SriRamachandrapura Matha

SriRamachandrapura Matha

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

  1. Sep 27

    ಗೋ ಘೃತವೇ ಏಕೆ ಸರ್ವಶ್ರೇಷ್ಠ? -ಅನ್ನಂ ಬ್ರಹ್ಮ 60 | Why is Desi Cow Ghee the Best of All? - Annam Brahma 60

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಗೋವಿನಿಂದ ಹಾಲನ್ನು ಪ್ರೀತಿ, ವಾತ್ಸಲ್ಯದಿಂದ ಪಡೆಯಬೇಕೇ ಹೊರತು ಯಂತ್ರಗಳಿಂದ ಕರೆಯಬಾರದು*ತುಪ್ಪ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸುವುದು ವಿಷಕಾರಿ*ಇಂದಿನ ಸಂಕರ ತಳಿಯ ಹಸುಗಳು ಪವಿತ್ರ ಹಾಗೂ ಅಪವಿತ್ರಗಳ ಮಿಶ್ರಣ, ಅವುಗಳಿಂದ ದುಷ್ಪರಿಣಾಮವೇ ಹೆಚ್ಚು*ದೇಸಿ ಗೋವು ನಿರಾಭರಣ ಸುಂದರ; ಅದರ ಬಣ್ಣ, ಸುಗಂಧ, ಸ್ಪರ್ಶದ ಹಿತ ಎಲ್ಲವೂ ನೈಸರ್ಗಿಕ*ಮನುಷ್ಯ ತನ್ನ ಮನಸ್ಸಿಗೆ ಬಂದಹಾಗೆ ಸೃಷ್ಟಿಯಲ್ಲಿ ಬದಲಾವಣೆ ಮಾಡಲು ಹೊರಟಾಗ, ಆಗುವುದೆಲ್ಲವೂ ಅನರ್ಥಕ್ಕೆ ಕಾರಣವಾಗುತ್ತದೆ*ದೇಸಿ ಗೋವು, ಎಮ್ಮೆ ಮತ್ತು ಮಿಶ್ರತಳಿಯ ಹಸುವಿನ ತುಪ್ಪಗಳಿಗೆ ಏನೆಲ್ಲಾ ವ್ಯತ್ಯಾಸಗಳಿವೆ?*ಆಧುನಿಕ ವಿಜ್ಞಾನವು ದೇಸಿ ಗೋವಿನ ಹಾಲನ್ನು A2 ಮತ್ತು ಮಿಶ್ರತಳಿ ಹಸುವಿನ ಹಾಲನ್ನು A1 ಎಂಬುದಾಗಿ ಹೇಗೆ ವಿಂಗಡಿಸಿದೆ?*ಶುದ್ಧ ದೇಸಿ ಗೋವಿನ ತುಪ್ಪವು ಕ್ಯಾನ್ಸರ್ ನಿರೋಧಕ ಗುಣವನ್ನು ಹೊಂದಿದೆ*ಆಧುನಿಕ ಕ್ರಮದ ತುಪ್ಪ ಪ್ರಾಣಿಜನ್ಯ ಕೊಬ್ಬು ಮಾತ್ರ, ಅದನ್ನು "ಘೃತ" ಎಂದು ಪರಿಗಣಿಸಲು ಸಾಧ್ಯವಿಲ್ಲ!*ಜನನದಿಂದ ಮರಣದವರೆಗೆ ಘೃತದ ಬಳಕೆ ಇದೆ!*ತುಪ್ಪ ಬೆಲೆಕಟ್ಟಲಾಗದ ಅನರ್ಘ್ಯ ರತ್ನ!26-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಗೋ ಘೃತವೇ ಏಕೆ ಸರ್ವಶ್ರೇಷ್ಠ? -ಅನ್ನಂ ಬ್ರಹ್ಮ 60 | Why is Desi Cow Ghee the Best of All? - Annam Brahma 60
  2. Sep 27

    ಆತ್ಮಸಾಧನೆಯಲ್ಲಿ ಘೃತದ ಪಾತ್ರ -ಅನ್ನಂ ಬ್ರಹ್ಮ 59| Fuel for the Soul: Ghee in Atma-Sadhana -Annam Brahma 59

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ದೇವತೆಗಳ ಧಾಮಕ್ಕೆ ನಾವು ಅಂತರ್ಮಾರ್ಗದ ಮೂಲಕ ಹೋಗಿ ಸೇರಬೇಕು ಅದೇ "ಸಾಧನೆ"*ಭಗವಂತ ಘೃತದ ಮೂಲಕ ನಾವು ಸಮರ್ಪಿಸಿದ್ದನ್ನು ಸ್ವೀಕರಿಸುತ್ತಾನೆ*ಘೃತವು ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆ*ಘೃತವು ಪಾಪನಾಶಕ; ಪಾಪ ನಾಶವೇ ಸಾಧನೆ!*ಘೃತವು ಸಾಧಕನಿಗೆ ತಂಪನ್ನು ಕೊಟ್ಟು, ಅಗ್ನಿ ವೃದ್ಧಿಯನ್ನು ಮಾಡುತ್ತದೆ*ಸಾಧನೆಯಲ್ಲಿ ಶರೀರ ಸ್ಥಿರವಾಗಿರಬೇಕು ಹಾಗೂ ಮನಸ್ಸು ಏಕಾಗ್ರವಾಗಿರಬೇಕು*ಮುಗ್ಧ ಮಗುವಿನ ನಗು ~ ಮಹಾಯೋಗಿಯ ನಗು ಎರಡಕ್ಕೂ ವ್ಯತ್ಯಾಸವಿಲ್ಲ, ಅದು ಪರಿಶುದ್ಧ! *ಆತ್ಮಸಾಧನೆ, ಸಿದ್ಧಿ ಆದಮೇಲೆ ಪ್ರಪಂಚಕ್ಕೆ ಒಳಿತನ್ನು ಹಂಚಬೇಕು*"ತುಪ್ಪ" ~ ದೇವರನ್ನು ತೋರಿಸುವ ಗುರು, ಅದರಲ್ಲಿ ಅನಂತ ಗುಣಗಳಿವೆ! *ಆಹಾರವಾಗಿ, ಪಾಪಹರ ದ್ರವ್ಯವಾಗಿ, ಸಾಧಕನಿಗೆ ಸಾಧನೆಗೆ ಬೇಕಾಗುವ ಎಲ್ಲಾ ಅನುಕೂಲಗಳನ್ನು ಒದಗಿಸಿಕೊಡುವ ಭಗವದನುಗ್ರಹ ದ್ರವ್ಯವೇ ~ "ಘೃತ"25-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಆತ್ಮಸಾಧನೆಯಲ್ಲಿ ಘೃತದ ಪಾತ್ರ -ಅನ್ನಂ ಬ್ರಹ್ಮ 59| Fuel for the Soul: Ghee in Atma-Sadhana -Annam Brahma 59
  3. Sep 27

    ಆತ್ಮಸಾಧನೆಯಲ್ಲಿ ಘೃತದ ಪಾತ್ರ -ಅನ್ನಂ ಬ್ರಹ್ಮ 58| Fuel for the Soul: Ghee in Atma-Sadhana -Annam Brahma 58

