SatisHFaction Kannada Podcast from the US

Satish Hosanagara

The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community. #NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.

  1. Apr 22

    ಸ್ವದೇಶ - ವಿದೇಶ

    ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದು ಅಲ್ಲಿಯವರಾಗಿ ಹೋಗೋದು, ಒಂದು ರೀತಿಯ ಕಹಿ-ಸಿಹಿ ಅನುಭವ ಅನ್ನಬಹುದು. ನಾವು ತೊಂಬತ್ತರ ದಶಕದ ಕೊನೆಯಲ್ಲಿ ಬಂದಂತಹ ಟೆಕ್ನಿಕಲ್ ಕೂಸುಗಳು. ಆಗ, ನಾವು ಬಂದ ಹೊಸದರಲ್ಲಿ, ಯಾವುದಾದರೂ ಕನ್ನಡ ಸಂಘದ ಸಮಾರಂಭಕ್ಕೆ ಹೋದಾಗಲೆಲ್ಲ, ಅಲ್ಲಿ ಮಾತಿಗೆ ಸಿಗುತ್ತಿದ್ದ ಹಿರಿಯರು, "ನಾವು ಬಂದು ೨೫ ವರ್ಷಗಳ ಮೇಲಾಯ್ತು..." ಎಂದು ಹೇಳಿದಾಗಲೆಲ್ಲ, ನಮಗೆಲ್ಲ ಆಶ್ಚರ್ಯ, ವಿಸ್ಮಯ, ಜೊತೆಗೆ ಒಂದು ರೀತಿಯ ಗೊಂದಲ ಕೂಡ ಆಗ್ತಾ ಇತ್ತು. ನಮ್ಮ ಜನರೇಶನ್ನಿನವರು ಏನಿದ್ರೂ ಟೆಕ್ನಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬಂದವರು, ಆದ್ದರಿಂದ ಈ ದೇಶದಲ್ಲಿ ನಾವು ನೋಡಿದ ಕಡಿಮೆ ಹಣ ಎಂದರೆ ಮೂರು ಸಾವಿರ ಡಾಲರುಗಳಷ್ಟು. ಇಲ್ಲಿ ವಿದ್ಯಾರ್ಥಿಗಳಾಗಿ, ವ್ಯಾಸಂಗ ಮತ್ತು ಸಂಶೋಧನೆ ಮಾಡಲು ಬಂದವರ ಹಾಗೆ, ನಾವೇನೂ ಗ್ಯಾಸ್ ಸ್ಟೇಶನ್‌ನಲ್ಲಾಗಲೀ, ಅಂಗಡಿಗಳಲ್ಲಾಗಲೀ ಕೆಲಸ ಮಾಡಿ, ವಾರವಿಡೀ ಬ್ರೆಡ್ ತಿಂದು, ಸೂಪ್ ಕುಡಿದು ಮಲಗಿದ್ದ ಅನುಭವವಂತೂ ನಮ್ಮ ಜನರೇಶನ್ನಿನವರಲ್ಲಿ ಆದದ್ದು ಕಡಿಮೆ ಎನ್ನಬೇಕು. ಅದೇ ಸಮಯದಲ್ಲಿ, ಇಂಟರ್‌ನೆಟ್ಟಿನ ಮಹಿಮೆಯಿಂದ, ದೂರದ ಭಾರತ, ನಾವು ತೊರೆದು ಬಂದ ನಾಡು ಹತ್ತಿರವಾಗತೊಡಗಿತು. ಮೊದಲೆಲ್ಲ ದುಬಾರಿಯಾಗಿದ್ದ, ಇಂಟರ್‌ನ್ಯಾಶನಲ್ ಕರೆಗಳು, ಈ ಕಳೆದ ಇಪ್ಪತ್ತೈದು ವರ್ಷಗಳಲ್ಲಿ, ಒಂದು ನಿಮಿಷಕ್ಕೆ ಒಂದು ಡಾಲರಿನ ರೇಟಿನಿಂದ ಸೊನ್ನೆಗೆ ಇಳಿದು ಬಂದಿದೆ. ಫ಼ೋನ್ ಕರೆಗಳಿಗಿಂತ ಮುಂಚೆ ನನ್ನ ತಲೆಮಾರಿನವರಲ್ಲಿ ಕೆಲವರು, ಭಾರತಕ್ಕೆ ಅಮೇರಿಕದಿಂದ ಪತ್ರಗಳನ್ನು ಬರೆದಿದ್ದೇವೆ. ಊರಿನಲ್ಲಿ ಕೆಲವೇ ಕೆಲವು ಜನರ ಮನೆಗಳಲ್ಲಿ ಫ಼ೋನ್ ಸೌಲಭ್ಯ ಇದ್ದ ಕಾಲದಲ್ಲಿ, ನಮ್ಮ ಹತ್ತಿರದವರಿಗೆ, ಸ್ನೇಹಿತರಿಗೆ ನಾವು ಪತ್ರಗಳನ್ನು ಬರೆಯುತ್ತಿದೆವು, ಈಗೆಲ್ಲ ಸ್ನೇಲ್ ಮೇಲ್ ಅಂತಾರಲ್ಲ, ಅದೇ ಆಗ ನಮಗೆ ದೂರದ ಜನರೊಂದಿಗಿನ ಒಡನಾಟಕ್ಕೆ ಒಂದು ಕೊಂಡಿಯಾಗಿದ್ದಿತು. ತರುವಾಯ, ಅಮೇರಿಕದ ನಮ್ಮ ಮನೆ (ಅಪಾರ್ಟ್‌ಮೆಂಟ್) ಫ಼ೋನಿಗೆ, ಇಂಟರ್‌ನ್ಯಾಶನಲ್ ಕರೆ ಮಾಡುವ ವ್ಯವಸ್ಥೆಯನ್ನು ರೂಪಿಸಿಕೊಂಡು, ನಂತರ ಕಾಲಿಂಗ್ ಕಾರ್ಡ್‌ನಿಂದ ಭಾರತಕ್ಕೆ ಕರೆ ಮಾಡಿ, ನಂತರ ವಾನೇಜ್ ಮೊದಲಾದ ಐ.ಪಿ. ಫ಼ೋನ್‌ಗಳ ಮುಖೇನ ಅನ್‌ಲಿಮಿಟೆಡ್ ಕರೆಗಳನ್ನು ತಿಂಗಳ ನಿಗದಿತ ಬಿಲ್‌ಗೆ ಮಾಡುವಾಗ ನಾವೆಲ್ಲ ಗೆದ್ದೆವು ಅಂದುಕೊಳ್ಳುತ್ತಿದ್ದ ಕಾಲವದು. ಅದರ ತರುವಾಯ, ಸುಮಾರು ೨೦೧೮ರ ಹೊತ್ತಿಗೆ ವಾಟ್ಸ್ಯಾಪ್ ಹಾವಳಿ ಹೆಚ್ಚಾಗಿ, ನಮ್ಮ ಎಲ್ಲ ಕರೆಗಳೂ ಸಂಪೂರ್ಣ "ಉಚಿತ" ಎನ್ನುವ ಕಾಲ ಬರುವಷ್ಟರ ಹೊತ್ತಿಗೆ ಒಂದು ಮಹತ್ತರ ಬದಲಾವಣೆ ಆಗತೊಡಗಿತು. ನಾವು ದೂರ ಹೋದ ಹಾಗೆಲ್ಲ, ನಮಗೆ ಹತ್ತಿರವಾಗಿದ್ದವರು ದೂರವಾಗ ತೊಡಗಿದರು. ಹಳೆಯ ಬೇರುಗಳು ಕೆಲವು ಕಳಚಿಕೊಂಡು, ಕಣ್ಮರೆಯಾದವು. ಹೊಸ ಚಿಗುರುಗಳು ಹುಟ್ಟಿ ಬೆಳೆದು, ಇಡೀ ಭಾರತವೇ ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಅಗಾಧವಾದ ಬೆಳವಣಿಗೆಯನ್ನು ಸಾಧಿಸತೊಡಗಿತು. ಒಂದು ಕಾಲದಲ್ಲಿ ಎಷ್ಟು ಕರೆಮಾಡಿದರೂ ತೀರದಿದ್ದ ದಾಹ, ಮುಂದೆ ಎಷ್ಟು ಬೇಕಾದರೂ ಕರೆ ಮಾಡಬಹುದು ಎನ್ನುವಷ್ಟರಲ್ಲಿ, ಆ ದಾಹವೇ ಇರದ ಹಾಗಾಗಿದ್ದನ್ನು ಸ್ವಯಂ ಅನುಭವಿಸಿದ ತಲೆಮಾರು ನಮ್ಮದು. ಒಂದು ರೀತಿ, ಹಲ್ಲು-ಕಡಲೆಯ ಸಂಬಂಧದ ಹಾಗೆ. *** ಪೌರತ್ವ ಅಥವಾ ಸಿಟಿಜ಼ೆನ್‌ಶಿಪ್ ಅನ್ನೋದು, ನನ್ನ ಪ್ರಕಾರ ಒಂದು ಪಾಸ್‌ಪೋರ್ಟ್ ಬದಲಾಯಿಸಿದಷ್ಟು ಸರಳವಾದದ್ದಲ್ಲ. ಅದರ ಹಿಂದೆ, ಕೇವಲ ಪ್ರಾಕ್ಟಿಕಲ್ ಡಿಸಿಷನ್‌ಗಳು ಮಾತ್ರವಲ್ಲದೇ, ಅನೇಕ ಭಾವನಾತ್ಮಕ ಸಂಬಂಧಗಳೂ ಹಲವಿರುತ್ತವೆ. ನಾವು ಅಮೇರಿಕಕ್ಕೆ ಯಾವುದೇ ದಾರುಣ ಸ್ಥಿತಿಯ ಹಿನ್ನೆಲೆಯಿಂದ ಬಂದವರಲ್ಲ - ನಾವು ಸೈದ್ಧಾಂತಿಕವಾಗಿ ಮುನ್ನಲೆಯಲ್ಲಿದ್ದಾಗಲೇ, ಒಂದು ಕರ್ತವ್ಯ ನಿಮಿತ್ತ ಇಲ್ಲಿಗೆ ಬಂದು, ಇಂದೂ ಸಹ ಆ ಕರ್ಮಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಹಾಗಿರುವಾಗ, ಯಾವುದು "ಸ್ವ"ದೇಶ, ಯಾವುದು "ವಿ"ದೇಶ ಎಂದು ಯೋಚಿಸಬೇಕಾದುದು ಗಮನಾರ್ಹ. ಈ ಅಮೇರಿಕದ ಹಿರಿಮೆಯೇ ಅಂತದು - ಇದೊಂದು ಕನಸುಗಾರರ ದೇಶ, ಇಲ್ಲಿ ಅವಕಾಶಗಳು ವಿಪುಲ, ಬೇರೆ ಯಾವುದೇ ದೇಶಕ್ಕೆ ಹೋಲಿಸಿದರೂ ಇಲ್ಲಿ ನ್ಯಾಯ, ನಿಷ್ಠೆ, ಕರ್ತವ್ಯಪರತೆ, ಸ್ವಾಂತಂತ್ರ್ಯ, ಹಾಗೂ ನ್ಯಾಯ ಎಲ್ಲವೂ ಒಂದು ಪಾಲು ಹೆಚ್ಚೇ. ಯಾವುದೇ ಸರ್ಕಾರವಿರಲಿ, ಯಾರೇ ಆಡಳಿತಕ್ಕೆ ಬರಲಿ, ಈ ದೇಶದ ಸಂವಿಧಾನಕ್ಕೆ ಎಲ್ಲರೂ ತಲೆ ತಗ್ಗಿಸಲೇ ಬೇಕು, ಮತ್ತು ಎಲ್ಲರೂ ಸಮಾನರು. ಆದ್ದರಿಂದ, ಅಮೇರಿಕಕ್ಕೆ ಬಂದ ನಮಗೂ ಹಾಗೂ ಉಳಿದ ದೇಶಗಳಿಗೆ ಹೋದ ಅನಿವಾಸಿ ಭಾರತೀಯರಿಗೂ ಬಹಳಷ್ಟು ವ್ಯತ್ಯಾಸವಿದೆ. ಒಂದೇ ಮಾತಿನಲ್ಲಿ ಹೇಳೋದಾದರೆ, ಇದೇ ಸಂಬಳ-ಸವಲತ್ತುಗಳನ್ನು ಬೇರೆ ಯಾವುದೇ ದೇಶದವರು ಅವರ ಪೌರತ್ವದ ಜೊತೆಗೆ ಉಚಿತವಾಗಿ ಕೊಟ್ಟರೂ ನಾವು ಖಂಡಿತ ಅಲ್ಲಿಗೆ ಹೋಗೋದಿಲ್ಲ! ಈಗ ಹೇಳಿ, ಯಾವುದು ಪರಕೀಯ, ಯಾವುದು ವಿದೇಶ - ನಾವು ತೂಗುತ್ತಿರುವ ತಕ್ಕಡಿಯಲ್ಲಿ ನಮ್ಮ ಅಮೇರಿಕನ್ ಮೌಲ್ಯಗಳು, ಇಲ್ಲಿನ ಜನ, ನಾಡು-ನುಡಿ, ಸಂಸ್ಕೃತಿ, ಒಡನಾಟಗಳು ಎಲ್ಲವೂ ನಮ್ಮ ಅವಿಭಾಜ್ಯ ಅಂಗಗಳೇ ಆಗಿರುವಾಗ ಇದೇ "ನಮ್ಮ" ದೇಶವಾಗುತ್ತದೆ. ***

