SatisHFaction Kannada Podcast from the US

Satish Hosanagara

The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community. #NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.

  1. 12/30/2025

    Season 1 Final Episode (88)

    Season 1 Final Episode (88) ಸ್ಯಾಟಿಸ್‌ಫ಼್ಯಾಕ್ಷನ್‌ನಿಂದ ನಾನು ಕಲಿತ ಪಾಠ! ಯಾವುದೋ ಒಂದು ಕಾಲದಲ್ಲಿ ಶುರು ಮಾಡಬೇಕಾಗಿದ್ದ ಪಾಡ್‌ಕ್ಯಾಸ್ಟ್ ಅನ್ನು ನಾನು ಶುರು ಮಾಡಿದ್ದು, 2025 ರ ಜನವರಿಯಲ್ಲಿ. ಈ ಪಾಡ್‌ಕ್ಯಾಸ್ಟ್ ಅಂದ್ರೆ ಅದು ಒಂದು ಥರದ expression ಅಷ್ಟೇನೆ. ನಮ್ಮ ನಮ್ಮ ಸಂತೋಷವನ್ನು ಅರಿಸಿ ಹೇಗೆ ನಾವು content ಹುಡುಕಿಕೊಂಡು ಹೋಗ್ತೀವಲ್ಲ. ಹಾಗೇ! ಇದೂ ಕೂಡ ನಮ್ಮ ನಮ್ಮ ದೈನಂದಿನ ಅಗತ್ಯಗಳಲ್ಲಿ ಒಂದು ಅನ್ನಬೇಕು ಅಷ್ಟೇ. Total episodes 88. Ordent fans (listeners) about 25-30 Most of the audience are from USA and India, listeners from Canada, Brazil and UK are about 2%. but I do thank the people from 26 other countries, who are around 1% of the audience. Burkina Faso is a landlocked country in West Africa Top lessons learned Behind the scenes (episode satisfaction & success) Top episodes Community response Season 2 teaser: We will graduate from monologue to a dialogue with stalwarts like Praveen Venkatramu, Hareesh Kadalabalu, Simhadri Santebennur, Archana Acharya, Kannada Shaale Teachers, and others from a Karnataka background. Total audience from 28 countries. 75% USA 15% India ~2% from Canada, Brazil, UK ~1% from 24 other countries

    12 min
  2. 11/26/2025

    ಎಷ್ಟು ದುಡ್ಡು ಇದ್ರೆ ಒಳ್ಳೇದು? (86)