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಗುಜರಾತಿನ ಕಾಮನಾಥ ಮಹಾದೇವ ಮಂದಿರದಲ್ಲಿ 650 ವರ್ಷದ ಹಳೆಯ ಘೃತವಿದೆ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ!*ಪೂರ್ಣಾರೋಗ್ಯವೇ ಆತ್ಮಜಾನ!*ಜೀವನ ನಡೆಸಲು ಪಾರಂಪರಿಕವಾಗಿ ಏನೆಲ್ಲಾ ಹೇಳಲ್ಪಟ್ಟಿದೆಯೋ ಅದೆಲ್ಲವೂ ಆತ್ಮಜ್ಞಾನಕ್ಕೂ ಹಿತ, ಆರೋಗ್ಯಕ್ಕೂ ಹಿತ*ತುಪ್ಪ ಸೇವನೆ ಮಾಡುವಾಗ ಆರೋಗ್ಯ, ಆತ್ಮಜ್ಞಾನದ ಸಂಕಲ್ಪ ದೃಢವಾದರೆ ಅದರ ಫಲ ಹೆಚ್ಚು*ತುಪ್ಪದ ನಿರ್ಮಲತೆ, ಪಾರದರ್ಶಕ ರೂಪ, ಸುಗಂಧ, ಬಣ್ಣ ಇವೆಲ್ಲವೂ ಪರಮಾತ್ಮನ ಗುಣಗಳನ್ನು ನೆನಪಿಸುತ್ತವೆ*ಹಾಲು ಮತ್ತು ತುಪ್ಪವನ್ನು ಸತ್ತ್ವಗುಣದ ದ್ರವರೂಪ ಎನ್ನಬಹುದು; ಅದು ಪರಮ ಸಾತ್ತ್ವಿಕ, ಹಾಗಾಗಿ ಸಮೃದ್ಧವಾಗಿ ಉಪಯೋಗಿಸಬೇಕು*ಹಾಲು ಮತ್ತು ತುಪ್ಪವನ್ನು ಇತರ ಸತ್ತ್ವ ಪದಾರ್ಥದೊಂದಿಗೆ ಬೆರೆಸಬೇಕೇ ವಿನಃ ರಜಸ್ಸು, ತಮ್ಮಸ್ಸು ಗುಣಗಳುಳ್ಳ ಪದಾರ್ಥದೊಂದಿಗೆ ಸೇರಿಸಬಾರದು*ಯೋಗಿಗಳು ಹಿಮಾಲಯದಲ್ಲಿ ಸಾಧನೆ ಮಾಡಲು ಪ್ರಮುಖ ಕಾರಣವೇನು?*ಆತ್ಮಸಾಧನೆಗೆ ಪೂರಕವಾಗಿ ತುಪ್ಪವು ಹೇಗೆಲ್ಲಾ ಉಪಯೋಗವಾಗುತ್ತದೆ?24-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಆತ್ಮಸಾಧನೆಯಲ್ಲಿ ಘೃತದ ಪಾತ್ರ -ಅನ್ನಂ ಬ್ರಹ್ಮ 58| Fuel for the Soul: Ghee in Atma-Sadhana -Annam Brahma 58
  4. Sep 27

    ಘೃತ - ಸರ್ವಸ್ನೇಹೋತ್ತಮ - ಅನ್ನಂ ಬ್ರಹ್ಮ 57 | Ghee - The King of Healthy Fats - Annam Brahma 57