    14 min
  2. Apr 1

    ನಾನೇಕೆ ಓದುತ್ತೇನೆ?

    ಎಲ್ಲರೂ ನಾನೇಕೆ ಬರೆಯುತ್ತೇನೆ ಅನ್ನೋ ಸ್ವವಿಮರ್ಶೆಯಲ್ಲಿ ತೊಡಗಿರುವಾಗ, ನನಗೇಕೆ ಈ ರೀತಿಯ ಆಲೋಚನೆ ಬಂತು ಅಂತ ಯೋಚಿಸಿಕೊಳ್ಳುತ್ತಾ ಹೋದ ಹಾಗೆ, ಅನೇಕ ಗಹನವಾದ ವಿಷಯಗಳು ಹೊರಬಂದವು. ಅದನ್ನು, ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಂಡರೆ ಹೇಗೆ ಎನ್ನಿಸಿದ್ದರಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ. ಯಾವುದೇ ಒಂದು ಸಮಾಜದಲ್ಲಿ, ನೂರಕ್ಕೆ ಎಷ್ಟು ಜನ ಕ್ರಿಯೇಟಿವ್ ಆಗಿ ಯೋಚಿಸುತ್ತಾರೆ, ಎಷ್ಟು ಜನ ನಿಜವಾಗಿಯೂ ಬರೆಯುತ್ತಾರೆ, ಎಷ್ಟು ಜನ ಅವುಗಳನ್ನು ಓದುತ್ತಾರೆ ಎಂದುಕೊಂಡರೆ ನಿಮಗೆ ಆಶ್ಚರ್ಯವಾಗುತ್ತದೆ. ನೂರು ವರ್ಷಗಳ ಇತಿಹಾಸವನ್ನು ಅಧ್ಯಯನ ಮಾಡಿದರೆ, ಒಂದು ಕಾಲದಲ್ಲಿ ಬರೀ ಪ್ರಿಂಟ್ ಮತ್ತು ರೇಡಿಯೋ ಮಾಧ್ಯಮಕ್ಕೆ ಮೀಸಲಾದ ಜನ ಮತ್ತು ಬರಹಗಾರರು, ನೂರು ವರ್ಷಗಳಲ್ಲಿ ಅದೆಷ್ಟೋ ಪಟ್ಟು ಹೆಚ್ಚಿನ ಮಟ್ಟದಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಆಗಿ ಕಂಡುಬರುತ್ತಾರೆ. ಇತ್ತೀಚಿನ ಸೋಶಿಯಲ್ ಮೀಡಿಯಾದಲ್ಲಿ ಮಾನವ ನಿರ್ಮಿತ ಕಂಟೆಂಟ್‌ಗಳನ್ನೂ ಮೀರಿ, ಕೃತಕ ಬುದ್ಧಿಮತ್ತೆಯಿಂದ ತಯಾರಾದ ಕಂಟೆಂಟ್‌ಗಳೂ ಇತ್ತೀಚೆಗೆ ನಮ್ಮ ಸುತ್ತಲೂ ಗಿರಕಿ ಹೊಡೆಯತೊಡಗಿವೆ. ಒಂದಾನೊಂದು ಕಾಲದಲ್ಲಿ ಪ್ರೊಫ಼ೆಷನಲ್ ಬರಹಾರರು, ಆಸ್ಥಾನ ಪಂಡಿತರು ಮೊದಲಾದ ಮಹಾನ್/ಗಣ್ಯ ವ್ಯಕ್ತಿಗಳು ಮಾತ್ರ ಒಂದು ಪುಸ್ತಕವನ್ನು ಹೊರ ತರಲು ಸಾಧ್ಯವಾಗುತ್ತಿತ್ತು. ಒಂದು ಉನ್ನತ ಮಟ್ಟದ ಜರ್ನಲ್‌ನಲ್ಲಿ ಪಬ್ಲಿಷ್ ಮಾಡಲು ಸಾಧ್ಯವಾಗುತ್ತಿತ್ತು. ಆಗೆಲ್ಲ ೧-೩% ಪ್ರತಿಶತ ಜನ ಬರೆಯುತ್ತಿದ್ದರೆ, ಮಿಕ್ಕವರು, ಅದರಲ್ಲೂ ಅಕ್ಷರಸ್ಥರು ಅದನ್ನು ಬಳಸುತ್ತಿದ್ದರು, ತಮ್ಮ ಮನರಂಜನೆ ಅಥವಾ ತಿಳುವಳಿಕೆಯ ದೃಷ್ಟಿಯಿಂದ. ಆಗ ಬರೆಯುತ್ತಿದ್ದವರ ಸಂಖ್ಯೆಗೆ ಈಗಿನ ಬರೆಯುವವರ ಸಂಖ್ಯೆಯನ್ನು ಹೋಲಿಸಿದಾಗ, ಪ್ರೊಫ಼ೆಷನಲ್ ಬರಹಗಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚುಳವನ್ನು ಕಾಣಬಹುದು. ಆದರೆ, ಆಗಿನ ಹಾಗೆ, ಈಗಿನ ಬರಹಗಾರರು, ಕಂಟೆಂಟ್ ಕ್ರಿಯೇಟರುಗಳು, ಪೆನ್ನು, ಪೆನ್ಸಿಲ್ ಬಳಸಿ ಪುಸ್ತಕಗಳಲ್ಲಿ ಬರೆಯಬೇಕು ಎಂದೇನೂ ಇಲ್ಲ. ಹೆಚ್ಚಿನ ಬರಹಗಾರರು, ನನ್ನನ್ನೂ ಸೇರಿ, ಇತ್ತೀಚೆಗೆ ಕೇವಲ ಕಂಪ್ಯೂಟರ್‌ನಲ್ಲಿ ಮಾತ್ರ "ಬರೆಯುವ" ಲೇಖಕರಾಗಿರುವುದು ಇತ್ತೀಚಿನ ವಿಶೇಷ. ಯಾವುದೇ ಕೈಬರಹದ ಮ್ಯಾನುಸ್ಕ್ರಿಪ್ಟನ್ನು ನಾವುಗಳು ನೋಡಿಯೇ ಅದೆಷ್ಟೋ ವರ್ಷಗಳಾಗಿವೆ. ಉದಾಹರಣೆಗೆ ಕನ್ನಡ ಪುಸ್ತಕಗಳ ಪ್ರಕಟಣೆಯ ವಿಚಾರವನ್ನು ಸೂಕ್ಷ್ಮವಾಗಿ ನೋಡಿದಾಗ, ಈ ಎರಡು ಅಂಶಗಳನ್ನು ಗಮನಿಸಬಹುದು: - ಕಳೆದ ನೂರು ವರ್ಷಗಳಲ್ಲಿ, ಕನ್ನಡದ ೫೦ ಪ್ರತಿಶತ ಟೈಟಲ್‌ಗಳನ್ನು ಪಬ್ಲಿಕ್ ಲೈಬ್ರರಿಗಳಿಗೋಸ್ಕರ ಪ್ರಕಟಿಸಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ, ಲೇಖಕರು ನೇರವಾಗಿ ತಮ್ಮ ಓದುಗರನ್ನು ತಲುಪುವುದನ್ನು ನೋಡಬಹುದು. - ಕನ್ನಡದಲ್ಲಿ ಎಲೆಕ್ಟ್ರಾನಿಕ್ ಪುಸ್ತಕ ಮಾಧ್ಯಮ (ಇ-ರೀಡರ್ಸ್) ಅಷ್ಟೊಂದಾಗಿ ಬೆಳೆಯದಿದ್ದರೂ, ಪ್ರತಿಲಿಪಿಯಂತಹ ಪ್ಲಾಟ್‌ಫ಼ಾರ್ಮ್ ಮುಖೇನ ಕಳೆದ ೬ ವರ್ಷಗಳಲ್ಲಿ, ಪಿಡಿಎಫ಼್ ಹಂಚಿಕೊಳ್ಳುವಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. - ದಕ್ಷಿಣ ಭಾರತದಲ್ಲಿ ಖರ್ಚಾಗುವ ಪುಸ್ತಕಗಳಲ್ಲಿ, ಕನ್ನಡ ಪುಸ್ತಕಗಳ ಮಾರುಕಟ್ಟೆ ಸುಮಾರು ೨೫ ಪ್ರತಿಶತ ಇದೆ (ರಾಷ್ಟ್ರಮಟ್ಟದಲ್ಲಿ ಹಿಂದಿಯ ಪುಸ್ತಕಗಳ ಪಾಲು, ಸುಮಾರು ೩೫ ಪ್ರತಿಶತ ಮಾತ್ರ) - ೨೦೨೬ರಲ್ಲಿ, ಈ ಲೇಖನ ಬರೆಯುವ ಹೊತ್ತಿಗೆ, ಸುಮಾರು ೧೨೦-೧೫೦ ಪುಸ್ತಕಗಳು, ಪ್ರತೀವಾರ ಬಿಡುಗಡೆಗೊಳ್ಳುತ್ತವೆ (ಅನೇಕ ಫ಼ಾರ್ಮ್ಯಾಟುಗಳಲ್ಲಿ) ಇಷ್ಟೆಲ್ಲ ಪುಸ್ತಕಗಳು ಹೊರಬರುತ್ತಿರುವಾಗ, ನಾವೇಕೆ ಓದುತ್ತೇವೆ ಎಂದು ಕೇಳಿಕೊಳ್ಳುವುದು ಹಾಸ್ಯಾಸ್ಪದವಾಗಿ ಕಂಡುಬರಬಹುದು. ಅದರಲ್ಲೂ, ನಮಗೆ ಬೇಕಾದ ಮಾಹಿತಿ ಎಲ್ಲ ಇಂಗ್ಲೀಷ್ ಮಾಧ್ಯಮದಲ್ಲೇ ಸಿಕ್ಕುತ್ತಿರುವುದಾದರೆ, ನಾವು ಕನ್ನಡ ಪುಸ್ತಕಗಳನ್ನು ಏಕೆ ಓದಬೇಕು? ವರ್ಷಕ್ಕೆ ೭೨೦೦ ಪುಸ್ತಕದಂತೆ ಬಿಡುಗಡೆಯಾಗಿ, ಅಂದರೆ ದಿನಕ್ಕೆ ಸುಮಾರು ೨೦ ಪುಸ್ತಕಗಳ ಬಿಡುಗಡೆಯಾಗುತ್ತಿರುವಾಗ ಅವುಗಳನ್ನು ಕೊಳ್ಳುವವರು ಯಾರು? ಓದುವವರು ಯಾರು? ನನ್ನ ಪ್ರಕಾರ, ನಾವು ಆಯಾ ವಿಷಯಗಳಿಗೆ ತಕ್ಕಂತೆ, ಆಯಾ ಭಾಷೆಯಲ್ಲಿ ಪುಸ್ತಕವನ್ನು ಓದುವುದು ಸರಿ ಎನಿಸುತ್ತದೆ. ಉದಾಹರಣೆಗೆ, ಆಫ಼ೀಸಿಗೆ ಸಂಬಂಧಿಸಿದ ಲೇವಾದೇವಿ, ಕೆಲಸ ಕಾರ್ಯಗಳನ್ನು ನಾವು ಕನ್ನಡದಲ್ಲಿ ಹೇಗೆ ಊಹಿಸಿಕೊಳ್ಳಲಾರೆವೋ, ಹಾಗೆಯೇ, ನಮ್ಮೂರಿನಲ್ಲಿ ಗಡಚಿಕ್ಕುವಂತೆ ಮಳೆ ಹೊಯ್ಯುವ ಶಬ್ದ, ತದನಂತರ ಮಣ್ಣಿನಿಂದ ಹೊರಬರುವ ಹಿತವಾದ ಪರಿಮಳ ಇವುಗಳನ್ನೂ ಕೂಡ ನಾನು ಇಂಗ್ಲೀಷಿನಲ್ಲಿ ಊಹಿಸಿಕೊಳ್ಳಲಾರೆ. ನಾನು ಕನ್ನಡದಲ್ಲಿ ಕತೆಗಳನ್ನೋ, ಕಾದಂಬರಿಗಳನ್ನೋ ಓದಿ, ಆಯಾ ಪಾತ್ರಗಳು ಮತ್ತು ಅವುಗಳ ಹಿನ್ನೆಲೆಯಲ ಮಿಳಿತಗೊಂಡು, ಆಯಾ ಪಾತ್ರಗಳ ಸಮಸ್ಯೆ, ಸಂವೇದನೆಗಳು ನಮ್ಮವೇ ಎಂದು ಯೋಚಿಸಿಕೊಳ್ಳುತ್ತೇವಲ್ಲ, ಆ ಭಾಗ್ಯ, ಇಂಗ್ಲೀಷಿನಲ್ಲಿ ಪಾತ್ರಗಳನ್ನು ಅಭ್ಯಾಸ ಮಾಡಿದಾಗ ನಮ್ಮ ಚರ್ಮದ ಕೆಳಗೇ ಇಳಿಯದು ಎನ್ನುವಂತಾಗುತ್ತದೆ. ಬೇಕಾದರೆ, ನೀವು, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕೃತಿಯ ಮೊದಲ ಅಧ್ಯಾಯವನ್ನು ಕನ್ನಡ ಮತ್ತು ಇಂಗ್ಲೀಷಿನಲ್ಲಿ ಬೇರೆ ಬೇರೆಯಾಗಿ ಓದಿ ನೋಡಿ. ನಾಯಿ-ಗುತ್ತಿ, ಗುತ್ತಿ-ನಾಯಿ ನಿಮಗೆ ಯಾವ ರೀತಿಯ ಮೋಡಿಯನ್ನು ಮಾಡಬಲ್ಲರು ಎಂದು. ನಾನು ಏಕೆ ಕನ್ನಡ ಪುಸ್ತಕಗಳನ್ನು ಓದುತ್ತೇನೆಂದರೆ, ಅದರ ಮುಖೇನ, ನಾನು ಅಲ್ಲಿನ ಮಾನವೀಯ ಮೌಲ್ಯ, ಭಾವನೆಗಳ ನಡುವೆ ಒಂದು ಸಂಪರ್ಕಸಾಧಿಸಿಕೊಂಡು, ಅವುಗಳನ್ನು ಅರ್ಥ ಮಾಡಿಕೊಂಡು, ಆಯಾ ಪಾತ್ರಗಳು ನಮ್ಮ ಸ್ನೇಹಿತರೋ, ಬಂಧು-ಮಿತ್ರರೋ ಎಂದು ಯೋಚಿಸುವಂತೆ ಮಾಡುತ್ತವಲ್ಲ? ಆ ಸಮಯವನ್ನು ನಾವು ವ್ಯಯಿಸುವ ಮಟ್ಟಿಗೆ ಅದೊಂದು ಧ್ಯಾನವೇ ಎಂದು ನನ್ನ ನಂಬಿಕೆ. ಜೊತೆಗೆ, ಆಯಾ ಲೇಖಕರ ಸಾಮರ್ಥ್ಯಕ್ಕೆ ತಕ್ಕೆಂತೆ ಅವರ ಉಪಮೆ, ರೂಪಕ, ಉತ್ಪ್ರೇಕ್ಷೆಗಳನ್ನೆಲ್

