UV Listen

UVLISTEN

Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.

  1. S1 EP 106 ಪಂಚ ಪ್ರಾಣಗಳು | Bharata Sankhyaloka

    06/17/2024

    S1 EP 106 ಪಂಚ ಪ್ರಾಣಗಳು | Bharata Sankhyaloka

    ಪ್ರಾಣ ಅಂದರೆ ವಾಯು, ಪ್ರಾಣವು ಸೂರ್ಯ ಅಥವಾ ಅಗ್ನಿಯ ಶಕ್ತಿ. ಇದೇ ಕಾರಣಕ್ಕೆ ಹನುಮಂತನನ್ನು ಮುಖ್ಯಪ್ರಾಣ ಅಂತ ಕರೆಯಲಾಗುತ್ತದೆ. ಈ ಜ್ವಾ ಲೆ ಮೇ ಲ್ಮು ಖವಾಗಿ ಹರಿಯುವಂತದ್ದು. ಪ್ರಾಣವಾಯುವಿನ ಸ್ಥಾನ ಶ್ವಾಸಕೋ ಶ. ಉಸಿರಾಟದ ಪ್ರಕ್ರಿಯೆಯನ್ನು ನಿರ್ವ ಹಿಸುವುದೇ ಈ ಪ್ರಾಣ ವಾಯು. ಚಕ್ರ ಹಾಗೂ ಪಂಚ ಪ್ರಾಣವಾಯುವಿನ ನಡುವೆ ಇರುವ ಸಂಬಂಧದ ಕುರಿತು ನಾವಿಲ್ಲಿ ತಿಳಿದುಕೊ ಳ್ಳುತ್ತಾ ಹೋ ಗೋ ಣ. ಉಸಿರಾಟದ ಅಂಗಾಂಗಗಳು, ಮತ್ತು ಇವುಗಳಿಗೆ ಸಂಬಂಧಿಸಿದ ಮಾಂಸಖಂಡಗಳನ್ನು ಇದು ನಿಯಂತ್ರಿಸುತ್ತದೆ. ಪ್ರಾಣ ವಾಯುವಿನ ಹರಿವಿನಿಂದ ಸಂವೇ ದನೆಯ, ಭಾವನೆಗಳ ಅನುಭವ ಆಗುತ್ತದೆ. ಇಷ್ಟೇ ಅಲ್ಲದೆ ಈ ಪ್ರಾಣ ವಾಯುವು ಮನಸ್ಸು ಹಾಗೂ ದೇ ಹದ ಹತೋ ಟಿಗೆ ಕಾರಣವಾಗಿದೆ. ಉಳಿದ ನಾಲ್ಕು ವಾಯುಗಳೂ ಕೂಡಾ, ಈ ಪ್ರಾಣ ವಾಯುವಿನಿಂದಲೇ ಶಕ್ತಿಯನ್ನು ಪಡೆದುಕೊ ಳ್ಳುತ್ತದೆ. ಪ್ರಾಣಾಯಾಮ ಹಾಗೂ ಯೋ ಗದಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ಒಮ್ಮೆ ಪ್ರಾಣದ ಮೇ ಲೆ ನಿಯಂತ್ರಣ ಹೊ ಂದಿದರೆಂದರೆ, ಅವರು ನೂರು ಪ್ರತಿಶತ ಮಾನಸಿಕ ಸಮತೋ ಲನ ಹೊ ಂದಿರುತ್ತಾರೆ. ಇದರಿಂದ ನಿಮ್ಮ ದೈ ಹಿಕ ಕಾಯಿಲೆಗಳನ್ನೂ ಬಹಳಷ್ಟು ಮಟ್ಟಕ್ಕೆ ನಿಯಂತ್ರಿಸಬಹುದು. ಆದರೂ ನಾವು ದಿನನಿತ್ಯ ಹಲವು ರೀ ತಿಯ ರಾಸಾಯನಿಕಗಳು ಮತ್ತು ವಿಷಗಳು ನಮ್ಮ ಪ್ರಾಣವಾಯುವನ್ನ ಸೇ ರುತ್ತದೆ. ಇದರಿಂದಾಗಿ ನಮಗೆ ಅಪಾಯ ಉಂಟಾಗುತ್ತದೆ. ಗಾಳಿ, ನೀ ರು ಮತ್ತು ಆಹಾರದ ಮೂಲಕ ನಾವೇ ನು ನಮ್ಮೊ ಳಗೆ ತೆಗೆದುಕೊ ಳ್ಳುತ್ತೇವೆ ಎಂಬುದರ ಕುರಿತು ಪೂರ್ಣ ನಿಯಂತ್ರಣ ಅಸಾಧ್ಯ. ಆದರೆ, ಈ ಅಂಶಗಳು ನಮ್ಮ ಮೇ ಲೆ ಎಷ್ಟು ಪ್ರಭಾವ ಬೀ ರುತ್ತದೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಮೇ ಲೆ ಅವಲಂಬಿಸುತ್ತದೆ. ಅಲ್ಲದೇ ಈ ಪಂಚವಾಯುವಿಗೆ ಚಕ್ರಗಳು ಸಂಬಂಧಿಸಿವೆ. ಇನ್ನು ಪಂಚ ಮಹಾಪ್ರಾಣಗಳು ಯಾವುವು? ಮತ್ತೆ ಪಂಚ ವಾಯುಗಳು ಮತ್ತು ಅದಕ್ಕೆ ಸಂಬಂಧಿಸಿದ ಚಕ್ರಗಳ ಬಗ್ಗೆ ತಿಳಿದುಕೊ ಳ್ಳ ೋಣ. ಮೊದಲನೇ ಯದು ಅಪಾನ ವಾಯು, ಶ್ವಾಸಕೋ ಶಗಳು ಮತ್ತು ವಿಸರ್ಜ ನಾ ವ್ಯವಸ್ಥೆಯ ಮೂಲಕ ದೇ ಹದಿಂದ ತ್ಯಾ ಜ್ಯ ಉತ್ಪನ್ನಗಳನ್ನು ತೆಗೆದುಹಾಕುವುದು ಅಪಾನವಾಯುವಿನ ಕಾರ್ಯ ಭಾರವಾಗಿದೆ. ಹೊ ಟ್ಟೆಯನ್ನು, ಹೊ ಕ್ಕು ಳ ಪ್ರದೇ ಶದ ಕೆಳಗೆ, ಮತ್ತು ದೊ ಡ್ಡಕರುಳು, ಮೂತ್ರಪಿಂಡಗಳು, ಗುದದ್ವಾ ರ ಮತ್ತು ಜನನಾಂಗಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಇದು ದೇ ಹದಿಂದ ತ್ಯಾ ಜ್ಯವನ್ನು ಹೊ ರಹಾಕುವುದಕ್ಕೆ ಸಂಬಂಧಿಸಿದೆ. ಇದರ ತತ್ವ ಭೂಮಿ, ಇದು ಮೂಲಾಧಾರ ಚಕ್ರವನ್ನ ಅವಲಂಬಿಸಿರತ್ತೆ. ನೌಲಿ ಕ್ರಿಯಾ, ಅಗ್ನಿಸಾರ ಕ್ರಿಯಾ, ಅಶ್ವಿನಿ ಮುದ್ರ ಹಾಗೂ ಮೂಲಬಂಧ ಕ್ರಿಯೆಯ ಮೂಲಕ ಸಕ್ರಿಯಗೊ ಳಿಸಬಹುದಾಗಿದೆ. ಇನ್ನು ಎರಡನೇ ಯದು ಸಮಾನವಾಯು, ಇದರ ಮೂಲತತ್ವ ಅಗ್ನಿ, ಮಣಿಪೂರ ಚಕ್ರವನ್ನ ಅವಲಂಬಿಸಿಕೊ ಂಡು ಇದನ್ನು, ಕ್ರಿಯಾ ಯೋ ಗ, ಅಗ್ನಿಸಾರ ಕ್ರಿಯೆಯ ಮೂಲಕ ಸಕ್ರಿಯಗೊ ಳಿಸಬೇ ಕಾಗುತ್ತದೆ. ಸಮಾನವಾಯು ಹೃದಯ ಮತ್ತು ಹೊ ಕ್ಕು ಳ ನಡುವೆ ಇರುತ್ತದೆ. ಇದು ಜೀ ರ್ಣಾ ಂಗ ವ್ಯವಸ್ಥೆಯನ್ನು ಸಕ್ರಿಯಗೊ ಳಿಸುವುದಲ್ಲದೇ , ನಿಯಂತ್ರಿಸಲು ಸಹಾಯ ಮಾಡುತ್ತದೆ. ಯಕೃತ್ತು, ಕರುಳುಗಳು, ಮೇ ದೋ ಜ್ಜೀರಕ ಗ್ರಂಥಿ ಮತ್ತು ಹೊ ಟ್ಟೆ, ಮತ್ತು ಅವುಗಳ ಸ್ರವಿಸುವಿಕೆ ಮತ್ತು ಪರಿವರ್ತ ನೆಗೆ ಪ್ರಮುಖವಾಗಿ ಸಮಾನವಾಯು ಕಾರಣವಾಗಿರುತ್ತದೆ. ಭೌತಿಕ ಮಟ್ಟದಲ್ಲಿ ಇದು ಪೋ ಷಕಾಂಶಗಳ ಸಮೀ ಕರಣ ಮತ್ತು ವಿತರಣೆಗೆ ಸಂಬಂಧಿಸಿದೆ. ಗಾಳಿಯ ತತ್ವವನ್ನ ಹೊ ಂದಿದ ಪ್ರಾಣವಾಯು ನಮ್ಮ ದೇ ಹದ ಹೃದಯ ಭಾಗದಲ್ಲಿರುತ್ತದೆ. ಅನಾಹತ ಚಕ್ರವನ್ನು ಅವಂಬಿಸಿರುವ ಈ ಪ್ರಾಣವಾಯುವನ್ನು ಭಸ್ತ್ರಿಕಾ, ನಾಡಿಶುದ್ಧಿ ಹಾಗೂ ಉಜ್ಜಯಿ ಪ್ರಾಣಾಯಾಮದ ಮೂಲಕ ಸಕ್ರಿಯಗೊ ಳಿಸಬೇ ಕಾಗುತ್ತದೆ. ಹೃದಯದ ಬಡಿತ ಮತ್ತು ಉಸಿರಾಟ ಪ್ರಾಣವಾಯುವಿನ ಕಾರ್ಯ ಭಾರವಾಗಿದೆ. ಪ್ರಾಣವು ಉಸಿರಿನ ಮೂಲಕ ಶರೀ ರವನ್ನು ಪ್ರವೇ ಶಿಸುತ್ತದೆ ಮತ್ತು ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ಪ್ರತಿ ಜೀ ವಕೋ ಶಕ್ಕೆ ಕಳಿಸಲ್ಪಡುತ್ತದೆ. ನಾಲ್ಕನೇ ಪ್ರಾಣ ಉದಾನವಾಯು, ಗಂಟಲು ಅಥವಾ ತಲೆ ಇದರ ಪ್ರಮುಖ ಸ್ಥಳವಾಗಿದೆ. ನೀ ಲಿ ಆಕಾಶ ಅಥವಾ ಶುಭ್ರವಾದ ಆಕಾಶ ಇದರ ತತ್ವವಾಗಿದೆ. ಉಜ್ಜಯಿ, ಭ್ರಮರಿ, ವಿಪರೀ ತ ಕರಣಿ ಕ್ರಿಯೆಯ ಮೂಲಕ ವಿಶುದ್ಧಿ ಮತ್ತು ಆಜ್ಞಾ ಚಕ್ರವನ್ನು ಅವಲಂಬಿಸಿರುವ ಉದಾನವಾಯುವನ್ನು ಸಕ್ರಿಯಗೊ ಳಿಸಬೇ ಕಾಗುತ್ತದೆ. ಧ್ವನಿ ಉಪಕರಣದ ಮೂಲಕ ಧ್ವನಿ ಉತ್ಪಾದನೆಯು ಉದಾನವಾಯುವಿನ ಕಾರ್ಯ ಭಾರವಾಗಿದೆ, ಉದಾಹರಣೆಗೆ ಮಾತಾಡುವುದು, ಹಾಡುವುದು, ನಗುವುದು ಮತ್ತು ಅಳುವುದು. ಜೊ ತೆಗೆ ಇದು ಜೀ ವಿಯ ಉದ್ದೇಶಕ್ಕೆ ಅನುಗುಣವಾದ ಧ್ವನಿಗಳನ್ನು ಉತ್ಪಾದಿಸಲು ಅಗತ್ಯವಾದ ಜಾಗೃತ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಉದಾನವು ಉನ್ನತ ಕೇ ಂದ್ರಗಳಿಗೆ ದೇ ಹದ ಸಂಪೂರ್ಣ ನಿಯಂತ್ರಣವನ್ನು ನೀ ಡುತ್ತದೆ. ಪಂಚಪ್ರಾಣಗಳಲ್ಲಿ ಕೊ ನೆಯದು ಅಂದರೆ ಐದನೇ ಯದು ವ್ಯಾ ನವಾಯು, ಇದರ ಪ್ರಮುಖ ಸ್ಥಳ ಉಸಿರಾಟ. ನೀ ರಿನ ತತ್ವವನ್ನು ಹೊ ಂದಿರುವ ವ್ಯಾ ನವಾಯುವು, ಸ್ವಾಧಿಷ್ಠಾನ ಚಕ್ರವನ್ನು ಅವಲಂಬಿಸಿದೆ. ದೀ ರ್ಘ ವಾಗಿ ಉಸಿರು ತೆಗೆದುಕೊ ಳ್ಳಿ ದೀ ರ್ಘ ವಾಗಿ ಉಸಿರು ಬಿಡಿ, ದೀ ರ್ಘ ವಾಗಿ ಉಸಿರು ತೆಗೆದುಕೊ ಳ್ಳಿ ಉಸಿರಾಡುವಾಗ ಬಳಿಕ ಉಸಿರನ್ನು ಬಿಗಿ ಹಿಡಿಯುವುದು ಹೀ ಗೆ ಬಹಿರ್ ಕುಂಭಕ ಪ್ರಕ್ರಿಯೆಯ ಮೂಲಕ ಕ್ರಿಯಾಶೀ ಲವಾಗಿಸಬಹುದು. ವ್ಯಾ ನವು ಇಡೀ ದೇ ಹವನ್ನು ವ್ಯಾ ಪಿಸುತ್ತದೆ, ಎಲ್ಲಾ ಚಲನೆಯನ್ನು ನಿಯಂತ್ರಿಸುತ್ತದೆ ಮತ್ತು ಇತರ ಪ್ರಾಣಗಳನ್ನು ಸಂಯೋ ಜಿಸುತ್ತದೆ. ಇದು ಇತರ ಪ್ರಾಣಗಳಿಗೆ ಮೀ ಸಲು ಶಕ್ತಿಯಾಗಿ ಕಾರ್ಯ ನಿರ್ವ ಹಿಸುತ್ತದೆ.