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಎಳ್ಳೆಣ್ಣೆಯಲ್ಲಿರುವ ಉತ್ತಮ ಗುಣಗಳು ಬೇರೆ ಎಣ್ಣೆಯಲ್ಲಿ ಇಲ್ಲ!*ಜಿಡ್ಡಿನ ಅಂಶ ಇರುವ ಪದಾರ್ಥಗಳಲ್ಲಿ 'ತುಪ್ಪ' ಅತ್ಯುತ್ಕೃಷ್ಟ!*ಪನ್ನೀರ್'ಗೆ ನಮ್ಮ ಪೂರ್ವಜರು ನೀಡಿದ ಹೆಸರು 'ಕಿಲಾಟ', ಇದು ಎಲ್ಲರಿಗೂ ಪ್ರಿಯ ಆದರೆ ಹೆಚ್ಚಿನ ಸ್ಥಾನದಲ್ಲಿ ಹಿತವಲ್ಲ*ಹಾಲಿನಿಂದ ಬರುವ ಅನೇಕ ಉತ್ಪನ್ನಗಳಲ್ಲಿ 'ಘೃತ'ವು ಎಲ್ಲಕ್ಕಿಂತ ಉತ್ತಮ!*ತುಪ್ಪ ಹಳತಾದಂತೆ ಅದರ ಗುಣ ಹೆಚ್ಚಾಗುತ್ತಾ ಹೋಗುತ್ತದೆ*ನೂರು ವರ್ಷ ಕಳೆದ ತುಪ್ಪ ~ ಕುಂಭಸರ್ಪಿ; ನೂರಾಹನ್ನೊಂದು ವರ್ಷ ಕಳೆದ ತುಪ್ಪ ~ ಮಹಾಘೃತ! *ಒಂದು ವರ್ಷ ಕಳೆದ ತುಪ್ಪ ತ್ರಿದೋಷವನ್ನು ದೂರ ಮಾಡುತ್ತದೆ; ಹತ್ತು ವರ್ಷ ಕಳೆದ ತುಪ್ಪವು ಮುಪ್ಪನ್ನು ತಡೆಯುತ್ತದೆ*ದೇಹದಲ್ಲಿ ಸಂಗ್ರಹವಾದ ದೋಷಗಳನ್ನು ಹಳತಾದ ತುಪ್ಪವು ಹೊರಹಾಕುತ್ತದೆ!*ದೇಹದ ಅನಗತ್ಯ ಕೊಬ್ಬನ್ನು (Cholesterol) ತುಪ್ಪ ತೆಗೆಯುತ್ತದೆ!*ಏನಾದರೂ ಕಾಯಿಲೆ ಬಂದರೆ ಸ್ವಯಂ ವೈದ್ಯ ಆಗಬಾರದು, ಅದು ಅಪಾಯಕಾರಿ! *ತುಪ್ಪ ಎನ್ನುವುದು ಭೌತಿಕ ದ್ರವ ಮಾತ್ರವಲ್ಲ, ಅದು ದೇವತಾ ಸ್ವರೂಪ! *ತುಪ್ಪದ ಮಹತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು*ತುಪ್ಪವನ್ನು ಹೇಗೆ ಉಳಿಸಬೇಕು, ಬಳಸಬೇಕು, ಗಳಿಸಬೇಕು ಎನ್ನುವ ತಿಳುವಳಿಕೆ ಮುಂದಿನ ಪೀಳಿಗೆಗೆ ತಲುಪಬೇಕು23-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಘೃತ - ಸರ್ವಸ್ನೇಹೋತ್ತಮ - ಅನ್ನಂ ಬ್ರಹ್ಮ 57 | Ghee - The King of Healthy Fats - Annam Brahma 57
  5. Sep 23

    ಘೃತ - ಗುಣಸಾಗರ - ಅನ್ನಂ ಬ್ರಹ್ಮ 56 | Ghee - The Ocean of Benefits - Annam Brahma 56

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*'ತುಪ್ಪ' ಸ್ಮೃತಿ, ಬುದ್ಧಿ, ಅಗ್ನಿ, ಶುಕ್ರ, ಓಜಸ್ಸು, ಕಫ ಮತ್ತು ಮೇದಸ್ಸನ್ನು ವರ್ಧನಗೊಳಿಸಿ ~ ವಾತ, ಪಿತ್ತ, ವಿಷ, ಉನ್ಮಾದ, ಅಲಕ್ಷ್ಮೀ, ಜ್ವರ ಇವುಗಳನ್ನ ಕಡಿಮೆ ಮಾಡುತ್ತದೆ *ತುಪ್ಪ ಸೇವನೆಯು ನಮ್ಮ ಶರೀರದಲ್ಲಿ ನಿರ್ವಿಶೀಕರಣಕ್ಕೆ (detoxification) ಸಹಾಯ ಮಾಡುತ್ತದೆ*ದೇಹಕ್ಕೆ ಬಣ್ಣವನ್ನು, ಸ್ವರಕ್ಕೆ ಮಾಧುರ್ಯವನ್ನು ಕೊಡುವ ಗುಣ ತುಪ್ಪದಲ್ಲಿ ಇದೆ*ತುಪ್ಪದ ದೀಪ ಹಾಗೂ ಎಣ್ಣೆ ದೀಪಕ್ಕೆ ಇರುವ ವ್ಯತ್ಯಾಸವೇನು?*ತುಪ್ಪ ಕಣ್ಣಿಗೆ ಒಳ್ಳೆಯದು*ಗೋಹತ್ಯೆಯ ಮೂಲ ~ ಗೋಮಹತಿಯ ಅರಿವು ಇಲ್ಲದಿರುವುದು!*ಸಣ್ಣ ಮಕ್ಕಳಿಂದ ~ ವೃದ್ಧರವರೆಗೆ ಎಲ್ಲರೂ ತುಪ್ಪ ಸೇವನೆ ಮಾಡಬೇಕು! *ಪರಾನ್ನ ಭೋಜನ ಮಾಡಬಾರದು!;ಎಲ್ಲಿಯಾದರೂ ಪರಾನ್ನ ಭೋಜನ ಮಾಡುವ ಸಂದರ್ಭ ಬಂದರೆ ಅನ್ನಕ್ಕೆ ತುಪ್ಪದ ಅಭಿಗಾರ ಮಾಡಿದರೆ ಅಂತಹ ಅನ್ನವನ್ನು ಸ್ವೀಕರಿಸಬಹುದು, ತುಪ್ಪವು ದೋಷಗಳನ್ನು ದೂರ ಮಾಡುತ್ತದೆ*ಸದ್ಯೋಘೃತ ಎಂದರೇನು, ಅದು ಏಕೆ ಉತ್ತಮ? *ತುಪ್ಪ ರುಚಿಯನ್ನು ಕೊಡುತ್ತದೆ*ಘೃತವು ಸರ್ವ ಸ್ನೇಹೋತ್ತಮ!22-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||