    12 min
  3. 12/30/2025

    Season 1 Final Episode (88)

    Season 1 Final Episode (88) ಸ್ಯಾಟಿಸ್‌ಫ಼್ಯಾಕ್ಷನ್‌ನಿಂದ ನಾನು ಕಲಿತ ಪಾಠ! ಯಾವುದೋ ಒಂದು ಕಾಲದಲ್ಲಿ ಶುರು ಮಾಡಬೇಕಾಗಿದ್ದ ಪಾಡ್‌ಕ್ಯಾಸ್ಟ್ ಅನ್ನು ನಾನು ಶುರು ಮಾಡಿದ್ದು, 2025 ರ ಜನವರಿಯಲ್ಲಿ. ಈ ಪಾಡ್‌ಕ್ಯಾಸ್ಟ್ ಅಂದ್ರೆ ಅದು ಒಂದು ಥರದ expression ಅಷ್ಟೇನೆ. ನಮ್ಮ ನಮ್ಮ ಸಂತೋಷವನ್ನು ಅರಿಸಿ ಹೇಗೆ ನಾವು content ಹುಡುಕಿಕೊಂಡು ಹೋಗ್ತೀವಲ್ಲ. ಹಾಗೇ! ಇದೂ ಕೂಡ ನಮ್ಮ ನಮ್ಮ ದೈನಂದಿನ ಅಗತ್ಯಗಳಲ್ಲಿ ಒಂದು ಅನ್ನಬೇಕು ಅಷ್ಟೇ. Total episodes 88. Ordent fans (listeners) about 25-30 Most of the audience are from USA and India, listeners from Canada, Brazil and UK are about 2%. but I do thank the people from 26 other countries, who are around 1% of the audience. Burkina Faso is a landlocked country in West Africa Top lessons learned Behind the scenes (episode satisfaction & success) Top episodes Community response Season 2 teaser: We will graduate from monologue to a dialogue with stalwarts like Praveen Venkatramu, Hareesh Kadalabalu, Simhadri Santebennur, Archana Acharya, Kannada Shaale Teachers, and others from a Karnataka background. Total audience from 28 countries. 75% USA 15% India ~2% from Canada, Brazil, UK ~1% from 24 other countries

    12 min
  4. 11/26/2025

    ಎಷ್ಟು ದುಡ್ಡು ಇದ್ರೆ ಒಳ್ಳೇದು? (86)