    ಎಷ್ಟು ದುಡ್ಡು ಇದ್ರೆ ಒಳ್ಳೇದು? ಈಗೆಲ್ಲ ಅಮೇರಿಕದಲ್ಲಿ ದೊಡ್ಡ ದೊಡ್ಡ ಕಂಪನಿಗಳು, ಕಾಸ್ಟ್ ಕಟ್ಟಿಂಗ್ ಅನ್ನೋ ಹೆಸರಿನಲ್ಲಿ ಸಾವಿರಾರು ಜನರನ್ನು ಮನೆಗೆ ಕಳಿಸೋದನ್ನ ನೋಡಿದ್ರೆ, ಅಮೇರಿಕದ ಎಂಪ್ಲಾಯ್‌ಮೆಂಟ್ ಸಿಚುವೇಶನ್ ಬದಲಾಗುತ್ತೋ ಇಲ್ಲವೋ ಅನ್ನೋ ಸಂಶಯ ಬರುತ್ತೆ. ನಮ್ಮ ಕಂಪನಿ ಒಂದರಲ್ಲೇ ಸುಮಾರು 13 ಸಾವಿರ ಜನರು ಒಂದೇ ಕಳೆದುಕೊಳ್ಳಬೇಕಾಗಿ ಬಂದಾಗ ಅವರನ್ನೆಲ್ಲ ನೆನೆದು ಒಂದು ಸರತಿ ಕರುಳು ಚುರುಕು ಅಂತು. ಮತ್ತೆ ಮರುಕ್ಷಣ, ಇದೆಲ್ಲ ಕ್ಯಾಪಿಟಲಿಸಮ್ಮಿನ ಲೀಲೆ. ಇಲ್ಲಿ ಯಾರೂ ಯಾವತ್ತೂ ಶಾಶ್ವತರಲ್ಲ, ಯಾರು indispensible ಅಲ್ಲ, ಅನ್ನೋ ಮಾತು ಕೂಡಾ ನೆನಪಿಗೆ ಬಂತು. ಕೆಲಸ ಕಳೆದುಕೊಂಡವರಿಗೆ, ಆಯಾ ಕಂಪನಿಗಳಲ್ಲಿ, ಅವರವರ ಸರ್ವೀಸಿಗೆ ಸಂಬಂಧ ಪಟ್ಟಂತೆ ಒಂದಿಷ್ಟು severence ಬರುತ್ತೆ. ಆದ್ರೆ, ಎಲ್ಲ ಕಂಪನಿಗಳಲ್ಲೂ ಹಾಗೇ ಬರುತ್ತೆ ಅಂತ ಹೇಳೋಕಾಗಲ್ಲ. ನನಗೆ ಗೊತ್ತಿರೋ ಹಾಗೆ, ಕೆಲವು ಕಂಪನಿಗಳಲ್ಲಿ, ಅದೆಷ್ಟೇ ವರ್ಷ ದುಡಿದ್ರೂ, ಒಂದು ತಿಂಗಳ ಸಂಬಳ ಕೊಟ್ಟು ಕೆಲಸಗಾರರನ್ನು ಮನೆಗೆ ಕಳಿಸಿರೋ ನಿದರ್ಶನಗಳೂ ಇವೆ. ಇನ್ನು ಕೆಲವು ಸಂದರ್ಭಗಳಲ್ಲಿ, ಕಂಪನಿಗಳೇನಾದರೂ ಬ್ಯಾಂಕ್ರಪ್ಟ್ ಆದ್ರೆ, ಇರೋ ಸಂಬಳವನ್ನುಕೊಡದೇ ಇರುವ ಸಾಧ್ಯತೆ ಇದೆ. ಹೀಗೆ, ಕ್ಯಾಪಿಟಲಿಸಮ್ಮಿನ ಕೆಲಸ ಅಂದ್ರೆ, ನೀರಿನ ಮೇಲಿನ ಗುಳ್ಳೆಯ ಹಾಗೆ. ಇದ್ದಾಗ ಮಾಡು, ಇಲ್ಲದಾಗ ಮಡಿ ಅನ್ನುವ ಒಂದು ಮಾತಿನಿಂದ ಇಲ್ಲಿಯ ಸ್ಥಿತಿಗತಿಯನ್ನು ಹೇಳಿಬಿಡಬಹುದು. *** ಆದರೆ, ಇವತ್ತಿನ ಟಾಪಿಕ್ಕು, ಕೆಲಸದ ಬಗ್ಗೆ ಅಲ್ಲ. ಹೀಗೆ ಕೆಲಸ ಮಾಡಿ ಜನರು ಈ ಕ್ಯಾಪಿಟಲಿಸಮ್ಮಿನ ಪ್ರಪಂಚದಲ್ಲಿ ತಮ್ಮ ವೆಲ್ತ್ ಅನ್ನು ಒಟ್ಟುಗೂಡಿಸಿಕೊಳ್ಳುತ್ತಾರಲ್ಲ. ಅವರನ್ನ ನೋಡಿ ಒಮ್ಮೆ ಆಶ್ಚರ್ಯ ಆಯಿತು. ಒಂದು ಕಡೆ, ಘಂಟೆಗೆ 18 ಡಾಲರ್ ಗೆ ದುಡಿಯುವ ದುಡಿಮೆ, ಮತ್ತೊಂದು ಕಡೆ, ತಿಂಗಳಿಗೆ ಮಿಲಿಯನ್ ಗಟ್ಟಲೆ ದುಡಿಯುವ ಮಹನೀಯರೂ ಸಿಗುತ್ತಾರೆ. ಹೀಗೆ, ಕ್ಯಾಪಿಟಲಿಸಮ್ಮಿನ ಮತ್ತೊಂದು ಮುಖ ಅಂದ್ರೆ ಡಿವಿಜನ್.