    ಘೃತ - ಗುಣಸಾಗರ - ಅನ್ನಂ ಬ್ರಹ್ಮ 56 | Ghee - The Ocean of Benefits - Annam Brahma 56
  6. Sep 23

    ಘೃತ - ಸಹಸ್ರವೀರ್ಯ - ಅನ್ನಂ ಬ್ರಹ್ಮ 55 | Ghee - The superfood - Annam Brahma 55

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಗೋವು ಉತ್ಕೃಷ್ಟವಾಗಿದ್ದರೆ, ಅದರ ತುಪ್ಪವು ಅಮೃತವಾಗುತ್ತದೆ*ಹಸು ಮತ್ತು ಎಮ್ಮೆ ಎರಡಕ್ಕೂ ಎಷ್ಟು ವ್ಯತ್ಯಾಸ ಇದೆಯೋ ಅಷ್ಟೇ ವ್ಯತ್ಯಾಸ ದೇಸಿ ಗೋವು ಮತ್ತು ವಿದೇಶದ ಮಿಶ್ರತಳಿಯ ಹಸುವಿಗೆ ಇದೆ *ಮನುಷ್ಯನ ವಿಕೃತಿಯಿಂದ ಗೋವು ಗೋವಾಗಿ ಉಳಿದಿಲ್ಲ!*ಹಾಲನ್ನು ಮಣ್ಣು, ಕಂಚು, ತಾಮ್ರದ ಪಾತ್ರೆಯಲ್ಲಿ ಹದವಾದ ಬೆಂಕಿ ಉರಿಯಲ್ಲಿ ಕಾಯಿಸಬೇಕು*ಕೆನೆಯಿಂದ ಮಾಡಿದ ತುಪ್ಪದ ಸಂಸ್ಕಾರ ಸರಿಯಲ್ಲ!*ಮಿಶ್ರತಳಿಯ ಗೋವಿನ ತುಪ್ಪ ಅಥವಾ ಕೆನೆಯಿಂದ ಮಾಡಿದ ತುಪ್ಪವು ಕೇವಲ ಕೊಬ್ಬಿನಿಂದ ತುಂಬಿದೆ ವಿನಃ ಅದಕ್ಕೆ ದೇಸಿ ಗೋವಿನ ತುಪ್ಪದ ಗುಣಗಳಿಲ್ಲ*ಹಾಲು ಮತ್ತು ನೀರನ್ನು ಎಷ್ಟು ಸಲ ಬೇಕಾದರೂ ಕಾಯಿಸಬಹುದು ಆದರೆ ಅನ್ನ, ಸಾರು ಇತರೆ ಪದಾರ್ಥಗಳನ್ನು ಎರಡನೆಯ ಸಲ ಬೇಯಿಸಬಾರದು!*ಗೋಘೃತವು ಯಾವ ಗುಣಗಳನ್ನು ಹೆಚ್ಚು ಮಾಡಿ ಯಾವುದೆಲ್ಲವನ್ನು ಕ್ಷಯಿಸುತ್ತದೆ?21-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಘೃತ - ಸಹಸ್ರವೀರ್ಯ - ಅನ್ನಂ ಬ್ರಹ್ಮ 55 | Ghee - The superfood - Annam Brahma 55
  7. Sep 23