    9 min
  2. S1 EP 130 ತಾಳ್ಮೆ ಯಶಸ್ಸಿನ ಕೀಲಿ ಕೈ | Patience is the key to success

    06/03/2024

    S1 EP 130 ತಾಳ್ಮೆ ಯಶಸ್ಸಿನ ಕೀಲಿ ಕೈ | Patience is the key to success

    ಪ್ರತಿಯೊಬ್ಬನಿಗೂ ಸಾಧನೆಯ ಕನಸು ಇರುತ್ತದೆ. ಆದರೆ, ಅದರ ದಾರಿ ತಿಳಿದಿರುವುದಿಲ್ಲ. ಅಡೆತಡೆಗಳಿರುತ್ತವೆ. ಅವುಗಳಿಗೆ ಹೆದರಬಾರದು. ಕನಸು, ಹಣ ಸಂಪಾದನೆ ಮತ್ತು ಜ್ಞಾನ ಈ ಮೂರು ಹಾದಿಯಲ್ಲಿ ಏಕಕಾಲಕ್ಕೆ ಚಲಿಸಿದರೆ ಮಾತ್ರ ಚಿಕ್ಕ ವಯಸ್ಸಿನಲ್ಲೇ ಸಾಧಿಸೋ ದಕ್ಕೆ ಸಾಧ್ಯ. ಪ್ರತಿಯೊಬ್ಬ ಮನುಷ್ಯನಿಗೂ ಏನಾದರೊ ಂದು ಸಾಧಿಸಬೇಕೆಂಬ ಹಂಬಲವಿರುತ್ತದೆ. ಕೆಲವರು ಒಂದು ಡಿಗ್ರಿ ತೆಗೆದುಕೊಂಡು ಒಂದು ಸಣ್ಣಕೆಲಸಕ್ಕೆ ಕೈತುಂಬ ಸಂಬಳ ತೆಗೆದುಕೊಳ್ಳುವುದೇ ಸಾಧನೆ ಅಂದ್ಕೊ ಳ್ತಾರೆ. ಇನ್ನು ಕೆಲವರು “ಬೆಳಿಗ್ಗೆ ಒಂಬತ್ತುಗಂಟೆಗೆ ಕೆಲಸಕ್ಕೆ ಹೋ ಗಿ ಸಂಜೆ ಐದು ಗಂಟೆಗೆ ವಾಪಸ್ಸು ಬರುವುದನ್ನು ಎಲ್ಲರೂ ಮಾಡ್ತಾರೆ, ನಾನು ಸ್ವಲ್ಪ ಡಿಫರೆಂಟಾಗಿರಬೇಕು ಅಂತ ಯೋಚಿಸ್ತಾರೆ. ಅದನ್ನ ಸಾಧಿಸೋ ದಕ್ಕೆ ಬೇರೆ ಬೇರೆ ಕೆಲಸಗಳಿಗೆ ಕೈ ಹಾಕ್ತಾರೆ. ಸಾಧನೆಯ ಬಗ್ಗೆಕನಸು ಕಾಣುವುದು ತುಂಬಾ ಸುಂದರವಾದ ವಿಷಯ. ಆದರೆ ಸಾಧಿಸುವುದು ಹೇಗೆ ಎಂಬುದನ್ನು ವಾಸ್ತವಿಕವಾಗಿ ನಾವು ಯೋಚಿಸುವುದೇ ಇಲ್ಲ. ಯಾರು ಏನು ಬೇಕಾದರೂ ಆಗಬಹುದು, ಯಾವುದೂ ಅಸಾಧ್ಯವಲ್ಲ ಅನ್ನ ೋದು ನಮಗೆ ಗೊ ತ್ತಿರೋ ವಿಚಾರ. ಆದರೆ ನಮಗೆ ಬೇಕು ಅನ್ನಿಸಿದ್ದರ ಹಿಂದೆ ನೂರಕ್ಕೆ ನೂರು ಶ್ರಮ ಹಾಕಿ ಓಡಬೇಕು ಅಷ್ಟೆ. ಕೆಲವು ಸಲ ನಾವು ಓಡುವುದಕ್ಕೇನೋ ರೆಡಿ ಇರ್ತೇವೆ, ಆದರೆ ನಮ್ಮ ಜೀವನ, ಆ ಜೀವನದಲ್ಲಿ ನಮ್ಮ ಸುತ್ತಲಿರುವ ಪ್ರೀತಿಪಾತ್ರರು, ಅವರ ಅಸಹಾಯಕತೆ ಇವೆಲ್ಲನಮ್ಮ ಜೀವನಕ್ಕೆ ತತ್ಕ್ಷಣ ಅದನ್ನೆಲ್ಲಾಜ್ಞಾಪಿಸ ಓಡೋ ದನ್ನ ನಿಲ್ಲಿಸಿಯೇ ಬಿಡುತ್ತೇವೆ. ಪ್ರತಿನಿತ್ಯ ಜೀವನ ಸಾಗಿಸುವುದೇ ಕಷ್ಟ ಅನ್ನಿಸುತ್ತಿರುವಾಗ ಸಾಧನೆಯ ಬಗ್ಗೆ ಯೋಚಿಸುವುದಾದರೂ ಹೇಗೆ? ಯೋಚಿಸಿದರೂ ಈಗ ಸದ್ಯಕ್ಕೆ ಅದರ ಕಡೆಗೆ ಹೋ ಗುವುದಿಲ್ಲಅಂತ ನಿರ್ಧಾರ ತೆಗೆದುಕೊಂಡು ಸುಮ್ಮನಾಗುತ್ತೇವೆ. ಕಷ್ಟದಲ್ಲಿರುವವರು ನಿಜವಾಗಿಯೂ ಏನನ್ನೂ ಸಾಧಿಸಲು ಸಾಧ್ಯವೇ ಇಲ್ಲಅಂತ ಅನ್ಕೊ ಂಡು ಬಿಡುತ್ತೇವೆ. ಆದ್ರೆ ಇದಕ್ಕೆಲ್ಲಾ ಬೇಕಾಗಿರೋ ದು ತಾಳ್ಮೆ . ಸಾಧಿಸೋ ದಕ್ಕಾಗಿ ನಿಮ್ಮ ತಂದೆ ತಾಯಿಯನ್ನು ದೂರ ಮಾಡಬೇಕಿಲ್ಲ, ಅಣ್ಣತಂಗಿಯ ಪ್ರೀತಿಯಿಂದ ವಂಚಿತರಾಗಬೇಕಿಲ್ಲ, ಅವರ್ಯಾರನ್ನೂ ನೋ ಡಿಕೊಳ್ಳದೆ ಎಲ್ಲ ಜವಾಬ್ದಾರಿಗಳನ್ನು ಕಳಚಿಕೊಂಡು ಮನೆ ಬಿಟ್ಟು ಓಡಿಹೋ ಗಬೇಕಿಲ್ಲ. ಒಬ್ಬರಲ್ಲಇಬ್ಬರಲ್ಲ, ಸಾವಿರಾರು ಜನ ಹೀಗೆ ಮನೆ ಬಿಟ್ಟು ಓಡಿ ಬಂದು ಸಾಧನೆ ಮಾಡುತ್ತೇವೆ ಅಂತ ಸುಮ್ಮನೆ ಕೂತಿದ್ದಾರೆ. ಯಾಕೆ ಸುಮ್ಮನೆ ಕೂತಿದ್ದಾರೆ ಅಂತ ಒಮ್ಮೆ ಸಿಂಹಾವಲೋ ಕನ ಮಾಡಿದ್ರೆ, ಅದಕ್ಕೆ ಬೇರೆ ಯಾರೂ ಕಾರಣರಲ್ಲ; ಅವರೇ ಕಾರಣರು. ತಾಳ್ಮೆ ಯಿಲ್ಲದ ಬದುಕು. ಅವರು ತಮ್ಮ ಕಣ್ಮುಂದೆ ಸಾಧನೆ ಮಾಡಿರುವ, ಬಡತನದಿಂದ ಬಂದಿರುವ ಜನರೊ ಡನೆ ತಮ್ಮನ್ನು ಹೋ ಲಿಸಿಕೊಲುವುದಿಲ್ಲ. ಬದಲಿಗೆ, ಅವರ ಕಣ್ಣಿಗೆ ಈಗಾಗಲೇ ಶ್ರೀಮಂತರು ಕಾಣಿಸಿರ್ತಾರೆ. ತಾನು ಕೂಡ ಶ್ರೀಮಂತನಾಗಿದ್ದಿದ್ದರೆ ದೊ ಡ್ಡ ಸಾಧನೆ ಮಾಡುತ್ತಿದ್ದೆ ಅಂತ ಗೆಳೆಯರೆದುರು ಕೊಚ್ಚಿಕೊಳ್ಳುತ್ತಾರೆ. ಕೆಲವೊಮ್ಮೆ ಇದಕ್ಕೆಲ್ಲಾನಮ್ಮ ಮನಸ್ಥಿತಿಯೂ ಕಾರಣವೇನೋ ಅಂತನಿಸಿ ಬಿಡುತ್ತದೆ. ತಾವು ಕಷ್ಟಪಟ್ಟು ದುಡಿದು ತನ್ನ ಕನಸನ್ನು ನನಸು ಮಾಡಿಕೊಳ್ಳುವ ದಾರಿಯಲ್ಲಿಇದ್ದೇನೆ ನೆಮ್ಮದಿ ಕೂಡ ಅವರಿಗೆ ಇರದೇ ಇರುವುದು ದುರದೃಷ್ಟಕರ ಸಂಗತಿ. ದಿನಕ್ಕೊಂದು ಹೊ ಸ ಕೆಲಸಕ್ಕೆ ಕೈ ಹಾಕುವುದು, ಕೊನೆಗೆ ಯಾವುದೂ ಸಾಧ್ಯವಾಗದೇ ತಮ್ಮ ಜೀವನವನ್ನೇ ಬೈದುಕೊಳ್ಳುವುದು. ಸಾವಿರಾರು ಫೈಲ್ಯೂರ್ಗಳ ನಂತರವೂ ಸಾಧಿಸಿ ದಡ ಸೇರಿದವರೂ ಅದೆಷ್ಟ ೋ ಮಂದಿ ಇದ್ದಾರೆ. ಅವರ ಬದುಕು ನಮಗೆ ಸ್ಫೂರ್ತಿ. ಅಂತಹವರಲ್ಲಿಪ್ರಮುಖರು ಕೆಎಫ್ಸಿ ಬ್ರ್ಯಾಂಡ್ನ ಸಂಸ್ಥಾಪಕರು. ನೂರು ಫೈಲ್ಯೂರ್ಗಳ ನಂತರವೂ ತನ್ನ ಇಳಿವಯಸ್ಸಿನಲ್ಲಿಒಂದು ಬ್ರ್ಯಾಂಡ್ ಕಟ್ಟಿ ಮಿಲಿಯನ್ಗಟ್ಟಲೆ ಸಂಪಾದಿಸಿದ ಹೆಸರುವಾಸಿಯಾದವರ ಕಥೆ ಅಂತೂ ನಮಗೆ ಸ್ಫೂರ್ತಿ. ಇವರ ಕಥೆಯನ್ನು ಬ್ರ್ಯಾಂಡ್ ಸ್ಟ ೋರಿ ಸಿರೀಸ್ನ ಒಂದು ಎಪಿಸೋ ಡ್ನಲ್ಲಿನೀವು ಕೇಳಬಹುದು. ಇಲ್ಲಿನೂರು ಫೇಲ್ಯೂರು ಅನ್ನ ೋದು ಚಿಕ್ಕ ವಿಚಾರವಂತೂ ಅಲ್ಲವೇ ಅಲ್ಲ, ಈ ಫೇಲ್ಯೂರ್ಗಳನ್ನ ಓವರ್ಕಮ್ ಮಾಡಿರೋ ದಕ್ಕೆ ಪ್ರಮುಖ ಕಾರಣ ತಾಳ್ಮೆ . ಅದರ ಜೊತೆಗೆ ಪರಿಶ್ರಮವಂತೂ ಖಂಡಿತಾ ಇದೆ. ಮನುಷ್ಯನಿಗೆ ತಾಳ್ಮೆ ಮುಖ್ಯವಾಗಿ ಬೇಕು. ಇದು ಸಕ್ಸೆಸ್ನ ಪ್ರಮುಖ ಸೂತ್ರವಾಗಿರುತ್ತದೆ. ಈ ದಾರಿ ಬಿಟ್ಟು ಗೆಲುವಿಗೆ ಬೇರೆ ಯಾವುದು ಅಡ್ಡದಾರಿಗಳಿಲ್ಲ. ಅದಕ್ಕೇ ದೊ ಡ್ಡವರು ಹೇಳಿದ್ದುತಾಳಿದವನು ಬಾಳಿಯಾನು ಅಂತ. ಯಾವ ವಿಜ್ಞಾನಿಯ ಪ್ರಯೋಗವೂ ಒಂದೇ ಬಾರಿಗೆ ಯಶಸ್ವಿಯಾಗಿಲ್ಲ. ಹತ್ತುಹಲವು ಸೋ ಲುಗಳ ಬಳಿಕವೇ ಸಾಧಕರು ಯಶಸ್ಸು ಕಂಡಿದ್ದುಅಂತ ಹೇಳ್ತಾಇವತ್ತಿನ ಸಂಚಿಕೆಗೆ ಪೂರ್ಣವಿರಾಮವನ್ನಿಡ್ತಾಇದೀನಿ.

