ಆದರ, ಸ್ವಾಗತ ಮುಂತಾದ ಭಾವಗಳನ

    10 min
  6. 05/29/2025

    ಆಕಾಶಾತ್ ಪತಿತಂ - ಬಾನಿಂದ ಬಿದ್ದ : Akashat Patitam Toyam- Baninda Bidda

    👍 Like it? ...... ⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠Subscribe to our newsletter There are 33 crores gods like Shiva, Vishnu, Ganesha, Parvati, Lakshmi; who should I worship? KannudiAkashat patitam : Baninda Bidda Bāninda Bidda (Kannada) bāninda bidda nīrella hariyuvante kaḍalina kaḍege, yā dēvagū itta namana mādēvanaḍigaḷige muḍipu. (As the water that falls from the sky flows towards the ocean,so do salutations all gods reach the feet of the supreme Being, Mahadeva.) Sanskrit original* ākāśāt patitaṁ tōyaṁ yathā gacchati sāgaraṁ, sarva dēva namaskāraḥ kēśavaṁ pratigacchati. All the rain water that falls from the sky eventually reaches the Ocean. Similarly, the prayers to any god, ultimately, reaches the Supreme Being (Vishnu). That is, God is One, God has many names. God is One, God has many forms. God can be worshipped by any name, whether it is Keshav or Ishwara; It can be worshipped in any form - be it a four-armed, holding a conch, a mace, a lotus, a saligram; a trident and damaru holding chandrachuda, jatajuta, Gangadhar, or a linga. Ēkaṁ Sat, Viprā Bahudhā vadanti (r̥gvēda, maṇḍala 1, sūkta 164, mantra 46.) That is, the truth is one