    ಮನೆಯೊಳಗೊಂದು ಸಮುದ್ರಮಥನ - ಅನ್ನಂ ಬ್ರಹ್ಮ 54 | Churning an Ocean at Home - Annam Brahma 54

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಮಗೆ ಆಶೀರ್ವಾದ ಮಾಡಿ ಭಗವಂತ ಕೊಟ್ಟಿರುವುದೇ 'ಘೃತ'!*ಗಂಗೆ ಮತ್ತು ಗೋವು ಎರಡೂ ಮನುಷ್ಯರ ಉದ್ಧಾರಕ್ಕಾಗಿ ಇರುವಂತಹದ್ದು*ಸಾತ್ತ್ವಿಕ ವಸ್ತುಗಳನ್ನು ಉಪಯೋಗ ಮಾಡದೇ ಇದ್ದಾಗ ಪ್ರಕೃತಿ ಅದನ್ನು ಹಿಂದೆ ತೆಗೆದುಕೊಳ್ಳುತ್ತದೆ*ಗೃಹಸ್ಥನಾದವನು 'ತುಪ್ಪ' ಇಲ್ಲದ ಊಟವನ್ನು ಸ್ವೀಕಾರ ಮಾಡಬಾರದು!*'ತುಪ್ಪ' ಪಾಪ ಪರಿಹಾರ ಮಾಡುತ್ತದೆ ಹಾಗೂ ಅಗ್ನಿ, ಬುದ್ಧಿ ಎರಡನ್ನೂ ವೃದ್ಧಿ ಮಾಡುತ್ತದೆ *"ಘೃತ" ಅಮೃತಕ್ಕೆ ಸಮಾನ! *ಮಜ್ಜಿಗೆ ಅನೇಕ ರೋಗಗಳಿಗೆ ಔಷಧ *ತಂಪುಪೆಟ್ಟಿಗೆಯಲ್ಲಿ ಇಟ್ಟು ಸಂಸ್ಕಾರ ಮಾಡಿದ ತುಪ್ಪವನ್ನು ಸ್ವೀಕಾರ ಮಾಡಿದರೆ ನಾನಾ ರೋಗಗಳಿಗೆ ಕಾರಣವಾಗುತ್ತದೆ *ತುಪ್ಪದ ಸುಗಂಧವು ಸತ್ತ್ವಗುಣವನ್ನು ಜಾಗೃತಗೊಳಿಸಿ ಮನಸ್ಸಿಗೆ ಆಹ್ಲಾದ ಉಂಟುಮಾಡುತ್ತದೆ*ತುಪ್ಪದಿಂದ ಓಜಸ್ಸು, ಆಯಸ್ಸು, ತೇಜಸ್ಸು, ವಯಸ್ಸು, ತಪಸ್ಸು ಎಲ್ಲವನ್ನೂ ಪಡೆಯಬಹುದು20-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಮನೆಯೊಳಗೊಂದು ಸಮುದ್ರಮಥನ - ಅನ್ನಂ ಬ್ರಹ್ಮ 54 | Churning an Ocean at Home - Annam Brahma 54
  8. Sep 23

    ವೇದ - ಆಯುರ್ವೇದಗಳಲ್ಲಿ ವಿರೋಧವಿದೆಯೇ? | Is there contradiction in Veda and Ayurveda? - Annam Brahma 53