    10 min
  3. 10/29/2025

    ಭಯ ಮತ್ತು ಸೈಕಾಲಜಿಕಲ್ ಸೇಫ಼್ಟಿ (Innovation)

    ಭಯ ಮತ್ತು ಸೈಕಾಲಜಿಕಲ್ ಸೇಫ಼್ಟಿ ಕಳೆದ ತಿಂಗಳು (ಸೆಪ್ಟೆಂಬರ್ 19) ಪ್ರೆಸಿಡೆಂಟ್ ಟ್ರಂಪ್ H1B ವೀಸಾಕ್ಕೆ ಸಂಬಂಧಿಸಿದ ರಿಸ್ಟ್ರಿಕ್ಷನ್‌ಗಳನ್ನು ಅಳವಡಿಸಿದಾಗ, ಮೈನ್‌ಸ್ಟ್ರೀಮ್ ಅಮೇರಿಕದ ವೃತ್ತಪತ್ರಿಕೆಗಳಲ್ಲಿ ಈ ನಿಲುವಿಗೆ ಪೂರಕವಾಗಿ ಅನೇಕ ದನಿಗಳು ಎದ್ದಿದ್ದವು. ಹಾಗೇ ಜನರ ಬೆಂಬಲ ಕೂಡ ವ್ಯಕ್ತವಾಗಿತ್ತು. ಹೀಗೆ, ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಓದಿಕೊಂಡು ಬಂದ ಒಂದು ಲೇಖನಕ್ಕೆ ಉತ್ತರವೆಂಬಂತೆ ಒಂದಿಷ್ಟು ಜನರು ಕಾಮೆಂಟ್ ಹಾಕಿದ್ದರು. ಅದರಲ್ಲೊಬ್ಬರು, ಭಾರತದಂತಹ ದೇಶಗಳು ಅಷ್ಟೊಂದು ಇಂಜಿನಿಯರುಗಳನ್ನು ಹುಟ್ಟು ಹಾಕುವುದೇ ಹೌದಾದರೆ, ಆ ದೇಶದಲ್ಲಿ ಅಷ್ಟೊಂದು ಇನ್ನೋವೇಷನ್ ಏಕೆ ಇನ್ನೂ ಹುಟ್ಟೋದಿಲ್ಲ ಎನ್ನೋ ರೀತಿಯಲ್ಲಿ ಅನಿಸಿಕೆ ಬರೆದಿದ್ದರು. ನಮ್ಮಲ್ಲಿ ಉತ್ಪಾದನೆಗೊಳ್ಳುವ ಗ್ರಾಜುಯೇಟುಗಳು, ಇಂಜಿನಿಯರುಗಳನ್ನು ನಾವು ಸಮರ್ಪಕವಾಗಿ ಬಳಸುತ್ತಿದ್ದೇವೆಯೇ? ಇನ್ನೋವೇಶನ್ ಅನ್ನೋ ವಿಚಾರಕ್ಕೆ ಬಂದರೆ, ಪ್ರಪಂಚದ ಎಲ್ಲ ದೇಶಗಳಿಗೆ ಕಂಪೇರ್ ಮಾಡಿದರೆ ಭಾರತ ಎಷ್ಟನೇ ಸ್ಥಾನದಲ್ಲಿ ನಿಲ್ಲುತ್ತದೆ. ಇನ್ನೋವೇನ್ ಅನ್ನೋದು ಒಂದು ರೀತಿಯ ಹೊಸ ಕಲ್ಪನೆ, ನಾವೀನ್ಯತೆ, ಹೊಸ ಬದಲಾವಣೆ ಇದ್ದ ಹಾಗೆ. ನಾವುಗಳು ನಮ್ಮ ದೈನಂದಿನ ಜೀವನದಲ್ಲಿ status quo ಅನ್ನು ಎಷ್ಟರ ಮಟ್ಟಿಗೆ ಪ್ರಶ್ನಿಸುತ್ತೇವೆ ಎನ್ನುವಲ್ಲಿಯಿಂದ ಈ ಹೊಸ ಶೋಧ ಆರಂಭವಾಗುತ್ತದೆ. ಹಾಗಾದರೆ, ಬರೀ ಹೀಗೆ ಮಾಡು ಎಂದು ಹೇಳಿಕೊಟ್ಟ ಚೋರ್‌ಗಳನ್ನು ಮಾಡೋದರಲ್ಲಿ ಮಾತ್ರ ನಾವು ನಿಸ್ಸೀಮರೇ? ಒಂದು ಅಧ್ಯಯನದ ಪ್ರಕಾರ, ಜಗತ್ತಿನ ಅತಿ ಇನ್ನೋವೇಟಿವ್ ದೇಶಗಳಲ್ಲಿ ಸ್ವಿಟ್ಜರ್‌ಲ್ಯಾಂಡ್, ಸ್ವೀಡನ್, ಯುಎಸ್.