though the wise call it by many names. This is a clear declaration of Sanatana Dharma. This is the origin of the traditions of the Sun worshiping, the Shakti worshipping, the Shiva worshipping, the Vishnu worshipping, or the Ganapathi worshipping, etc. The purpose of all is one, the methods are many. The purpose is liberation from the cycle of birth-life-death; the methods of achieving it are many. There are many Saguna-Sakara deities who help one to attain the qualification-less,formless Supreme Truth.This simple verse, religious and democratic in principle, which includes the knowledge of Vedanta, respects diversity, and suitable metaphor, Isn't this a symbol of Indianness? Yours, Viśvēśvara Dīkṣita * Sources: 1. Suktisudha, Compiled by R.S. Paliwal 2. Subhashitapadyaratnakara, Muniraja Vishalavijaya 3. Mahasubhashita Sangraha, vol.4, Ludwik Sternbach -------------------------------- ಶಿವ, ವಿಷ್ಣು, ಗಣೇಶ, ಪಾರ್ವತಿ, ಲಕ್ಷ್ಮಿ‌ ಹೀಗೆ ನೂರೆಂಟು ದೇವರುಗಳು ಇದ್ದಾರಲ್ಲ, ಯಾರನ್ನು ಪೂಜಿಸಲಿ? ಕಂನುಡಿ ಆಕಾಶಾತ್ ಪತಿತಂ : ಬಾನಿಂದ ಬಿದ್ದ ಬಾನಿಂದ ಬಿದ್ದ ನೀರೆಲ್ಲ ಹರಿಯುವಂತೆ ಕಡಲಿನ ಕಡೆಗೆ, ಯಾ ದೇವಗೂ ಇತ್ತ ನಮನ ಮಾದೇವನಡಿಗಳಿಗೆ ಮುಡಿಪು. ಸಂಸ್ಕೃತ ಮೂಲ * ಆಕಾಶಾತ್‌ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ, ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ. ಆಕಾಶದಿಂದ ಬೀಳುವ ಎಲ್ಲ ಮಳೆ ನೀರು, ಕೊನೆಯಲ್ಲಿ ಸಮುದ್ರವನ್ನು ಸೇರುತ್ತದೆ. ಹಾಗೆಯೆ, ಯಾವ ದೇವರಿಗೆ ಮಾಡಿದ ಪೂಜೆ ಕೂಡ, ಕೊನೆಯಲ್ಲಿ, ಆ ಪರಮಾತ್ಮನಿಗೆ (ವಿಷ್ಣುವಿಗೆ) ಸಲ್ಲುತ್ತದೆ. ಅಂದರೆ, ದೇವ ಒಬ್ಬ ನಾಮ ಹಲವು. ದೇವ ಒಬ್ಬ ರೂಪ ಹಲವು. ದೇವರನ್ನು ಯಾವುದೇ ಹೆಸರಿನಲ್ಲಿ, ಕೇಶವ ಆಗಲೀ, ಈಶ್ವರ ಆಗಲೀ - ಭಜಿಸಬಹುದು; ಯಾವುದೇ ರೂಪದಲ್ಲಿ - ಶಂಖ ಚಕ್ರ ಗದಾ ಪದ್ಮಗಳನ್ನು ಹಿಡಿದ ಚತುರ್ಭುಜ‌ನಾಗಲಿ, ಸಾಲಿಗ್ರಾಮವೆ ಆಗಲಿ; ಡಮರು ತ್ರಿಶೂಲಗಳನ್ನು ಹಿಡಿದ ಭಸ್ಮ ಬಳಿದುಕೊಂಡ, ಜಟಾಜೂಟ, ಗಂಗಾಧರ ಚಂದ್ರಚೂಡನಾಗಲಿ, ಅಥವಾ ಲಿಂಗ ರೂಪವೆ ಆಗಲಿ - ಭಜಿಸಬಹುದು. ಏಕಂ ಸತ್‌, ವಿಪ್ರಾ ಬಹುಧಾ ವದಂತಿ (ಋಗ್ವೇದ, ಮಂಡಲ ೧, ಸೂಕ್ತ ೧೬೪, ಮಂತ್ರ ೪೬.) ಅಂದರೆ ಸತ್ಯ ಒಂದೇ, ತಿಳಿದವರು ಹಲವು ಹೆಸರುಗಳಿಂದ ಕರೆಯುತ್ತಾರೆ. ಇದು ಸನಾತನ ಧರ್ಮದ ಸ್ಪಷ್ಟ ಘೋಷಣೆ. ಸೂರ್ಯನನ್ನು ಪೂಜಿಸುವ ಸೌರ, ದೇವಿಯನ್ನು ಅರಾಧಿಸುವ ಶಾಕ್ತ, ಶಿವನನ್ನು ಭಜಿಸುವ ಶೈವ, ವಿಷ್ಣುವನ್ನು ಅರ್ಚಿಸುವ ವೈಷ್ಣವ, ಗಣಪತಿಯನ್ನು ಗೌರವಿಸುವ ಗಾಣಪತ್ಯ ಇತ್ಯಾದಿ ಸಂಪ್ರದಾಯಗಳ ಮೂಲ ಇದೇ. ಎಲ್ಲವುಗಳ ಉದ್ದೇಶ ಒಂದು, ವಿಧಾನಗಳು ಹಲವು. ಹುಟ್ಟು-ಬದುಕು-ಸಾವುಗಳ ಚಕ್ರದಿಂದ ಬಿಡುಗಡೆಯೆ ಉದ್ದೇಶ; ಅದನ್ನು ಸಾಧಿಸುವ ವಿಧಾನಗಳು ಹಲವು. ನಿರ್ಗುಣ ನಿರಾಕಾರ ಪರಮ ಸತ್ಯವನ್ನು ಸೇರಲು ಸಹಕಾರಿಯಾಗುವ ಸಗುಣ ಸಾಕಾರ ದೇವತೆಗಳು ಹಲವು.ಹೀಗೆ, ವೇದಾಂತದ ತಿಳಿವನ್ನು ಒಳಗೊಂಡ, ವೈವಿಧ್ಯತೆಯನ್ನು ಗೌರವಿಸುವ, ಸೂಕ್ತ ಉಪಮೆಯ ಈ ಸರಳ ಧಾರ್ಮಿಕ ಡೆಮೊಕ್ರಾಟಿಕ್‌ ತತ್ವದ ಶ್ಲೋಕ ಭಾರತೀಯತೆಯ ಪ್ರತೀಕ ಅಲ್ಲವೆ? ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ. * ಆಕರಗಳು: ೧. ಸೂಕ್ತಿಸುಧಾ, ಸಂ| ಆರ್.ಎಸ್.‌ ಪಾಲಿವಾಲ ೨. ಸುಭಾಷಿತಪದ್ಯರತ್ನಾಕರ, ಮುನಿರಾಜ ವಿಶಾಲವಿಜಯ ೩. ಮಹಾಸುಭಾಷಿತ ಸಂಗ್ರಹ, ಸಂಪುಟ ೪, ಲುಡ್ವಿಕ್ ಸ್ಟರ್ನ್‌ಬಾಕ್‌ ಕನ್ನಡಕಲಿ ಬಿತ್ತರಿಕೆ ಜೂನ್ ೧, ೨೦೨೫ ಆಕಾಶಾತ್‌ ಪತಿತಂ - ಬಾನಿಂದ ಬಿದ್ದ ವಿಶ್ವೇಶ್ವರ ದೀಕ್ಷಿತ‌ ಸಂಪರ್ಕ: ನಮೋವಿಶ್ ಯ್ಯಾಟ್ ಯಾಹೂ ಡಾಟ್ ಕಾಮ್

    4 min
  7. 05/05/2025

    ಈತ ಸತ್ಯನಾರಾಯಣ! This is Satyanarayana! By Dr. Srinivasa Havanur

    👍 Like it? ...... ⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠Subscribe to our newsletter [ಈ ಮಹತ್ವದ ಸಂಶೋಧನ ಲೇಖನವನ್ನು ಡಾ. ಶ್ರೀನಿವಾಸ ಹಾವನೂರರು ನನಗೆ ಹಲವಾರು ವರ್ಷಗಳ ಹಿಂದೆಯೆ ಕಳಿಸಿದ್ದರು. ಅಂದು ನಾನು ಹೊರತರುತ್ತಿದ್ದ "ಕನ್ನಡ ಕಲಿ" ಮ್ಯಗ್‌ಝೀನ್‌ನಲ್ಲಿ ಕಾರಣಾಂತರಗಳಿಂದ ಪ್ರಕಟಿಸಲಾಗಲಿಲ್ಲ. ಕಡತದಲ್ಲಿ, ಹುದುಗಿ ಹೋಗಿದ್ದ ಈ ಲೇಖನ ಮತ್ತೆ ಕೈಗೆ ಸಿಕ್ಕಿದೆ. ಸತ್ಯನಾರಾಯಣ ಅಂದರೆ ಯಾರು? ಉಳಿದ ನಾರಾಯಣರೆಲ್ಲ ಸುಳ್ಳು ದೇವರುಗಳೆ? ಈತ ವೇದ ಪುರಾಣಗಳಲ್ಲಿ ಇಲ್ಲ! ಹಾಗಾದರೆ ಈತ ಹುಟ್ಟಿಕೊಂಡದ್ದು ಹೇಗೆ? ಯಾವಾಗ? ನಿಜವೋ ಮೂಢ ನಂಬಿಕೆಯೋ, ಒಳ್ಳಯದೋ ಕೆಟ್ಟದ್ದೋ? ಈತ ವಿಷ್ಣುವೆ? ಕೋಟಿ ದೇವ-ದೇವತೆಗಳಲ್ಲಿ ಈತನ ಸ್ಥಾನ ಯಾವುದು? ಈತನ ಜನಪ್ರಿಯತೆಯ ಗುಟ್ಟೇನು? ಹೀಗೆ, ಹಾವನೂರರು ಈ ಲೇಖನದಲ್ಲಿ ಸತ್ಯನಾರಾಯಣನ ಸತ್ಯಾಸತ್ಯತೆಯನ್ನೆ ಕೆದಕಿ ನೋಡಿದ್ದಾರೆ. ಎಲ್ಲಿಯ ವರೆಗೆ ಸತ್ಯನಾರಾಯಣನ ಪೂಜೆ ನಡೆಯುತ್ತದೋ ಅಲ್ಲಿಯ ವರೆಗೆ ಈ ಲೇಖನ ಪ್ರಸ್ತುತವೆ. ಹಾಗಾಗಿ, ಇದನ್ನು ಸಂಕೋಚವಿಲ್ಲದೆ ಇಂದು ನಿಮ್ಮ ಮುಂದೆ ಇಡುತ್ತಿದ್ದೇನೆ. - ವಿಶ್ವೇಶ್ವರ ದೀಕ್ಷಿತ ]ಪೂರ್ತಿ ಲೇಖನವನ್ನು ಇಲ್ಲಿ ಓದಿ: https://kannadakali.com/article/culture/satyanarayana.html 0:00 ಆರಂಭ 0:10 ಮುಮ್ಮಾತು 01:50.0 ದೇವ ದೇವತೆಗಳ ಪೈಪೋಟಿ 06:42.5 ದೇವ‌ ಒಬ್ಬ; ನಾಮ ಹಲವು 40:42.5 ಉಪದೇವತೆಗಳಿಗೇ ಉಪಚಾರ 04:39.0 ರೇವಾಖಂಡದ ಅರೆ ಸತ್ಯ 06:04.0 ಸತ್ಯನಾರಾಯಣನ ಹುಟ್ಟು ಎಂದು? 06:34.0 ಪುರಾಣ ಕಾಲವೆ? 59:18.5 ಮಧ್ಯ ಕಾಲೀನವೆ? 04:42.5 ಇತ್ತೀಚೆ, ಎರಡು ಶತಮಾನಗಳ ಹಿಂದೆಯೆ? 10:48.0 ಡಾ| ಡಿ. ಡಿ. ಕೋಸಂಬಿ ಏನು ಹೇಳುತ್ತಾರೆ? 54:42.5 ನಿಜವೋ? ಪ್ರಾಮಾಣಿಕವೋ? 13:29.0 ಸತ್ಯನಾರಾಯಣ ಪ್ರಸಾದ 43:42.5 ಸತ್ಯನಾರಾಯಣ = ವಿಷ್ಣು? 45:42.5 ಪೂಜೆಯ ಸಾರ್ವತ್ರಿಕತೆ 31:42.5 ಪೂಜೆ: ಅಂದು - ಇಂದು