    ಎಷ್ಟು ದುಡ್ಡು ಇದ್ರೆ ಒಳ್ಳೇದು? ಈಗೆಲ್ಲ ಅಮೇರಿಕದಲ್ಲಿ ದೊಡ್ಡ ದೊಡ್ಡ ಕಂಪನಿಗಳು, ಕಾಸ್ಟ್ ಕಟ್ಟಿಂಗ್ ಅನ್ನೋ ಹೆಸರಿನಲ್ಲಿ ಸಾವಿರಾರು ಜನರನ್ನು ಮನೆಗೆ ಕಳಿಸೋದನ್ನ ನೋಡಿದ್ರೆ, ಅಮೇರಿಕದ ಎಂಪ್ಲಾಯ್‌ಮೆಂಟ್ ಸಿಚುವೇಶನ್ ಬದಲಾಗುತ್ತೋ ಇಲ್ಲವೋ ಅನ್ನೋ ಸಂಶಯ ಬರುತ್ತೆ. ನಮ್ಮ ಕಂಪನಿ ಒಂದರಲ್ಲೇ ಸುಮಾರು 13 ಸಾವಿರ ಜನರು ಒಂದೇ ಕಳೆದುಕೊಳ್ಳಬೇಕಾಗಿ ಬಂದಾಗ ಅವರನ್ನೆಲ್ಲ ನೆನೆದು ಒಂದು ಸರತಿ ಕರುಳು ಚುರುಕು ಅಂತು. ಮತ್ತೆ ಮರುಕ್ಷಣ, ಇದೆಲ್ಲ ಕ್ಯಾಪಿಟಲಿಸಮ್ಮಿನ ಲೀಲೆ. ಇಲ್ಲಿ ಯಾರೂ ಯಾವತ್ತೂ ಶಾಶ್ವತರಲ್ಲ, ಯಾರು indispensible ಅಲ್ಲ, ಅನ್ನೋ ಮಾತು ಕೂಡಾ ನೆನಪಿಗೆ ಬಂತು. ಕೆಲಸ ಕಳೆದುಕೊಂಡವರಿಗೆ, ಆಯಾ ಕಂಪನಿಗಳಲ್ಲಿ, ಅವರವರ ಸರ್ವೀಸಿಗೆ ಸಂಬಂಧ ಪಟ್ಟಂತೆ ಒಂದಿಷ್ಟು severence ಬರುತ್ತೆ. ಆದ್ರೆ, ಎಲ್ಲ ಕಂಪನಿಗಳಲ್ಲೂ ಹಾಗೇ ಬರುತ್ತೆ ಅಂತ ಹೇಳೋಕಾಗಲ್ಲ. ನನಗೆ ಗೊತ್ತಿರೋ ಹಾಗೆ, ಕೆಲವು ಕಂಪನಿಗಳಲ್ಲಿ, ಅದೆಷ್ಟೇ ವರ್ಷ ದುಡಿದ್ರೂ, ಒಂದು ತಿಂಗಳ ಸಂಬಳ ಕೊಟ್ಟು ಕೆಲಸಗಾರರನ್ನು ಮನೆಗೆ ಕಳಿಸಿರೋ ನಿದರ್ಶನಗಳೂ ಇವೆ. ಇನ್ನು ಕೆಲವು ಸಂದರ್ಭಗಳಲ್ಲಿ, ಕಂಪನಿಗಳೇನಾದರೂ ಬ್ಯಾಂಕ್ರಪ್ಟ್ ಆದ್ರೆ, ಇರೋ ಸಂಬಳವನ್ನುಕೊಡದೇ ಇರುವ ಸಾಧ್ಯತೆ ಇದೆ. ಹೀಗೆ, ಕ್ಯಾಪಿಟಲಿಸಮ್ಮಿನ ಕೆಲಸ ಅಂದ್ರೆ, ನೀರಿನ ಮೇಲಿನ ಗುಳ್ಳೆಯ ಹಾಗೆ. ಇದ್ದಾಗ ಮಾಡು, ಇಲ್ಲದಾಗ ಮಡಿ ಅನ್ನುವ ಒಂದು ಮಾತಿನಿಂದ ಇಲ್ಲಿಯ ಸ್ಥಿತಿಗತಿಯನ್ನು ಹೇಳಿಬಿಡಬಹುದು. *** ಆದರೆ, ಇವತ್ತಿನ ಟಾಪಿಕ್ಕು, ಕೆಲಸದ ಬಗ್ಗೆ ಅಲ್ಲ. ಹೀಗೆ ಕೆಲಸ ಮಾಡಿ ಜನರು ಈ ಕ್ಯಾಪಿಟಲಿಸಮ್ಮಿನ ಪ್ರಪಂಚದಲ್ಲಿ ತಮ್ಮ ವೆಲ್ತ್ ಅನ್ನು ಒಟ್ಟುಗೂಡಿಸಿಕೊಳ್ಳುತ್ತಾರಲ್ಲ. ಅವರನ್ನ ನೋಡಿ ಒಮ್ಮೆ ಆಶ್ಚರ್ಯ ಆಯಿತು. ಒಂದು ಕಡೆ, ಘಂಟೆಗೆ 18 ಡಾಲರ್ ಗೆ ದುಡಿಯುವ ದುಡಿಮೆ, ಮತ್ತೊಂದು ಕಡೆ, ತಿಂಗಳಿಗೆ ಮಿಲಿಯನ್ ಗಟ್ಟಲೆ ದುಡಿಯುವ ಮಹನೀಯರೂ ಸಿಗುತ್ತಾರೆ. ಹೀಗೆ, ಕ್ಯಾಪಿಟಲಿಸಮ್ಮಿನ ಮತ್ತೊಂದು ಮುಖ ಅಂದ್ರೆ ಡಿವಿಜನ್.

    10 min

Ratings & Reviews

5
out of 5
4 Ratings

About

The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community. #NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.