    8 min
  3. S1 EP 105 ಪಂಚ ಮಹಾಭೂತಗಳು ಮತ್ತು ನಾವು | Pancha Mahabhutas and us

    05/20/2024

    S1 EP 105 ಪಂಚ ಮಹಾಭೂತಗಳು ಮತ್ತು ನಾವು | Pancha Mahabhutas and us

    ಸಂಖ್ಯೆ ಗಳಿಗೂ ನಮ್ಮ ಜೀ ವನಶೈ ಲಿಗೂ ಇರುವ ಅವಿನಾಭಾವ ಸಂಬಂಧಗಳನ್ನು ಅವಲೋ ಕಿಸುತ್ತಾ ಸಾಗೋ ಣ. ಒಂದೋ ನವರಾತ್ರಿಯ ಮಾತಾದರೆ, ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ . ಚತುರ್ಭು ಜದ ಮಹತ್ವವನ್ನೂ ಕೇ ಳಿದವರೇ , ನಾವು ಸಪ್ತಸಾಗರವನ್ನೂ ನೋ ಡಿದವರೇ . ಇವುಗಳಲ್ಲಿ ಕೆಲವೊಂದು, ತಿಳಿದ, ತಿಳಿಯದ ಸಂಖ್ಯೆ ಗಳ ಜೊ ತೆಗೆ ಅವಿನಾಭಾವ ಸಂಬಂಧ ಇರುವ ಭಾರತೀ ಯ ಪರಂಪರೆಯನ್ನುಅವಲೋ ಕಿಸೋ ಣ. ಇಂದಿನ ಸಂಚಿಕೆ ಶುರು ಮಾಡೋ ಣ. --------- ಇಂದಿನ ನಮ್ಮ ರಿಲಾಕ್ಸ್ ವಿತ್ ಬಡೆಕ್ಕಿ ಲ ಪ್ರದೀ ಪ್ ಪಾಡ್ಕಾಸ್ಟ್ ಶೋ ನಲ್ಲಿ ನಾನಿವತ್ತು ಪಂಚಭೂತಗಳು ಮತ್ತು ಅವುಗಳ ಗುಣವಿಶೇ ಷಗಳನ್ನು ತಿಳಿಸುವ ಪ್ರಯತ್ನ ಮಾಡ್ತಾ ಇದೀ ನಿ. ಇದರ ಗುಣವಿಷಯಗಳನ್ನೇ ಪಂಚ ತನ್ಮಾ ತ್ರೆಗಳು ಎಂದು ಕರೆಯುತ್ತಾರೆ. ಇದರ ಬಗ್ಗೆ ಇನ್ನೊ ಂದು ಸಂಚಿಕೆಯಲ್ಲಿ ವಿವಿರವಾಗಿ ನಿಮ್ಮ ಮುಂದಿಡ್ತೀನಿ. ಪಂಚಭೂತಗಳು ಯಾವುದು ಅಂತ ಕೇ ಳಿದ್ರೆ ಯಾರು ಬೇ ಕಾದರೂ ಉತ್ತರಿಸ್ತಾರೆ, ಆದ್ರೆ ಗುಣಗಳೇ ನು ಅವು ನಮ್ಮ ದೇ ಹದೊ ಂದಿಗೆ ಯಾವ್ ರೀ ತಿ ಬೆಸೆದುಕೊ ಂಡಿದೆ ಅನ್ನ ೋದನ್ನ ನಾವು ಈ ಸಂಚಿಕೆಯಲ್ಲಿ ತಿಳಿದುಕೊ ಳ್ಳ ೋಣ… ಪಂಚಭೂತಗಳಲ್ಲಿ ಆಕಾಶ ಅತ್ಯಂತ ಸೂಕ್ಷ್ಮ ವಾಗಿದ್ದು ಅಥವಾ ನಿರಾಕಾರವಾದುದು. ಆಕಾಶದ ಗುಣ ಶಬ್ದ. ಆಕಾಶದಲ್ಲಿ ಶಬ್ದ ಪ್ರವಹಿಸಬಲ್ಲದು. ‘ಓಂ’ ಕಾರವು ನಿತ್ಯನಿರಂತರವಾಗಿ ಆಕಾಶದಲ್ಲಿ ಪ್ರವಹಿಸುತ್ತಿರತ್ತೆ. ಅದೇ ಆಕಾಶದಲ್ಲಿ ಭೂಮಿ ಅಥವಾ ಇತರ ಗ್ರಹಗಳ ಸುತ್ತವ್ಯಾ ಪಿಸಿರುವ ವಾಯುವಿನಲ್ಲಿ ಶಬ್ದ ಮತ್ತು ಸ್ಪರ್ಶ ಗಳ ಗುಣಗಳಿವೆ. ಬೀ ಸುವ ಗಾಳಿಯ ಶಬ್ದವನ್ನು ನಾವು ಕೇ ಳಬಹುದು. ಆಕಾಶದ ಗುಣವಾದ ಶಬ್ದವು ಹೃದಯವು ರಕ್ತವನ್ನು ಪಂಪ್ ಮಾಡುವಾಗ ಸೂಕ್ಷ್ಮ ಶಬ್ದವಾಗಿ ಹೊ ರಬರುತ್ತದೆ. ನಮ್ಮ ಗಂಟಲ ಭಾಗದಲ್ಲಿರುವ ಧ್ವನಿಪೆಟ್ಟಿಗೆಯು ಶಬ್ದ ಹೊ ರಡಿಸಬಲ್ಲದು. ಪದಗಳು, ಮಾತುಗಳು, ಭಾಷೆಗಳು ಹುಟ್ಟಿದ್ದು ಅಲ್ಲಿಂದಲೇ . ಕಿವಿಯು ಶಬ್ದವನ್ನು ಕೇ ಳಬಲ್ಲದು. ಆದ್ದರಿಂದ ಆಕಾಶದ ಶಬ್ದಅನ್ನ ೋ ಗುಣ ನಮ್ಮ ದೇ ಹದಲ್ಲಿಯೂ ಪ್ರವಹಿಸುತ್ತದೆ. ಅಲ್ಲದೆ ಗಾಳಿಯ ಮೂಲಕ ಶಬ್ದವು ಇನ್ನಷ್ಟು ವೇ ಗವಾಗಿ ಓಡಾಡುತ್ತೆ. ಗಾಳಿಯ ಸ್ಪರ್ಶ ದ ಅನುಭವವೂ ನಮಗಾಗತ್ತೆ. ಆದರೆ ಅದಕ್ಕೆ ರೂಪವಿಲ್ಲ. ಆದ್ದರಿಂದ ವಾಯುವನ್ನು ನೋ ಡೋ ದಕ್ಕಾ ಗಲ್ಲ. ಉಸಿರಾಟದ ಮೂಲಕ ನಮ್ಮ ಶರೀ ರವನ್ನು ಜೀ ವಂತವಾಗಿ ಇರಿಸಲಿಕ್ಕೆ ವಾಯುವು ಅತ್ಯಂತ ಮುಖ್ಯವಾಗಿರತ್ತೆ. ಇದಕ್ಕೆ ಪ್ರಾಣವಾಯು ಅಂತಲೂ ಹೇ ಳಲಾಗತ್ತೆ.್ತೆ ನಮ್ಮ ಶರೀ ರದ ಕವಚವಾಗಿರುವ ಚರ್ಮ ವು ಸ್ಪರ್ಶ ಜ್ಞಾ ನವುಳ್ಳದ್ದು. ಸೂಕ್ಷ್ಮ ವಾದ ಗಾಳಿಯ ಅನುಭವವನ್ನೂ ಪಡೆಯತ್ತೆ. ಪಂಚಭೂತಗಳಲ್ಲಿ ಮೂರನೇ ದು ಅಗ್ನಿಯಲ್ಲಿ ಶಬ್ದ, ಸ್ಪರ್ಶ ಮತ್ತು ರೂಪವಿದೆ. ಉರಿವ ಬೆಂಕಿಯ ಶಬ್ದ ಕೇ ಳಬಹುದು. ಬೆಂಕಿಯನ್ನು ಸ್ಪರ್ಶಿ ಸಿದರೆ ಸುಡುತ್ತದೆ. ಹೀ ಗಾಗಿ ಅಲ್ಲಿ ಸ್ಪರ್ಶ ವಿದೆ. ಮತ್ತೆ ನಾವದನ್ನು ನೋ ಡಲೂಬಹುದು. ಹೀ ಗಾಗಿ ಅದಕ್ಕೆ ರೂಪವಿದೆ. ನಮ್ಮ ಶರೀ ರ ಸುರಕ್ಷಿತವಾಗಿರಬೇ ಕಾದರೆ ದೇ ಹಕ್ಕೆ ಇಂತಿಷ್ಟು ಉಷ್ಣಾಂಶ ಅತ್ಯಗತ್ಯ ಅನ್ನ ೋದು ನಮಗೆಲ್ಲಾ ಗೊ ತ್ತು. ಜಠರಾಗ್ನಿಯು ಆ ಕೆಲಸವನ್ನ ನಿರ್ವ ಹಿಸತ್ತೆ. ಅಗ್ನಿಗೆ ಶಬ್ದ, ಸ್ಪರ್ಶ , ರೂಪಗಳಿವೆ. ಕಣ್ಣುಗಳು ಇದರ ರೂಪವನ್ನು ನೋ ಡಬಲ್ಲವು. ಪಂಚ ಭೂತಗಳಲ್ಲಿ ನಾಲ್ಕನೆಯದಾದ ಜಲ ಅಥವಾ ನೀ ರಿಗೆ ಶಬ್ದ, ಸ್ಪರ್ಶ , ರೂಪ ಹಾಗೂ ರಸದ ಗುಣವಿಶೇ ಷಗಳಿವೆ. ರಸವೆಂದರೆ ದ್ರವ, ಹರಿಯುವಂತದ್ದು, ಆಕಾರವಿದೆ ಆದರೆ ನಿರ್ದಿ ಷ್ಟ ಆಕಾರವಿಲ್ಲದ ಗುಣ. ನಮ್ಮ ದೇ ಹದಲ್ಲಿ ಹರಿಯುವ ರಕ್ತ ದ್ರವ ರೂಪದ್ದು. ನಮ್ಮ ದೇ ಹದಲ್ಲಿ ಸರಾಸರಿ ಶೇ . 50-60 ನೀ ರು ಬೆರೆತುಕೊ ಂಡಿದೆ. ನಾವು ತಿಂದ ಆಹಾರವು ಜೀ ರ್ಣ ವಾಗಲು ನೀ ರು ಬೇ ಕೇ ಬೇ ಕು. ಶರೀ ರ ಆರೋ ಗ್ಯವಾಗಿರಬೇ ಕಾದರೆ ವ್ಯಕ್ತಿಯು ದಿನಕ್ಕೆ 10-12 ಲೋ ಟ ನೀ ರನ್ನು ಸೇ ವಿಸಬೇ ಕಾಗುತ್ತದೆ. ನೀ ರಿನ ಪ್ರಮುಖ ಗುಣ ರಸ ಅಂದರೆ ದ್ರವ ರೂಪದ್ದು, ಹರಿಯುವಿಕೆ ಅದರ ಸ್ವಭಾವ. ಇನ್ನು ಐದನೆಯದು ಪೃಥ್ವಿ ಅಥವಾ ಭೂಮಿ ಇದರ ಸ್ವರೂಪ ಸ್ಥೂಲ. ಶಬ್ದ, ಸ್ಪರ್ಶ , ರೂಪ, ರಸ ಹಾಗೂ ಸುವಾಸನೆಯನ್ನ ಹೊ ಂದಿದೆ. ನಮಗೆ ದೊ ರೆತಿರುವ ಪ್ರತಿಯೊಂದು ವಸ್ತುವೂ ಭೂಮಿಯಿಂದಲೇ ಬಂದದ್ದು. ಈ ವಸ್ತುಗಳಿಗೆ ನಾಲ್ಕು ಗುಣಗಳ ಜತೆಗೆ ಗಂಧ ಅಥವಾ ವಾಸನೆಯೂ ಸೇ ರಿಕೊ ಂಡಿದೆ. ಗಂಧದಲ್ಲಿ ವಾಸನೆ, ರುಚಿ, ಬಣ್ಣವೂ ಅಡಗಿದೆ. ಇನ್ನು ಅತ್ಯಂತ ಸ್ಥೂಲ ಸ್ವರೂಪದ ಪಂಚಭೂತ ಭೂಮಿಯ ತತ್ವವು ದೇ ಹದಲ್ಲಿ ಆಕಾರಗೊ ಳ್ಳಲು ಎಲುಬು, ಕೀ ಲು, ಅಸ್ಥಿ, ಮಾಂಸ, ಸ್ನಾಯುಗಳ ಮೂಲಕ ಪ್ರಕಟಗೊ ಂಡಿದೆ ಅಂತಲೇ ಹೇ ಳಬಹುದು. ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ ಈ ಎಲ್ಲಾ ಪಂಚಭೂತಗಳಿಂದ ಇಡೀ ದೇ ಹವು ಸಾಕಾರಗೊ ಂಡು ಶಬ್ದ, ಸ್ಪರ್ಶ , ರೂಪ, ರಸ, ಗಂಧಗಳ ಅನುಭವವನ್ನ ಪಡಿಬಹುದು. ಹೀ ಗೆ ಸೂಕ್ಷ್ಮ ಆಕಾಶದಿಂದ ತೊ ಡಗಿ ಸ್ಥೂಲಗೊ ಳ್ಳುತ್ತಾ, ಭೂಮಿಯವರೆಗೆ ಪಂಚಭೂತಗಳು ವಿಸ್ತರಿಸಿವೆ. ಪ್ರಕೃತಿಯ ಎಲ್ಲಾ ಜೀ ವಿಗಳ ಶರೀ ರಗಳು ಈ ಪಂಚಭೂತಗಳಿಂದ ನಿರ್ಮಿ ತವಾಗಿವೆ. ಇದು ಪಂಚಭೂತಗಳಿಗೆ ಮತ್ತು ನಮಗೆ ಅಥವಾ ಜೀ ವಿಗಳಿಗೆ ಇರುವ ಒಡನಾಟ. ಪಂಚಭೂತಗಳಿಲ್ಲದೇ ನಾವಿಲ್ಲ ಅನ್ನ ೋದನ್ನ ಹೇ ಳುತ್ತಾ ಇವತ್ತಿನ ಸಂಚಿಕೆಗೆ ಪೂರ್ಣ ವಿರಾಮವನ್ನಿಡ್ತಾ ಇದೀ ನಿ.

    9 min
  4. S1 EP 129 ಹಾಯಾಗಿದ್ದರೆ ಗೆಲುವಲ್ಲಿ .. ? | Get out from the Comfort zone

    05/12/2024

    S1 EP 129 ಹಾಯಾಗಿದ್ದರೆ ಗೆಲುವಲ್ಲಿ .. ? | Get out from the Comfort zone

    ಒಬ್ಬ ಬಡವನಿದ್ದನಂತೆ. ಅವನು ಪ್ರತಿದಿನ ಅಚಂಚಲ ಭಕ್ತಿಯಿಂದ ದೇವಸ್ಥಾನಕ್ಕೆ ಹೋಗಿ ನಮಸ್ಕರಿಸಿ ಕಾರ್ಯಪ್ರವೃತ್ತನಾಗುತ್ತಿದ್ದ. ಆತನ ಭಕ್ತಿಗೆ ಒಲಿದ ದೇವರು ಪ್ರತ್ಯಕ್ಷನಾಗಿ ನಿನಗೇನು ವರ ಬೇಕು, ಕೇಳು ಅಂತ ಹೇಳ್ತಾನೆ. ಆ ಬಡವ ನನಗೆ ಆನೆ ಬೇಕು ಅಂತ ಹೇಳ್ತಾನೆ. ಇದನ್ನ ಕೇಳಿದ ದೇವರಿಗೆ ಆಶ್ಚರ್ಯ ಆಗತ್ತೆ, ಅಲ್ಲಾ, ನಿನ್ನನ್ನು ನೀನೇ ಸಾಕಲು ನಿನಗಾಗುತ್ತಿಲ್ಲ. ಇನ್ನು ಆನೆಯನ್ನು ಎಲ್ಲಿಂದ ಸಾಕ್ತೀಯಾ? ಬೇರೆ ಏನಾದ್ರು ವರ ಕೇಳು ಅಂತ ಹೇಳ್ತಾನೆ. ಆದರೆ ಆ ಬಡವ ತನಗೆ ಅನೆಯೇ ಬೇಕೆಂದಾಗ, ಬಹುಶ: ಚಿನ್ನದ ಆನೆ ಕೇಳುತ್ತಿದ್ದಾನೆಂದು ಭಾವಿಸಿ ದೇವರು ಅದನ್ನು ಕರುಣಿಸಲು ಮುಂದಾಗುತ್ತಾನೆ. ಆ ಬಡವ ಅದಲ್ಲ, ನನಗೆ ಆನೆ ಎಂದರೆ ಆರೋಗ್ಯ ಮತ್ತು ನೆಮ್ಮದಿಯ ವರ ಕರುಣಿಸು ಅಂತ ಹೇಳ್ತಾನೆ.   ನಮಗೆಲ್ಲರಿಗೂ ಬೇಕಾದ್ದೂ ಅದೇ ಆನೆಯೇ, ದಿನನಿತ್ಯ ನಡೆಸುವ ಎಲ್ಲ ಕಸರತ್ತುಗಳೂ ಅದಕ್ಕಾಗಿಯೇ. ಕಸರತ್ತುಗಳ ವೈಖರಿ, ಮಾರ್ಗ, ಪರಿಕಲ್ಪನೆಗಳು ಮಾತ್ರ ಬೇರೆ ಬೇರೆ. ಹಾಗಾಗಿ ಒಬ್ಬೊಬ್ಬರದು ಒಂದೊಂದು ರೀತಿಯ ಸಾಧನಾಪಥ. ಭಗವದ್ಗೀತೆ ಕೂಡ ಆಧ್ಯಾತ್ಮಿಕ ಸಾಧನೆಗಾಗಿ ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಮುಂತಾದ ಹಲವಾರು ಸಾಧನಾ ಪಥಗಳನ್ನು ಪ್ರತಿಪಾದಿಸಿದೆ. ಎಲ್ಲರೂ ಎಲ್ಲವನ್ನೂ ಪರಿಪಾಲಿಸುವುದು ಅತೀ ಕಷ್ಟಸಾಧ್ಯವಾದ ವಿಚಾರ. ಅವರವರ ಕರ್ಮಾನುಸಾರ, ಶಕ್ತ್ಯಾನುಸಾರ ಮತ್ತು ಸಂಸ್ಕಾರಾನುಸಾರ ಒಬ್ಬೊಬ್ಬರು ಒಂದೊಂದು ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಸಾಧನಾಪಥವನ್ನು ಆರಿಸಿಕೊಳ್ಳುವುದು ಒಂದು ರೀತಿಯ ಸಾಧನೆಯಾದರೆ ಅದನ್ನ ಸಾಧಿಸೋದಕ್ಕೆ ಬೇಕಾಗೋ ಸೂತ್ರಗಳು ಹಲವಾರು ಅದರಲ್ಲಿ ಒಂದು ಅಂದ್ರೆ ಕಂಫರ್ಟ್‌ ಝೋನ್‌ನಿಂದ ಹೊರಬರೋದು. ನಾವು ನಮ್ಮ ಕಂಫರ್ಟ್‌ ಝೋನ್‌ನಿಂದ ಹೊರಬಂದ್ರೆ ಸಕ್ಸೆಸ್‌ಗೆ ಒಂದು ಹೆಜ್ಜೆ ಹತ್ತಿರವಾದಂತೆ. ಜೀವನದಲ್ಲಿ ನಮಗೆ ಕಂಫರ್ಟ್‌ ಜೋನ್‌ ಅಂತ ಏನಿರತ್ತೆ, ಎಲ್ಲಿ ನಾವು ಆರಾಮಾಗಿ ಇರ್ತೀವೋ ಅಲ್ಲೇ ನಾವು ಯಾವಾಗ್ಲೂ ಇದ್ದು ಬಿಡ್ತೀವಿ. ಅದನ್ನ ದಾಟಿ ನಾವು ಪ್ರಪಂಚ ಹೇಗೆ ಏನು ಅನ್ನೋದನ್ನ ನೋಡದೇ ಇಲ್ಲ. ನಮ್ಮಲ್ಲಿ ಅನೇಕ ಜನರು ತಮ್ಮದೇ ಆದ ಕಂಫರ್ಟ್‌ ಝೋನ್‌ನಲ್ಲೇ ಬದುಕೋದಕ್ಕೆ ಇಷ್ಟಪಡ್ತೀವಿ. ಅದು ಆಫೀಸಿನ ಕೆಲಸನೇ ಆಗಿರ್ಬಹುದು, ಅಥವಾ ಮನೆಯೊಳಗೇ ಇರೋದಾಗಲಿ, ಅಲ್ಲದೇ ನಮ್ಮ ಸುತ್ತಲಿನ ಜನರ ಜೊತೆ ಬೆರೆಯುವುದಾಗಲಿ. ಒಟ್ಟಾರೆ ಇದ್ರಲ್ಲೆ ನಾವು ಆರಾಮಾಗಿ ಇರ್ತಿವಿ. ಅದರ ಹೊರತಾಗಿ ಹೊಸದೇನನ್ನೋ ಪ್ರಯತ್ನಿಸೋದಕ್ಕೆ ಭಯ ಪಡ್ತೀವಿ. ಹೊಸ ಕೆಲಸ ಹೇಗಿರುತ್ತದೋ? ಮನೆಯಿಂದ ಹೊರಹೋದರೆ ಅಲ್ಲಿನ ಪರಿಸ್ಥಿತಿಯನ್ನ ನಿಭಾಯಿಸಕ್ಕಾಗತ್ತೋ? ಇಲ್ವೋ? ನಮ್ಮನ್ನ ಯಾರು ಏನ್‌ ಅನ್ಕೊಳ್ತಾರೋ ಏನೋ? ಅಂತೆಲ್ಲಾ ಭಾವಿಸಿಕೊಂಡು ಕಂಫರ್ಟ್‌ ಝೋನ್‌ನಿಂದ ಹೊರಬರೋದಕ್ಕೆ ಹೆದರ್ತಾರೆ.   ಜೀವನದಲ್ಲಿ ಕೆಲವು ರೂಢಿಗಳನ್ನು ಎಷ್ಟು ಬೇಗ, ಎಷ್ಟು ಸುಲಭವಾಗಿ ಅಳವಡಿಸಿಕೊಳ್ತೇವೆ ಅಂದ್ರೆ ಅದನ್ನ ಬಿಡೋದಕ್ಕೆ ಕಷ್ಟವಾಗೋವಷ್ಟು. ಆದರೆ ನಮ್ಮ ಜೀವನದಲ್ಲಿ ಕಂಫರ್ಟ್‌ ಝೋನ್‌ನಿಂದ ಹೊರಬರುವುದು ತುಂಬಾ ಮುಖ್ಯ. ಆಗಲೇ ನಮಗೆ ಜಗತ್ತು ನಮಗೆ ವಿಶಾಲವಾಗಿ ಕಾಣತ್ತೆ. ಆಗಲೇ ನಮ್ಮ ಸಾಮರ್ಥ್ಯದ ಅರಿವು ನಮಗಾಗೋದು. ಹೊಸದಾಗಿ ಆತ್ಮವಿಶ್ವಾಸ ಮೂಡತ್ತೆ. ಹಾಗೆ ನೀವು ಕಂಫರ್ಟ್‌ ಝೋನ್‌ನಿಂದ ಹೊರಗೆ ಹೇಗೆ ಹೆಜ್ಜೆ ಹಾಕಬೇಕೆಂದು ತಿಳಿಯೋದಕ್ಕೆ ನಮ್ಮ ಇಚ್ಛಾಶಕ್ತಿ ಮತ್ತು ದೃಷ್ಟಿಕೋನದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತ್ಯಗತ್ಯ. ಕಂಫರ್ಟ್‌ ಝೋನ್‌ನಲ್ಲಿ ಜೀವನವನ್ನು ನಡೆಸುವುದು ಸುರಕ್ಷಿತ, ಆರಾಮದಾಯಕವಾಗಿರುತ್ತದೆ. ಅಲ್ಲದೇ ಅದ್ರಲ್ಲಿ ಯಾವುದೇ ರೀತಿಯ ಸ್ಟ್ರೆಸ್‌ ಇರೋದಿಲ್ಲ. ಆದರೆ ನಾವು ಬಾವಿಯೊಳಗಿನ ಕಪ್ಪೆಯಾಗಿರ್ತೇವೆ. ಆದರೆ ಅದೇ ಕಂಫರ್ಟ್‌ ಝೋನ್‌ನ್ನ ಬಿಟ್ಟು ಹೊರ ಬಂದಾಗ ನಾವು ಸಕ್ಸೆಸ್‌ಗೆ ಒಂದು ಹೆಜ್ಜೆ ಹತ್ತಿರವಾಗಿರ್ತೇವೆ. 'ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭೂಯಾತ್'- ಅಂದರೆ ಗೀತಾಸಾರದ ಸ್ವಲ್ಪ ಅನುಷ್ಠಾನ ಕೂಡ ಮನುಷ್ಯನನ್ನು ಹೆಚ್ಚು ಶ್ರೀಮಂತನೂ, ಸುಂದರನೂ ಹಾಗೂ ಭಯರಹಿತನೂ ಆಗಿ ರೂಪುಗೊಳ್ಳುವಲ್ಲಿ ನೆರವಾಗುತ್ತದೆ. ಹೇಗೆ ಕೂಪದಲ್ಲಿರುವ ಮಂಡೂಕ ತನಗೆಟಕಿದಷ್ಟನ್ನು ಪಡೆದು ಮುನ್ನಡೆಯುತ್ತದೆಯೋ ಮತ್ತು ಅಷ್ಟರಲ್ಲಿಯೇ ನೆಮ್ಮದಿಯನ್ನು ಪಡೆಯುತ್ತದೆಯೋ ಅದೇ ರೀತಿ ನಮ್ಮ ಜ್ಞಾನಚಕ್ಷುಗಳಿಗೆಟಕುವಂತಹ ಕೆಲವೇ ಉತ್ತಮ ವಿಚಾರಗಳನ್ನು ಅರಿತು, ಪರಾಮರ್ಶಿಸಿಕೊಂಡು, ಅಳವಡಿಸಿಕೊಂಡು ನಂತರ ನಿರಂತರ ಸಾಧನೆಗೈಯುವುದು ದ್ವಂದ್ವರಹಿತ ಬಾಳ್ವೆಗೆ ಶ್ರೀ ಕೃಷ್ಣ ಹೇಳಿದಂತೆ ನಾಂದಿಯಾಗಬಲ್ಲದು. ನಿಮ್ಮ ಆರಾಮ ವಲಯದಿಂದ ಹೊರಗೆ ಹೇಗೆ ಹೆಜ್ಜೆ ಹಾಕಬೇಕೆಂದು ಕಲಿಯುವ ಮೂಲಕ ನಾವು ಒಳ್ಳೆಯ ಜೀವನವನ್ನು ನಡೆಸಬಹುದು. ಒಮ್ಮೆ ನೀವು ನಿಮ್ಮ ಆರಾಮ ವಲಯದಿಂದ ಹೊರಬಂದು ರಿಸ್ಕ್‌ ತೆಗೆದುಕೊಳ್ಳಲು ಶುರು ಮಾಡಿದರೆ, ನೀವು ಹೊಸದೇನನ್ನೋ ಸಾಧಿಸಬಹುದು. ಆಗ ನೀವು ಹೊಸ ಬದುಕನ್ನು ಶುರು ಮಾಡಬಹುದು. ನಿಮಗೇ ಗೊತ್ತಿಲ್ಲದ ನಿಮ್ಮಲ್ಲಿರುವ ಸಾಮರ್ಥ್ಯವನ್ನು ಗುರುತಿಸಿಕೊಳ್ಲಬಹುದು. ಆದ್ದರಿಂದ ನಾವು ಕಂಫರ್ಟ್‌ ಝೋನ್‌ನಿಂದ ಹೊರಬರೋದಕ್ಕೆ ಟ್ರೈ ಮಾಡ್ಬೇಕು. ಜನರು ಇದ್ದಂತೆಯೇ ಇರಲು ಬಯಸುತ್ತಾರೆ. ಏಕೆಂದರೆ ಅವರಿಗೆ ಅದು ಅನುಕೂಲಕರ ಮತ್ತು ಸುರಕ್ಷಿತವಾಗಿರುತ್ತದೆ. ಆದಾಗ್ಯೂ, ನೀವು ಕಂಫರ್ಟ್‌ ಝೋನ್‌ನಲ್ಲಿಯೇ ಇದ್ದರೆ ಇದ್ದ ಹಾಗೇ ಇರುತ್ತೀರೇ ಹೊರತು ಅಭಿವೃದ್ಧಿಯಾಗುವುದಿಲ್ಲ. ಅವಕಾಶಗಳನ್ನು ಪಡೆದುಕೊಳ್ಳದೇ… ಹೊಸದನ್ನು ಪ್ರಯತ್ನಿಸದೇ ಇರುವುದರಿಂದ ನಿಮ್ಮ ಬದುಕು ನೀರಸವಾಗುವ ಸಾಧ್ಯತೆಗಳಿರುತ್ತವೆ. ಕೂಪ ಮಂಡೂಕವು ನಮಗೆ ಆದರ್ಶಪ್ರಾಯವಾಗಬೇಕಷ್ಟೆ ಅಂತ ಹೇಳ್ತಿನಿ ಇವತ್ತಿನ ಸಂಚಿಕೆಗೆ ಪೂರ್ಣವಿರಾಮವನ್ನಿಡ್ತಾ ಇದೀನಿ.