    18 min
  8. 02/26/2025

    ಕಂತು 2: ಭಜ ಗೋವಿಂದಂ (ಮೋಹಮುದ್ಗರ) Bhaja Govindam - ಆದಿ ಶಂಕರ ಮತ್ತು ಶಿಷ್ಯರು

    👍 Like it? ...... ⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠Subscribe to our newsletter⁠ "ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ‌ ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ‌ ಸ್ವರೂಪದತ್ತ ದಾರಿ ತೋರಿಸುವ ಕೃತಿ. ಬಾಳಿನ ಗುರಿ ಏನು? ಗಳಿಕೆಯ ಆಸೆ ಏಕೆ? ಸತ್ಯ ಯಾವುದು, ಮಿಥ್ಯೆ ಯಾವುದು? ಪ್ರಾಪಂಚಿಕ ಹೊರ ತಿಳಿವೋ, ತನ್ನ ಒಳ ತಿಳಿವೋ? ಇವೆಲ್ಲವನ್ನೂ ನೇರವಾಗಿ ಉತ್ತರಿಸುತ್ತ ಶಂಕರರು, ಸಂಸಾರದ ಪೊಳ್ಳುತನ, ಮನುಷ್ಯನ ಡಂಬಾಚಾರ, ವ್ಯರ್ಥ ಹೋರಾಟಗಳನ್ನು ಬಯಲಿಗೆ ಎಳೆಯುತ್ತಾರೆ. ನೈಜವನ್ನು ಕಂಡುಕೊಳ್ಳಲು ಅನುಸರಿಸಬೇಕಾದ ವೇದಾಂತ ತತ್ವಗಳನ್ನು ಇಲ್ಲಿ ಬಿಗಿಯಾಗಿ ಹೆಣೆದಿದ್ದಾರೆ. ಪಲ್ಲವಿ ಎಂದು ಗಣಿಸಲಾದ ಮೊದಲ ನುಡಿ ಮತ್ತು ಮುಂದಿನ ಹನ್ನೆರಡು ನುಡಿಗಳನ್ನು ಸ್ವತಃ ಶಂಕರರು ರಚಿಸಿದ್ದಾರೆ. ಇವನ್ನು "ದ್ವಾದಶ ಮಂಜರಿಕಾ ಸ್ತೋತ್ರ" (ಹನ್ನೆರಡು ಹೂಗಳ ಗೊಂಚಲು) ಎಂದು ಗುರುತಿಸಲಾಗಿದೆ. ಇವುಗಳಿಂದ ಸ್ಫೂರ್ತಿಗೊಂಡ ಅವರ ಹದಿನಾಲ್ಕು ಶಿಷ್ಯರು ಒಂದೊಂದು ನುಡಿಗಳನ್ನು ಸೇರಿಸಿದರು; ಅದೇ ಚತುರ್ದಶ ಮಂಜರಿಕಾ ಸ್ತೋತ್ರ. ಮತ್ತೆ ನಾಲ್ಕು ನುಡಿಗಳನ್ನು ಶಂಕರರು ರಚಿಸಿ ಒಟ್ಟು ೩೧ ನುಡಿಗಳ ಮೋಹ ಮುದ್ಗರವನ್ನು ಪೂರ್ತಿಗೊಳಿಸಿದರು. ಇದರ ಸರಳ ಕನ್ನಡ ಅನುವಾದ ಇಲ್ಲಿದೆ ಪದ್ಯರೂಪದಲ್ಲಿ.