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ವೇದದಲ್ಲಿ ಮಳೆಯ ನೀರಿನ ಬಗ್ಗೆ ಏನು ಉಲ್ಲೇಖವಿದೆ?*ಯಜ್ಞದ ಅಂತ್ಯದಲ್ಲಿ ಮಳೆ ಬಂದರೆ ಶುಭ ಎಂದರ್ಥ*ಹುಣ್ಣಿಮೆ ರಾತ್ರಿಯ ಚಂದ್ರನ ಕಿರಣಗಳು ಬಿದ್ದ ನೀರು ಸೇವನೆಗೆ ಉತ್ತಮ!*ಬದುಕಲು ಬೇಕು "ಜಲ", ಬದುಕು ಸಾರ್ಥಕವಾಗಲು ಬೇಕು "ಘೃತ"!*ಧರ್ಮಶಾಸ್ತ್ರದ ಪ್ರಕಾರ ತುಪ್ಪವಿಲ್ಲದೆ ಊಟವನ್ನೇ ಮಾಡಬಾರದು, ತುಪ್ಪ ಅನಿವಾರ್ಯ ಮತ್ತು ಅತ್ಯವಶ್ಯ! *ಬಲ ಮತ್ತು ಆರೋಗ್ಯವನ್ನು ವೃದ್ಧಿಸಿಕೊಳ್ಳಲು ತುಪ್ಪವನ್ನು ಹೇಗೆ ಉಪಯೋಗಿಸಬೇಕು?*ಬೆಳಿಗ್ಗೆ ಎದ್ದು ತುಪ್ಪದಲ್ಲಿ ಮುಖವನ್ನು ನೋಡಿಕೊಂಡರೆ ಬದುಕು ಮಂಗಲವಾಗುತ್ತದೆ ಮತ್ತು ದೀರ್ಘವಾಗುತ್ತದೆ*ಗೋವು ಸೃಷ್ಟಿಯ ಸಾರ, ಕ್ಷೀರ ಗೋವಿನ ಸಾರಕೆನೆಮೊಸರು-ಬೆಣ್ಣೆಗಳು ಗೋಕ್ಷೀರಸಾರಸಾರಗಳ ಸಾರ ಘೃತವಾ ಮಂಗಲದ್ರವದಿಪ್ರತಿಫಲಿಸಿ ನೀನಪ್ಪೆ ಮಂಗಲಾಕಾರಶುದ್ಧ ತುಪ್ಪದಿ ಮುಖವ ನೋಡಿಕೊಳೊ ನೀನೆದ್ದುಚಿರಜೀವನಕೆ ನೋಡು ಸರಳ ಮಾರ್ಗವಿದುನಿನ್ನ ಮುಖ ನಿನಗೆ ಶುಭ, ಸರ್ವ-ಮಂಗಲವಾಜ್ಯಉಭಯಶುಭ ಸೇರೆ ದಿನ ಪರಮ ಶುಭವಹುದು-ಶ್ರೀಕಾವ್ಯ*ಗೋವು ಕೊಡುವುದೆಲ್ಲವೂ ಪರಮ ಶುಭ, ಗೋವಿನ ತ್ಯಾಜ್ಯವೂ ಕೂಡ ನಮಗೆ ಪೂಜ್ಯವಾಗುತ್ತದೆ!*ಜಗತ್ತಿನ ಎಲ್ಲಾ ಸಂಗತಿಗಳು ಸಮಯ ಕಳೆದಂತೆ ಕ್ಷೀಣವಾಗುತ್ತದೆ, ಆದರೆ ಗೋಘೃತ ಮಾತ್ರ ಸಮಯ ಕಳೆದಂತೆ ಗುಣವೃದ್ಧಿಯನ್ನು ಹೊಂದುತ್ತದೆ!19-09-2026ಅಶೋಕೆ, ಗೋಕರ್ಣ

    ವೇದ - ಆಯುರ್ವೇದಗಳಲ್ಲಿ ವಿರೋಧವಿದೆಯೇ? | Is there contradiction in Veda and Ayurveda? - Annam Brahma 53

About

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.