    9 min
  5. S1 EP 104 ದಿಕ್ಕುಗಳು | Direction

    05/06/2024

    S1 EP 104 ದಿಕ್ಕುಗಳು | Direction

    ಹಿಂದೆ ಕಣ್ಣಿಗೆ ಕಾಣುವ ಸೂರ್ಯನ ಚಲನೆಯ ಆಧಾರದ ಮೇಲೆ ದಿಕ್ಕುಗಳನ್ನು ಮನುಷ್ಯ ಗುರುತಿಸುತ್ತಿದ್ದ. ಪ್ರತಿದಿನ ಬೆಳಿಗ್ಗೆ ಸೂರ್ಯ ಮೂಡುವ ದಿಕ್ಕಿಗೆ ಒಂದು ಹೆಸರಿಟ್ಟ, ಮುಳುಗುವ ದಿಕ್ಕಿಗೆ ಇನ್ನೊಂದು ಹೀಗೆ ದಿಕ್ಕುಗಳನ್ನು ಹೆಸರಿಸುತ್ತಾ ಬಂದ ಮನುಷ್ಯನು ದಿಕ್ಕುಗಳನ್ನು ಗುರುತಿಸಿದ್ದಾನೆ, ಇದೇ ದಿಕ್ಕುಗಳ ಬಗ್ಗೆ ನಾವು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಸಂಖ್ಯೆಗಳಿಗೂ ನಮ್ಮ ಜೀವನಶೈಲಿಗೂ ಇರುವ ಅವಿನಾಭಾವ ಸಂಬಂಧಗಳನ್ನು ಅವಲೋಕಿಸುತ್ತಾ ಸಾಗೋಣ. ಒಂದೋ ನವರಾತ್ರಿಯ ಮಾತಾದರೆ, ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ. ಚತುರ್ಭುಜದ ಮಹತ್ವವನ್ನೂ ಕೇಳಿದವರೇ, ನಾವು ಸಪ್ತಸಾಗರವನ್ನೂ ನೋಡಿದವರೇ. ಇವುಗಳಲ್ಲಿ ಕೆಲವೊಂದು, ತಿಳಿದ, ತಿಳಿಯದ ಸಂಖ್ಯೆಗಳ ಜೊತೆಗೆ ಅವಿನಾಭಾವ ಸಂಬಂಧ ಇರುವ ಭಾರತೀಯ ಪರಂಪರೆಯನ್ನುಅವಲೋಕಿಸೋಣ. ಇಂದಿನ ಸಂಚಿಕೆ ಶುರು ಮಾಡೋಣ. ಅನಾದಿ ಕಾಲದಿಂದಲೂ ಮನುಷ್ಯನ ತಿರುಗಾಟ, ಸಂಸ್ಕೃತಿ ಹಾಗೂ ಭಕ್ತಿಯ ನಂಬಿಕೆಗಳಿಗೆ ದಿಕ್ಕುಗಳು ಅವಿಭಾಜ್ಯ ಅಂಗವಾಗಿವೆ ಅನ್ನೋದನ್ನ ನಾವು ನಂಬಿಕೊಂಡು ಬಂದಿದ್ದೇವೆ. ಅಲ್ಲದೇ ಅದು ನಿಜವೂ ಕೂಡ. ನಾವು ಬದುಕ್ತಾ ಇರೋ ಯುಗದಲ್ಲಿ ಇತ್ತೀಚೆಗೆ ನಾವು ರಾಕೆಟ್, ಉಪಗ್ರಹ ಎಲ್ಲ ಬಳಸಿ ಉತ್ತರ ದಿಕ್ಕಿಗೆ ಭೂಮಿಯ ಉತ್ತರ ಧ್ರುವ, ದಕ್ಷಿಣ ದಿಕ್ಕಿಗೆ ದಕ್ಷಿಣ ಧ್ರುವ ಎಂಬುದನೆಲ್ಲಾ ತಿಳಿದಿದ್ದೇವೆ. ಅದಕ್ಕೂ ಮುಂಚೆ ಇದರ ಬಗ್ಗೆ ಮನುಷ್ಯನಿಗೆ ಅಷ್ಟೊಂದು ಜ್ಞಾನ ಇರಲಿಲ್ಲ. ಭೂಮಿಯ ಮೇಲಿಂದ ಕಣ್ಣಿಗೆ ಕಾಣುತ್ತಿದ್ದುದು ಸೂರ್ಯ, ಚಂದ್ರ, ನಕ್ಷತ್ರಗಳು ಮಾತ್ರ. ಕೆಲವರು ಭೂಮಿ ಚಪ್ಪಟೆ ಇದೆಯೆಂದು ಅದರ ತೀರಾ ಅಂಚಿನ ಹೊರಗೆ ಹೋದರೆ ಅಂತರಿಕ್ಷಕ್ಕೆ ಎಂದು ಬಿದ್ದು ಹೋಗುತ್ತೇವೆ ಅಂತೆಲ್ಲಾ ನಂಬಿದ್ದರು. ಹಿಂದೆ ಕಣ್ಣಿಗೆ ಕಾಣುವ ಸೂರ್ಯನ ಚಲನೆಯ ಆಧಾರದ ಮೇಲೆ ದಿಕ್ಕುಗಳನ್ನು ಮನುಷ್ಯ ಗುರುತಿಸುತ್ತಿದ್ದ. ಪ್ರತಿದಿನ ಬೆಳಿಗ್ಗೆ ಸೂರ್ಯ ಮೂಡುವ ದಿಕ್ಕಿಗೆ ಒಂದು ಹೆಸರಿಟ್ಟ, ಮುಳುಗುವ ದಿಕ್ಕಿಗೆ ಇನ್ನೊಂದು. ಅವೆರಡರ ನಡುವಿನ ದಿಕ್ಕುಗಳಿಗೆ ಇನ್ನೆರಡು ಹೆಸರನ್ನ ಇಡ್ತಾನೆ. Mostly ಇದೇ ರೀತಿ ಅನ್ಸತ್ತೆ, ಒಂದೊಂದು ದಿಕ್ಕುಗಳಿಗೆ ಒಂದೊಂದು ಹೆಸರು ಬಂದಿರೋದು. ಗುಡ್ಡ ಕಾಡುಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ ಜಾಗದ ಗುರುತು, ಸೂರ್ಯನ ಸ್ಥಾನ ಹೀಗೆ ಬೇರೆ ಬೇರೆ ವಿಚಾರಗಳ ಆಧಾರದ ಮೇಲೆ ಹೋಗುತ್ತಾ ಇದ್ದನೆನೋ. ಹಾಗಾದ್ರೆ ನಾವು ಈಗ ಹೆಸರಿಸೋ ದಿಕ್ಕುಗಳು ಯಾವುದು ಅದರ ಸುತ್ತಲ ವಿಚಾರಗಳನ್ನ ತಿಳಿದುಕೊಳ್ಳೋಣ. ಸೂರ್ಯ ಮೂಡೋ ದಿಕ್ಕು, ಅಂದರೆ ಉದಯ ಆಗುವ ದಿಕ್ಕು ಮೂಡಣ ಅಥವಾ ಮೂಡಲ ಅಂತ ಕರ್ದ ಅರ್ಥಾತ್ ನಾರ್ಮಲ್‌ ಆಗಿ ಚಾಲ್ತಿಯಲ್ಲಿರೋ ಹೆಸರು ಪೂರ್ವ. ಸೂರ್ಯ ಮುಳುಗುವ ದಿಕ್ಕನ್ನು ಪಡುವಣ ಅಥವಾ ಪಡುವಲ ಅಂದ್ರೆ ಪಶ್ಚಿಮ ಅಂತ ಗುರುತಿಸ್ತಾನೆ. ಉಳಿದ ಎರಡು ಲಂಬವಾಗಿರುವ ದಿಕ್ಕುಗಳು ಉತ್ತರ ಅಥವಾ ಬಡಗಣ ಹಾಗೇನೆ ದಕ್ಷಿಣ ತೆಂಕಣ ಅಂತ ಕರೆಯೋದಕ್ಕೆ ಶುರು ಮಾಡ್ತಾನೆ. ಮುಖ್ಯವಾಗಿ ನಾಲ್ಕು ದಿಕ್ಕುಗಳು. ವಾಸ್ತವಿಕವಾಗಿ ದಿಕ್ಕುಗಳನ್ನ ಭೂಮಿ ಹಾಗೂ ಅದರ ಚಲನೆಯ ಆಧಾರದ ಮೇಲೆ ಗುರುತಿಸಲಾಗತ್ತೆ ಅನ್ನೋದನ್ನ ನಾವು ಕೇಳಿದ್ದೇವೆ. ನಾವು ಭೂಮಿಯ ಮೇಲೆ ಎಲ್ಲೇ ನಿಂತರೂ ಉತ್ತರ ದಿಕ್ಕು ಅಂದ್ರೆ ಭೂಮಿಯ ಉತ್ತರ ಧ್ರುವದ ಕಡೆಗೆ ಹಾಗೇ ದಕ್ಷಿಣ ದಿಕ್ಕು ಭೂಮಿಯ ದಕ್ಷಿಣ ಧ್ರುವದ ಕಡೆಗೆ ಅಂತರ್ಥ. ಉತ್ತರ ಹಾಗೂ ದಕ್ಷಿಣ ದಿಕ್ಕು ಭೂಮಿಯ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ ವನ್ನು ತೋರಿಸತ್ತೆ. ಭೂಮಿಯು ಪಶ್ಚಿಮದಿಂದ ಪೂರ್ವದ ಕಡೆಗೆ ತಿರುಗತ್ತೆ. ಪೂರ್ವ ಹಾಗು ಪಶ್ಚಿಮವನ್ನು ಗುರುತಿಸುವ ಇನ್ನೊಂದು ಸುಲಭ ವಿಧಾನವೆಂದರೆ ಸೂರ್ಯ ಉದಯಿಸುವ ದಿಕ್ಕು ಪೂರ್ವವಾದರೆ ಸೂರ್ಯ ಮುಳುಗುವ ಅಂದ್ರೆ ಸೂರ್ಯಾಸ್ತ ಆಗೋ ದಿಕ್ಕು ಪಶ್ಚಿಮ ಆಗಿರುತ್ತದೆ. ಈ 4 ದಿಕ್ಕುಗಳ ನಡುವಿನ ದಿಕ್ಕುಗಳನ್ನು ಅಂತರ್ ದಿಕ್ಕುಗಳು ಅಂತ ಕರೆಯಲಾಗತ್ತೆ. ಅದನ್ನ ವಾಯುವ್ಯ, ಈಶಾನ್ಯ, ಆಗ್ನೇಯ ಮತ್ತು ನೈಋತ್ಯ ಅಂತ ಕರಿತಿವಿ. ಹಾಗಾದ್ರೆ ಈ ದಿಕ್ಕುಗಳನ್ನ ನಾವು ಯಾವುದ್ರಲ್ಲಿ ಕಂಡು ಹಿಡಿಬಹುದು, ಅದಕ್ಕೊಂದು ಸಾಧನ ಬೇಕೆ ಬೇಕು ಅದನ್ನ ನಾವು ಕಂಪಾಸ್ ಅಂತ ಹೇಳ್ತೀವಿ. ಭೂಮಿಯು ದೊಡ್ಡ ಒಂದು ಮ್ಯಾಗ್‌ನೆಟ್ ತರಹ ಕೆಲ್ಸ ಮಾಡತ್ತೆ. ಇದನ್ನೇ ಉಪಯೋಗಿಸಿಕೊಂಡು ಕಂಪಾಸ್ ದಿಕ್ಕುಗಳನ್ನು ಸೂಚಿಸುತ್ತದೆ. ಕಂಪಾಸ್ ಸಾಧನ ಕಂಡು ಹಿಡಿಯುವ ಮುಂಚೆ ಸೂರ್ಯನ ಸ್ಥಾನ, ನಕ್ಷತ್ರಗಳು, ಹಕ್ಕಿಗಳ ವಲಸೆಯ ರೀತಿ ಅಥವಾ ಜಾಗದ ಗುರುತು ಬಳಸಿ ಪ್ರವಾಸ ಮಾಡುತ್ತಿದ್ದರು. ಆದರೆ ಮೋಡಗಳು ತುಂಬಾ ಇದ್ದಾಗ ಸೂರ್ಯ, ನಕ್ಷತ್ರ ಕಾಣಿಸದೇ ಭೂಮಿಯ ಮೇಲಿನ ದ್ವೀಪಗಳು ಇತ್ಯಾದಿ ಗುರುತು ಆಧರಿಸಿ ಸಮುದ್ರದ ಪಯಣ ನಡೆಸಬೇಕಾಗಿತ್ತು. ಈ ಕಂಪಾಸ್ ಕಂಡು ಹಿಡಿದಿದ್ದು ೨೦೦೦ ವರ್ಷಗಳ ಹಿಂದೆ ಚೀನಾದಲ್ಲಿ. ಆಗ ಹಾನ್ ವಂಶ ಆಳುತ್ತಿದ್ದ ಕಾಲ. ನೈಸರ್ಗಿಕವಾಗಿ ಚುಂಬಕ ಶಕ್ತಿ ಇರುವ ಸೂಜಿಗಲ್ಲು ಬಳಸಿ ದಿಕ್ಕುಗಳ ಪತ್ತೆ ಮಾಡುತ್ತಿದ್ದರು. ಇದನ್ನು ಮನೆ ಕಟ್ಟುವಾಗ ಇತರ ಉದ್ದೇಶಗಳಿಗೆ ಬಳಸಲಾಗುತ್ತಿತ್ತು. ತಿರುಗಾಟದ ಸಹಾಯಕ್ಕೆ ಬಳಸಲಾರಂಭಿಸಿದ್ದು ೧೧ನೇ ಶತಮಾನದಲ್ಲಿ. ಅಂದಾಜು ೯೫೦ ವರ್ಷಗಳ ಹಿಂದೆ ಸಾಂಗ್ ವಂಶ ಆಳ್ವಿಕೆಯಲ್ಲಿ. ಹಿಂದೂ ಸಂಸ್ಕೃತಿಯ ಪ್ರಕಾರ 10 ದಿಕ್ಕುಗಳು. ಈ ಪ್ರತಿಯೊಂದು ದಿಕ್ಕುಗಳಿಗೂ ಒಬ್ಬ ದಿಕ್ ಪಾಲಕರಿದ್ದಾರೆ. ಉತ್ತರಕ್ಕೆ ಕುಬೇರ, ದಕ್ಷಿಣಕ್ಕೆ ಯಮ, ಪೂರ್ವಕ್ಕೆ ಇಂದ್ರ, ಪಶ್ಚಿಮಕ್ಕೆ ವರುಣ, ಉತ್ತರ ಪೂರ್ವಕ್ಕೆ ಈಶನ, ದಕ್ಷಿಣ-ಪೂರ್ವಕ್ಕೆ ಅಗ್ನಿ, ಉತ್ತರ ಪಶ್ಚಿಮಕ್ಕೆ ವಾಯು, ದಕ್ಷಿಣ-ಪಶ್ಚಿಮಕ್ಕೆ ನಿರ್ರ್ತಿ, ಮೇಲೆ ಬ್ರಹ್ಮ, ಕೆಳಗೆ ಪಾತಾಳ ಲೋಕಕ್ಕೆ ವಿಷ್ಣು. ಅಂತರ್ ದಿಕ್ಕುಗಳ ಹೆಸರು ಆಯಾ ದಿಕ್ಪಾಲಕರ ಹೆಸರಿನಿಂದ ಕರೆಯಲಾಗತ್ತೆ. ಸಾಮಾನ್ಯವಾಗಿ ಮನೆ ಕ

    9 min

About

Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.