ಕಂತು ೧: ನುಡಿ ೧ – ೧೩, ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲುಕಂತು ೨: ನುಡಿ ೧೪ – ೨೭ಚತುರ್ದಶ ಮಂಜರಿಕಾಕಂತು ೩: ನುಡಿ ೨೮ – ೩೧ಉಪಸಂಹಾರಕನ್ನಡಕ್ಕೆನೆನೆ ಗೋವಿಂದನವಿಶ್ವೇಶ್ವರ ದೀಕ್ಷಿತ ---- ಕೆಲವರು ಕೆಲವು ಪದಗಳ ಅನುವಾದದ ಬಗ್ಗೆ ಕೇಳಿದ್ದೀರಿ. ನನ್ನ ವಿಚಾರ ಹೀಗಿದೆ: ಡುಕೃಂಕರಣೇ:ಸಾಮಾನ್ಯವಾಗಿ ಇದನ್ನು (ಇಡಿಯ) ವ್ಯಾಕರಣ ಎಂದು ತಿಳಿಯಲಾಗಿದೆ. ಭಾಷೆ, ಆಲೋಚನೆಗಳು ಮತ್ತು ಜ್ಞಾನವನ್ನು ಹಿಡಿದಿಡುವ ಮತ್ತು ಸಂವಹಿಸುವ ಸಾಧನವಾದರೆ, ವ್ಯಾಕರಣವು ಹಾಗೆ ಮಾಡಲು ಒಂದು ಚೌಕಟ್ಟು ಮತ್ತು ನಿಯಮಗಳನ್ನು ಒದಗಿಸುತ್ತದೆ. ಆದಾಗ್ಯೂ ನಿಯಮಗಳೇ ನಿಜವಾದ ಜ್ಞಾನವಲ್ಲ. ಜ್ಞಾನ ಸಂವಹನೆಗೆ ಅಗತ್ಯವಿದ್ದರೂ ವ್ಯಾಕರಣವೇ (syntax)ಗುರಿಯಲ್ಲ. ವ್ಯಾಕರಣ (syntax)ಮೇಲ್ಮೈ ಜ್ಞಾನವಾದರೆ, ಅರ್ಥ (symantics)ಆಂತರಿಕ ನೈಜ ಜ್ಞಾನವಾಗಿದೆ. ರೂಪ(form)ವನ್ನೆ ಸ್ವರೂಪ(substance)ಎಂದು ತಿಳಿಯುವುದು ಮೌಢ್ಯ. ಶಂಕರರು, "ಭಜ ಗೋವಿಂದಂ" ರಚನೆಯ ಉದ್ದಕ್ಕೂ, ಆಚರಣೆಗಳು, ಭೌತಿಕತೆ, ನಡವಳಿಕೆಗಳು, ಮತ್ತು ಜೀವನ ನಿಯಮಗಳು ಎಲ್ಲವನ್ನೂ ಮೀರಿ, ಅವುಗಳ ಟೊಳ್ಳುತನವನ್ನು ಕಂಡು, ನಮ್ಮ ನೈಜ ಸ್ವರೂಪವನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ. ಆ ಭಾವದಲ್ಲಿ, "ಒಳ ತಿಳಿವು" ಆಂತರಿಕ ಮತ್ತು ನಿಜವಾದ ಜ್ಞಾನವಾದರೆ "ಡುಕೃಂಕರಣೆ"ಯನ್ನು "ಹೊರ ತಿಳಿವು" ಎಂದು ಅನುವಾದಿಸಿದ್ದೇನೆ. ಈ ಕೆಲವು ಕೊಂಡಿಗಳು ತಿಳಿದುಕೊಳ್ಳಲು ಸಹಕಾರಿಯಾಗಬಹುದು: ⁠https://nivedita2015.wordpress.com/2015/09/25/grammatical-aspects-in-bhaja-govindam-verse-1/⁠⁠https://www.reddit.com/r/sanskrit/comments/5z3e1m/translating_dukrjkarane_any_hints/⁠ಮೂಢಮತೇ: ಇದಕ್ಕೆ ಕೆಲವರು "ಮಂದಮತಿ" ಅಥವ ಕೇವಲ "ಮನವೇ" ಎನ್ನಬಹುದಲ್ಲ ಎಂದಿದ್ದಾರೆ. ಮೊದಲನೆಯದಾಗಿ, ಇಲ್ಲಿ ಮೂಢ ಎನ್ನುವುದಕ್ಕೆ ಅಜ್ಞ/ತಿಳಿಗೇಡಿ ಎನ್ನುವ ಸಾಮಾನ್ಯ ಅರ್ಥ ಇದೆ. ಭ್ರಮೆಗೊಳಗಾದವ, ಮರುಳ, ಮಂಕು ಹಿಡಿದವ ಎನ್ನುವದು ಇಲ್ಲಿ ಔಚಿತ್ಯಪೂರ್ಣವಾಗಿದೆ. ಅಂದರೆ ಮಾಯೆಯ ಜಾಲದಲ್ಲಿ ಸಿಕ್ಕು, ತನ್ನ ನಿಜ ಸ್ವರೂಪವನ್ನು ಅರಿಯದೆ, ಬೇರೆಯದಕ್ಕೆ ತಾ ಎಂದು ಅಂಟಿಕೊಂಡಿರುವವ ಎನ್ನುವುದು ಶಂಕರರ ತಾತ್ವಿಕ ವಿಚಾರಕ್ಕೆ ಹೊಂದಿಕೆಯಾಗುತ್ತದೆ. "ಮತಿ" ಎಂದರೆ ವಿವೇಚನೆಯ ಶಕ್ತಿ ಉಳ್ಳದ್ದು; ಮನಸ್ಸು ಎನ್ನುವುದಕ್ಕಿಂತ ವಿಶಿಷ್ಟವಾದದ್ದು. ವಿವೇಕ ಚೂಡಾಮಣಿಯ ಕರ್ತೃ ಆದ ಶಂಕರರು ಇದನ್ನು ಉದ್ದೇಶಪೂರ್ವಕ ಉಪಯೋಗಿಸಿದ್ದಾರೆ. ಆದ್ದರಿಂದ ಇದನ್ನು "ಮನ" ಎಂದು ಬದಲಾಯಿಸುವುದು ತಕ್ಕುದಲ್ಲ ಎನಿಸುತ್ತದೆ. ಮೇಲಾಗಿ, ಮೂಲದಲ್ಲಿ ಇರುವ ಮೂಢ ಪದವನ್ನು ಬಿಟ್ಟುಬಿಡುವುದೂ ಸರಿ ಅಲ್ಲ; ಅನುವಾದ ಅಂದರೆ (ಪದಶಃ ಅಲ್ಲದಿದ್ದರೂ) ಮೂಲಕ್ಕೆ ಆದಷ್ಟು ಬದ್ಧವಾಗಿರಬೇಕು.ಎರಡನೆಯದಾಗಿ, ಮಂದ ಎನ್ನುವುದು ಮೂಢ ಪದಕ್ಕೆ ಅನ್ವರ್ಥ ಪದ ಆದರೂ ಬೇರೆ ಅರ್ಥವೂ (slow, dull, dim...) ಬರಬಹುದು, ಅಲ್ಲದೆ, ಒಂದು ಸಂಸ್ಕೃತ ಪದಕ್ಕೆ ಬದಲಾಗಿ (ಕಾರಣ ಇಲ್ಲದೆ) ಇನ್ನೊಂದು ಸಂಸ್ಕೃತ ಪದ ಹಾಕಿದರೆ ಅದಕ್ಕೆ ಕನ್ನಡ ಅನುವಾದ ಏಕೆ ಅನ್ನಬೇಕು? -- ಚತುರ್ದಶ ಮಂಜರಿಕಾ 00:04 ೧ ಭಜ ಗೋವಿಂದಂ ಭಜ ಗೋವಿಂದಂ 00:53 ೨ ಮೂಢ ಜಹೀಹಿ ಧನಾಗಮತೃಷ್ಣಾಂ 01:45 ೩ ನಾರೀಸ್ತನಭರನಾಭೀದೇಶಂ 02:26 ೪ ನಲಿನೀದಲಗತಜಲಮತಿತರಲಂ 03:10 ೫ ಯಾವದ್ವಿತ್ತೋಪಾರ್ಜನಸಕ್ತಃ 03:55 ೬ ಯಾವತ್‌ ಪವನೋ ನಿವಸತಿ ದೇಹೇ 04:40 ೭ ಬಾಲಸ್ತಾವತ್‌ ಕ್ರೀಡಾಸಕ್ತಃ05:25 ೮ ಕಾ ತೇ ಕಾಂತಾ? ಕಸ್ತೇ ಪುತ್ರಃ? 06:10 ೯ ಸತ್ಸಂಗತ್ವೇ ನಿಸ್ಸಂಗತ್ವಂ 06:49 ೧೦ ವಯಸಿ ಗತೇ ಕಃ ಕಾಮವಿಕಾರಃ? 07:29 ೧೧ ಮಾ ಕುರು ಧನ ಜನ ಯೌವನ ಗರ್ವಂ 08:09 ೧೨ ದಿನಯಾಮಿನ್ಯೌ, ಸಾಯಂ ಪ್ರಾತಃ 08:54 ೧೩ ಕಾ ತೇ ಕಾಂತಾ ಧನಗತಚಿಂತಾ? 09:40 ಕೃತಜ್ಞತೆ, ಸಂಪರ್ಕ

    12 min

About

Explore varied topics to unlock the secrets of Kannada Language ಕನ್ನಡದ ಗುಟ್ಟನ್ನು ರಟ್ಟು ಮಾಡುವ ವಿವಿಧ ವಿಷಯಗಳ ವಿಚಾರ Read at http://kannadakali.com Watch at http://youtube.com/channel/UCCON6n4lEgj6NsPqCLZdDSw Kannada Kali : Kannadada Guttu