ಎ. ಸೌತ್ ಕೊರಿಯಾ, ಸಿಂಗಪೂರ್, ಯುಕೆ, ಫ಼ಿನ್‌ಲ್ಯಾಂಡ್, ನೆದರ್‌ಲ್ಯಾಂಡ್, ಡೆನ್ಮಾರ್ಕ್ ಹಾಗೂ ಇತ್ತೀಚೆಗೆ ಚೈನಾ ದೇಶದ ಹೆಸರೂ ಕೇಳಿಬರುತ್ತದೆ. ತಮ್ಮ ತಮ್ಮ ಆಂತರಿಕ ಸ್ಟ್ರಗಲ್‌ಗಳು ಎಷ್ಟೇ ಇರಲಿ, ಈ ದೇಶಗಳಿಗೆ ಯಾವಾಗಲಾದರೂ ಸ್ವಾತಂತ್ರ್ಯ ಬಂದಿದ್ದಿರಲಿ, ಇವುಗಳೆಲ್ಲವೂ ತಮ್ಮ ತಮ್ಮ ನೆಲೆಯಲ್ಲಿ, ಹೊಸದೊಂದನ್ನು ಹುಡುಕಿಕೊಂಡು, ಅದರಲ್ಲಿ ಯಶಸ್ವಿಗೊಂಡವು. ಚೈನಾದಂತಹ ದೇಶದಲ್ಲಿ, ಸರ್ಕಾರವೇ ಈ ಬಗೆಗೆ ಪ್ರಾಶಸ್ತ್ಯ ಕೊಟ್ಟಿರಲೂ ಬಹುದು. ಹೊರಗಿನಿಂದ ನಾವು ಟೆಕ್ನಾಲಜಿಗಳನ್ನು ಆಮದು ಮಾಡಿಕೊಳ್ಳೋದಿಲ್ಲ, ಎನ್ನುವ ಒಂದೇ ಒಂದು ಮೂಲಮಂತ್ರ ಇನ್ನೋವೇಶನ್ ಅನ್ನು ಪ್ರೋತ್ಸಾಹಿಸಬಹುದು. ಆದರೆ, ಭಾರತದಲ್ಲಿ, ನಾವು ಬೆಳೆದು ಬಂದ ಬಗೆಯನ್ನು ಗಮನಿಸಿದರೆ, ನಮ್ಮನ್ನೆಲ್ಲ ಸೈಕಾಲಜಿ ಮಟ್ಟದಲ್ಲಿ, ಮತ್ತು ಸೈದ್ಧಾಂತಿಕವಾಗಿ ಸದಾ ಹೆದರಿಸಿ ಇಡಲಾಗುತ್ತಿತ್ತು. ಈ ಹೆದರಿಕೆಯಲ್ಲಿ ಕೆಲವೊಮ್ಮೆ ನಾವು ನಿಜ ಹೇಳುವುದಕ್ಕೂ ಹಿಂಜರಿಯುತ್ತಿದ್ದೆವು. ನಿಮಗನ್ಸತ್ತಾ? The environment that we grew up with accommodated questioning? Did we even think about innovation at that time? Or, do we challenge the status quo now? I agree, fear is necessary, but it should not become a bottleneck limiting one's creativity.

    14 min

Ratings & Reviews

5
out of 5
4 Ratings

About

The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community. #NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.